ಎಂಟಿಬಿ 1,195 ಕೋಟಿ ರೂಪಾಯಿ ಒಡೆಯ
Team Udayavani, Nov 16, 2019, 3:03 AM IST
ಹೊಸಕೋಟೆ: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹಾಗೂ ಪತ್ನಿ ಎಂ.ಶಾಂತಕುಮಾರಿ ಅವರ ಒಟ್ಟು ಆಸ್ತಿ 1,195 ಕೋಟಿ ರೂ.ಗಳಾಗಿವೆ. ಈ ಪೈಕಿ, ಎಂಟಿಬಿ ಎಸ್ಟೇಟ್ಸ್ ಆ್ಯಂಡ್ ಪ್ರಾಪರ್ಟಿಸ್ನ ಪಾಲುದಾರಿಕೆ ಸಂಸ್ಥೆಯಲ್ಲಿ ಒಟ್ಟು 100.54 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ.
3.71 ಕೋಟಿ ರೂ.ಮೌಲ್ಯದ 3606 ಗ್ರಾಂ.ಚಿನ್ನಾಭರಣ, 85 ಕ್ಯಾರೆಟ್ ವಜ್ರ, 240 ಕೆಜಿ ಬೆಳ್ಳಿಯ ಆಭರಣಗಳಿವೆ. 57.49 ಕೋಟಿ ರೂ.ಗಳ ಕೃಷಿ ಜಮೀನು, 404.33.14 ಕೋಟಿ ರೂ.ಗಳ ಕೃಷಿಯೇತರ ಜಮೀನು, 79 ಕೋಟಿ ರೂ.ಗಳ ವಾಸದ ಕಟ್ಟಡಗಳು, 96.12 ಲಕ್ಷ ರೂ.ಮೌಲ್ಯದ ಬೆಂಜ್ ಕಾರ್, 1.73 ಕೋಟಿ ರೂ.ಗಳ ಮೌಲ್ಯದ ಪೋರ್ಶೆ ಕಾರ್ ಒಳಗೊಂಡಂತೆ ಒಟ್ಟು 4.26 ಕೋಟಿ ರೂ.ಗಳ 7 ಕಾರ್ಗಳಿವೆ.
ಪಕ್ಷೇತರ ಅಭ್ಯರ್ಥಿ ಶರತ್ ಕುಮಾರ್ ಬಚ್ಚೇಗೌಡ ಅವರು ತಮ್ಮ ಹಾಗೂ ಪತ್ನಿ ಪ್ರತಿಭಾ ಶರತ್ಗೌಡರ ಹೆಸರಿನಲ್ಲಿ ಒಟ್ಟು 138.15 ಕೋಟಿ ರೂ.ಗಳ ಆಸ್ತಿ ಹೊಂದಿದ್ದಾರೆ. 1.30 ಕೋಟಿ ರೂ.ಗಳ ಮೌಲ್ಯದ ಚಿನ್ನಾಭರಣ, ಬೆಳ್ಳಿ, ಡೈಮಂಡ್ ಹೊಂದಿದ್ದಾರೆ. ತಮ್ಮ ಹೆಸರಿನಲ್ಲಿ 30.24 ಲಕ್ಷ ರೂ.ಮೌಲ್ಯದ ಫಾರ್ಚುನರ್ ಕಾರ್, 22 ಲಕ್ಷ ರೂ.ಮೌಲ್ಯದ ಇನ್ನೋವಾ ಕ್ರಿಸ್ಟಾ, ತಮ್ಮ ಪತ್ನಿ ಹೆಸರಿನಲ್ಲಿ 52 ಲಕ್ಷ ರೂ.ಮೌಲ್ಯದ ಬೆಂಜ್ ಕಾರ್ ಹೊಂದಿದ್ದಾರೆ.