Udayavni Special

ಮುಂಬೈ ಯುವತಿಯ ಮಾನಭಂಗ


Team Udayavani, Dec 27, 2018, 11:25 AM IST

rape.jpg

ಬೆಂಗಳೂರು: ವೀಕೆಂಡ್‌ ಪಾರ್ಟಿ ಬಳಿಕ ಮುಂಬೈ ಮೂಲದ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಪದವೀಧರ ಯುವತಿಯನ್ನು ತನ್ನ ಮನೆಗೆ ಕರೆದೊಯ್ದು ಪ್ರತಿಷ್ಠಿತ ಹೋಟೆಲ್‌ನ ಮುಖ್ಯ ಶೆಫ್ (ಬಾಣಸಿಗ) ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನವೆಂಬರ್‌ 18ರಂದು ಘಟನೆ ನಡೆದಿದ್ದು, ಅತ್ಯಾಚಾರ ಘಟನೆಯಿಂದ ಮಾನಸಿಕ ಖನ್ನತೆಗೆ ಒಳಗಾಗಿದ್ದ ಯುವತಿ, ವೈದ್ಯರ ಬಳಿ ಕೌನ್ಸೆಲಿಂಗ್‌ ಪಡೆದು ಚೇತರಿಸಿಕೊಂಡಿದ್ದು, ತಡವಾಗಿ ದೂರು ನೀಡಿದ್ದಾರೆ. ಯುವತಿ ದೂರು ಆಧರಿಸಿ ಕೇರಳ ಮೂಲದ ಹಯಾನ್‌ ಬಬೂಲ್‌ (33) ಎಂಬಾತನ್ನು ಬಂಧಿಸಿರುವ ಅಶೋಕ್‌ ನಗರ ಠಾಣೆ ಪೊಲೀಸರು
ತನಿಖೆ ಮುಂದುವರಿಸಿದ್ದಾರೆ.

ನವೆಂಬರ್‌ 18ರಂದು ಘಟನೆ ನಡೆದಿದ್ದು, ಅತ್ಯಾಚಾರ ಘಟನೆಯಿಂದ ಮಾನಸಿಕ ಖನ್ನತೆಗೆ ಒಳಗಾಗಿದ್ದ ಯುವತಿ ವೈದ್ಯರ ಬಳಿ ಕೌನ್ಸಿಲಿಂಗ್‌ ಪಡೆದು ಚೇತರಿಸಿಕೊಂಡಿದ್ದು, ತಡವಾಗಿ ದೂರು ನೀಡಿರುವುದಾಗಿ ಯುವತಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆನಡಾಗೆ ಹಾರುವ ಆಸೆ!: ಸಂತ್ರಸ್ತೆ ಯುವತಿ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಪದವಿ ಪೂರ್ಣಗೊಳಿಸಿ ಕಳೆದ ಆಗಸ್ಟ್‌ ತಿಂಗಳಿನಲ್ಲಿ ಆಸ್ಟಿನ್‌ ಟೌನ್‌ನಲ್ಲಿರುವ ಹೋಟೆಲ್‌ ಒಂದರಲ್ಲಿ ಆರು ತಿಂಗಳ ಅಪ್ರಂಟೀಸ್‌ (ತರಬೇತಿ)ಗಾಗಿ ಕಳೆದ ಆಗಸ್ಟ್‌ ತಿಂಗಳಿನಲ್ಲಿ ಸೇರಿಕೊಂಡಿದ್ದರು. ಹೋಟೆಲ್‌ನ ಮುಖ್ಯ ಶೆಫ್ ಆಗಿದ್ದ ಹಯಾನ್‌ ಬಬೂಲ್‌, ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದರು. ಹೀಗಾಗಿ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದೆ. ಇಬ್ಬರೂ ಆಗಾಗ ಊಟಕ್ಕೆ ಒಟ್ಟಿಗೇ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.

“ನವೆಂಬರ್‌ 18ರಂದು ರಾತ್ರಿ ವೀಕೆಂಡ್‌ ಪಾರ್ಟಿಗಾಗಿ ಮನೆಗೆ ಬರುವಂತೆ ಹಯಾನ್‌ ಆಹ್ವಾನಿಸಿದ್ದ. ಅದರಂತೆ ನಾನು ಆಸ್ಟಿನ್‌ಟೌನ್‌ನಲ್ಲಿರುವ ಆತನ ಮನೆಗೆ ತೆರಳಿದ್ದೆ. ಪಾರ್ಟಿ ಮುಗಿದಾಗ ತಡರಾತ್ರಿಯಾಗಿತ್ತು. ಹೀಗಾಗಿ ಅವರ ಮನೆಯಲ್ಲೇ ಇದ್ದ ಪ್ರತ್ಯೇಕ ಕೋಣೆಯಲ್ಲಿ ಉಳಿದುಕೊಂಡಿದ್ದೆ’. ಮುಂಜಾನೆ ಮೂರು ಗಂಟೆ ಸುಮಾರಿಗೆ ನಿದ್ರೆಯಲ್ಲಿದ್ದ ಯಾರೋ ನನಗೆ ಮುತ್ತು ನೀಡಿದ ಅನುಭವ ಆಯಿತು. ಎಚ್ಚರಗೊಂಡು ನೋಡಿದರೆ,
ಹಯಾನ್‌ ನನ್ನ ಪಕ್ಕದಲ್ಲಿದ್ದ. ಗಾಬರಿಗೊಂಡು ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸಿದೆ. ಆದರೆ ಆತ ನನ್ನನ್ನು ಬಿಡದೇ, ಬಲವಂತವಾಗಿ ಅತ್ಯಾಚಾರ ಎಸಗಿದ,’ ಎಂದು ಯುವತಿ ಆರೋಪಿಸಿದ್ದಾಳೆ ಎಂದು
ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಘಟನೆಯಿಂದ ಖನ್ನತೆ, ಕೌನ್ಸೆಲಿಂಗ್‌: “ತರಬೇತಿ ಪೂರ್ಣಗೊಂಡ ಬಳಿಕ ಕೆನಡಾಗೆ ತೆರಳಲು ಸಜ್ಜಾಗಿದ್ದ ನಾನು, ಹಯಾನ್‌ ಎಸಗಿದ ಕೃತ್ಯದಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದೆ. ಹೀಗಾಗಿ, ಅಂದಿನಿಂದ ಕೆಲಸಕ್ಕೆ ಹೋಗುವುದನ್ನೇ ನಿಲ್ಲಿಸಿಬಿಟ್ಟೆ. ಬಳಿಕ, ಆಪ್ತ ಸಮಾಲೋಚಕರ ಬಳಿ ತೆರಳಿ ಕೌನ್ಸೆಲಿಂಗ್‌ಗೆ ಒಳಗಾದೆ. ನಂತರ ಪೋಷಕರ ಜತೆ ಚರ್ಚಿಸಿ ದೂರು ನೀಡಿದೆ,’ ಎಂದು ಯುವತಿ ಹೇಳಿದ್ದಾರೆ.

ಆರೋಪಿ ಹಯಾತ್‌ ವಿರುದ್ಧ ಸಂತ್ರಸ್ತೆ ನೀಡಿದ ದೂರಿನ ಅನ್ವಯ ಹೋಟೆಲ್‌ ಆತನನ್ನು ಕೆಲಸದಿಂದ ತೆಗೆದು ಹಾಕಿತ್ತು. ಆರೋಪಿಗೆ ವಿವಾಹವಾಗಿದ್ದು, ಪತ್ನಿ ಹಾಗೂ ಎರಡು ತಿಂಗಳ ಮಗು ಇದ್ದು, ಅವರು ಕೇರಳಕ್ಕೆ ತೆರಳಿದ್ದರು. ಈ ಸಂಧರ್ಭದಲ್ಲಿ ಯುವತಿಯನ್ನು ಹಯಾತ್‌ ಮನೆಗೆ ಕರೆಸಿಕೊಂಡಿದ್ದ. ಪಾರ್ಟಿ ಬಳಿಕ ಮದ್ಯದ ಅಮಲಿನಲ್ಲಿ ತಪ್ಪು ನಡೆದಿದೆ ಎಂದು ಆರೋಪಿ ಹೇಳುತ್ತಿದ್ದಾನೆ ಎಂದು ಅಧಿಕಾರಿ ಹೇಳಿದರು.

ಯುವತಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
 ಡಿ.ದೇವರಾಜು, ಕೇಂದ್ರ ವಿಭಾಗದ ಡಿಸಿಪಿ

 ಮಂಜುನಾಥ್‌ ಲಘುಮೇನಹಳ್ಳಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

24 ಸಿಐಎಸ್‌ಎಫ್‌ ಜವಾನರಿಗೆ ಸೋಂಕು

24 ಸಿಐಎಸ್‌ಎಫ್‌ ಜವಾನರಿಗೆ ಸೋಂಕು

ಕೋವಿಡ್ ಕಾಲದಲ್ಲೊಂದು ಕ್ರಿಕೆಟ್‌ ಕದನ ; 4 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಚಾಲನೆ

ಕೋವಿಡ್ ಕಾಲದಲ್ಲೊಂದು ಕ್ರಿಕೆಟ್‌ ಕದನ ; 4 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಚಾಲನೆ

ಪುತ್ತೂರು: ಆವರಣ ಗೋಡೆ ಕುಸಿದು ಮಹಿಳೆ ಸಾವು

ಪುತ್ತೂರು: ಆವರಣ ಗೋಡೆ ಕುಸಿದು ಮಹಿಳೆ ಸಾವು

ದ.ಕ.: ಕೋವಿಡ್ 19ನಿಂದ ಮತ್ತೊಬ್ಬರ ಸಾವು ; ಉಡುಪಿ ಜಿಲ್ಲೆ : 28 ಪಾಸಿಟಿವ್‌

ದ.ಕ.: ಕೋವಿಡ್ 19ನಿಂದ ಮತ್ತೊಬ್ಬರ ಸಾವು ; ಉಡುಪಿ ಜಿಲ್ಲೆ : 28 ಪಾಸಿಟಿವ್‌

ನನ್ನಿಷ್ಟದ ಸಿನೆಮಾ ಯುವ ಜನರ ಅಯ್ಕೆ: ಮುತ್ತಿನ ಹಾರ ; ಬದುಕಿನ ಸವಾಲು ತೆರೆದಿಡುವ ಚಿತ್ರ

ನನ್ನಿಷ್ಟದ ಸಿನೆಮಾ ಯುವ ಜನರ ಅಯ್ಕೆ: ಮುತ್ತಿನ ಹಾರ ; ಬದುಕಿನ ಸವಾಲು ತೆರೆದಿಡುವ ಚಿತ್ರ

nternet-slow-2

ನಿಮ್ಮ ಇಂಟರ್ನೆಟ್ ಸ್ಲೋನಾ..? ಹಾಗಾದ್ರೆ ಹೀಗೆ ಮಾಡಿ

ಗುಲ್ವಾಡಿ; ಬಾರಿ ಮಳೆಗೆ ಗುಡ್ಡ ಕುಸಿದು ಮನೆಗೆ ಹಾನಿ

ಗುಲ್ವಾಡಿ; ಭಾರಿ ಮಳೆಗೆ ಗುಡ್ಡ ಕುಸಿದು ಮನೆಗೆ ಹಾನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾಮಾಜಿಕ ಅಂತರ ಮರೆತು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಬರ್ತ್ ಡೇ ಪಾರ್ಟಿ!

ಸಾಮಾಜಿಕ ಅಂತರ ಮರೆತು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಬರ್ತ್ ಡೇ ಪಾರ್ಟಿ!

ಶೀಘ್ರದಲ್ಲಿ ಪ್ರತಿ ಜಿಲ್ಲೆಗೂ ಪಶು ಸಂಪತ್ತು ರಕ್ಷಣೆಗೆ ಆ್ಯಂಬುಲೆನ್ಸ್ : ಪ್ರಭು ಬಿ.ಚವ್ಹಾಣ್

ಶೀಘ್ರದಲ್ಲಿ ಪ್ರತಿ ಜಿಲ್ಲೆಗೂ ಪಶು ಸಂಪತ್ತು ರಕ್ಷಣೆಗೆ ಆ್ಯಂಬುಲೆನ್ಸ್ : ಪ್ರಭು ಬಿ.ಚವ್ಹಾಣ್

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ 9ನೇ ಬಲಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ 9ನೇ ಬಲಿ

ರಾಜ್ಯದಲ್ಲಿಂದು 1478 ಜನರಿಗೆ ಸೋಂಕು ದೃಢ: 15 ಸಾವಿರ ಹತ್ತಿರ ತಲುಪಿದ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿಂದು 1478 ಜನರಿಗೆ ಸೋಂಕು ದೃಢ: 15 ಸಾವಿರ ಹತ್ತಿರ ತಲುಪಿದ ಸೋಂಕಿತರ ಸಂಖ್ಯೆ

ಬಿಬಿಎಂಪಿಯ ಮೇಯರ್ ಆಪ್ತ ಸಹಾಯಕರಿಗೆ ಸೋಂಕು ದೃಢ: ಮೇಯರ್ ಸೇರಿದಂತೆ ಹಲವರಿಗೆ ಕ್ವಾರಂಟೈನ್

ಬಿಬಿಎಂಪಿಯ ಮೇಯರ್ ಆಪ್ತ ಸಹಾಯಕರಿಗೆ ಸೋಂಕು ದೃಢ: ಮೇಯರ್ ಸೇರಿದಂತೆ ಹಲವರಿಗೆ ಕ್ವಾರಂಟೈನ್

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani


ಹೊಸ ಸೇರ್ಪಡೆ

24 ಸಿಐಎಸ್‌ಎಫ್‌ ಜವಾನರಿಗೆ ಸೋಂಕು

24 ಸಿಐಎಸ್‌ಎಫ್‌ ಜವಾನರಿಗೆ ಸೋಂಕು

samagra

ಕೋವಿಡ್‌ 19 ನಿರ್ವಹಣೆ ಸಮಗ್ರ ಮಾಹಿತಿ ನೀಡಿ

ಕೋವಿಡ್ ಕಾಲದಲ್ಲೊಂದು ಕ್ರಿಕೆಟ್‌ ಕದನ ; 4 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಚಾಲನೆ

ಕೋವಿಡ್ ಕಾಲದಲ್ಲೊಂದು ಕ್ರಿಕೆಟ್‌ ಕದನ ; 4 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಚಾಲನೆ

ceo bank

ಬ್ಯಾಂಕ್‌ ಅವ್ಯವಹಾರದಲ್ಲಿ ಗಣ್ಯರು ಭಾಗಿ?

ಪುತ್ತೂರು: ಆವರಣ ಗೋಡೆ ಕುಸಿದು ಮಹಿಳೆ ಸಾವು

ಪುತ್ತೂರು: ಆವರಣ ಗೋಡೆ ಕುಸಿದು ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.