ಮುಸ್ಲಿಮರ ಧರ್ಮ ಸಮ್ಮೇಳನಕ್ಕೆ ಕಲಾದಗಿಯಲ್ಲಿ ಸಿದ್ಧತೆ

Team Udayavani, Feb 3, 2019, 1:40 AM IST

ಬಾಗಲಕೋಟೆ: ಬ್ರಿಟಿಷರ ಆಳ್ವಿಕೆಯಲ್ಲಿ ಜಿಲ್ಲಾ ಕೇಂದ್ರವಾಗಿದ್ದ ತಾಲೂಕಿನ ಕಲಾದಗಿಯಲ್ಲಿ ಮುಸ್ಲಿಂ ಸಮುದಾಯದ ದಕ್ಷಿಣ ಭಾರತ ಮಟ್ಟದ ಬಡೇ ಇಜ್ತೆಮಾ (ಧರ್ಮ ಸಮ್ಮೇಳನ)ಕ್ಕೆ ಸಿದ್ಧತೆ ಜೋರಾಗಿ ನಡೆಯುತ್ತಿದೆ.

ಕಲಾದಗಿಯಿಂದ 3 ಕಿ.ಮೀ. ದೂರದಲ್ಲಿರುವ ಪುನರ್‌ವಸತಿ ಕೇಂದ್ರದ ಅಕ್ಕ-ಪಕ್ಕದ ಸುಮಾರು 650 ಎಕರೆ ಕೃಷಿ ಭೂಮಿಯಲ್ಲಿ ಫೆ. 16ರಿಂದ 18ರವರೆಗೆ 3 ದಿನ ನಡೆಯುವ ಈ ಇಜ್ತೆಮಾಕ್ಕೆ ಪೂರ್ವ ಸಿದ್ಧತೆ ನಡೆದಿದೆ. 82 ಎಕರೆ ಪ್ರದೇಶದಲ್ಲಿ (25 ಲಕ್ಷ ಚದರ ಅಡಿ ಸುತ್ತಳತೆ) ಬೃಹತ್‌ ಪೆಂಡಾಲ್‌ ಹಾಕಲಾಗುತ್ತಿದೆ. ದಕ್ಷಿಣ ಭಾರತದ ಕರ್ನಾಟಕ, ಮಹಾರಾಷ್ಟ್ರ ಸಹಿತ ವಿವಿಧೆಡೆಯ ಮುಸ್ಲಿಂ ಸಮುದಾಯದವರು ಪಾಲ್ಗೊಳ್ಳಲಿದ್ದು, ಅವರಿಗೆ ಊಟ-ವಸತಿ ವ್ಯವಸ್ಥೆ ಕಲ್ಪಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಇದೊಂದು ಧರ್ಮ ಸಮ್ಮೇಳನ. ಇಲ್ಲಿ ಘೋಷಣೆಗಳು, ಮೆರವಣಿಗೆ ಇರುವುದಿಲ್ಲ. ಕೇವಲ ಕುರಾನ್‌, ಮೊಹ್ಮದ ಪೈಗಂಬರ ಕುರಿತ ಪ್ರವಚನ ನಡೆಯುತ್ತದೆ. ಜತೆಗೆ ಮುಸ್ಲಿಂ ಬಾಂಧವರು, ಇತರೆ ಸಮಾಜ ಬಾಂಧವರೊಂದಿಗೆ ಸೌಹಾರ್ದತೆಯಿಂದ ಜೀವನ ನಡೆಸುವ ಕುರಿತು ಧರ್ಮ ಗುರುಗಳು ತಿಳಿವಳಿಕೆಯ ಬೋಧನೆ ಮಾಡುತ್ತಾರೆ. ನಿತ್ಯ ಸಾಮೂಹಿಕ ಪ್ರಾರ್ಥನೆ, ಪ್ರವಚನ ಬಿಟ್ಟರೆ ಬೇರೆ ಯಾವ ಕಾರ್ಯಕ್ರಮಗಳೂ ನಡೆಯುವುದಿಲ್ಲ. ಈ ಕುರಿತು ಕೆಲವರಿಗೆ ತಪ್ಪು ತಿಳಿವಳಿಕೆಯಿದೆ. ವಿರೋಧ ಮಾಡುವವರು, ಸ್ಥಳಕ್ಕೆ ಬಂದು ನೋಡಬೇಕು. ಈ ಕಾರ್ಯಕ್ರಮಕ್ಕೆ ರಾಜಕೀಯ ವ್ಯಕ್ತಿಗಳು, ಮಹಿಳೆಯರಿಗೆ ಪ್ರವೇಶವಿಲ್ಲ. ಯಾವುದೇ ಧರ್ಮ-ಸಮಾಜದ ಪುರುಷರು ಬಂದು ಭಾಗವಹಿಸಬಹುದು. ಉರ್ದು ಭಾಷೆಯಲ್ಲಿ ನಡೆಯುವ ಪ್ರವಚನವನ್ನು ಕನ್ನಡಕ್ಕೆ ಅನುವಾದ ಮಾಡಲೂ ವ್ಯವಸ್ಥೆ ಮಾಡಲಾಗಿದೆ ಎಂದು ಉಸ್ತುವಾರಿ ನೋಡಿಕೊಳ್ಳುತ್ತಿರುವ ಮೊಹ್ಮದಯಾಸೀನ್‌ ಮೊಮಿನ್‌ ತಿಳಿಸಿದರು.

ಲಕ್ಷಾಂತರ ಜನರಿಗಾಗಿ ಕಾರ್ಯಕ್ರಮ ನಡೆಯುವ ಬೃಹತ್‌ ಪೆಂಡಾಲ್‌ ಸುತ್ತಲಿನ ನಾಲ್ಕು ಕಡೆ ಒಟ್ಟು 2 ಸಾವಿರ ತಾತ್ಕಾಲಿಕ ಶೌಚಾಲಯ ನಿರ್ಮಿಸಲಾಗುತ್ತಿದೆ. ಇದಕ್ಕೆ ಇಂಗುಗುಂಡಿ ವ್ಯವಸ್ಥೆ ಮಾಡಿದ್ದು, 10 ಸಕ್ಕಿಂಗ್‌ ಯಂತ್ರವನ್ನೂ ತರಿಸಲಾಗುತ್ತಿದೆ. ಎಂಟು ವೈದ್ಯಕೀಯ ಕೇಂದ್ರಗಳು, 80 ಕುಡಿಯುವ ನೀರು ವಿತರಣೆ ಮಾಡುವ ಕೇಂದ್ರಗಳು, ಎರಡು ಆಂಬ್ಯುಲೆನ್ಸ್‌, 34 ಊಟದ ಸ್ಟಾಲ್‌ಗ‌ಳು, ಒಂದು ಸಾವಿರ ಚಿಕ್ಕ ಚಿಕ್ಕ ಹೊಟೇಲ್‌ಗ‌ಳು, 60 ಅಡಿ ಸುತ್ತಳತೆಯ ಎಂಟು ಕೃಷಿ ಹೊಂಡ ತೋಡಲಾಗಿದೆ. ಕುಡಿಯುವ ನೀರಿಗಾಗಿ 1 ಕೋಟಿ ರೂ. ಮೊತ್ತದ ಒಂದು ಲೀಟರ್‌ನ ಶುದ್ಧ ಕುಡಿಯುವ ನೀರಿನ ಬಾಟಲ್‌ಗ‌ಳನ್ನು ಖರೀದಿಸಲಾಗಿದೆ.

ಸಮ್ಮೇಳನಕ್ಕೆ ಕಲಾದಗಿಯ ಸುಮಾರು 78 ರೈತರ, 630 ಎಕರೆಯಷ್ಟು ಭೂಮಿಯನ್ನೇ ಬಳಕೆ ಮಾಡಲಾಗುತ್ತಿದೆ. ಈ ಭೂಮಿಯಲ್ಲಿ ಒಟ್ಟು 16 ಕೊಳವೆ ಬಾವಿಗಳಿವೆ. ಆ ನೀರನ್ನು ಎಂಟು ಕೃಷಿ ಹೊಂಡಗಳಿಗೆ ತುಂಬಿಸಿಕೊಂಡು, 3 ದಿನ ಉಪಯೋಗಿಸಲಾಗುವುದು. ಪ್ರತಿದಿನ ಶಾಖಾಹಾರಿ ಊಟ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇಲ್ಲಿ ಹಾಕಲಿರುವ ಹೊಟೇಲ್‌ಗ‌ಳಿಗೂ ಮಾಂಸಾಹಾರ ನೀಡದಂತೆ ಸೂಚನೆ ನೀಡಲಾಗಿದೆ. ಒಟ್ಟಾರೆ, ಇದೊಂದು ಸೌಹಾರ್ದಯುತ ಜೀವನಕ್ಕೆ ಬೋಧನೆ ಮಾಡುವ ಧರ್ಮ ಸಮ್ಮೇಳನ ಆಗಿದೆ ಎಂದು ಮೋಮಿನ್‌ ತಿಳಿಸಿದರು.

ಶ್ರೀಶೈಲ ಕೆ. ಬಿರಾದಾರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ 17 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಖಾತೆ ಹಂಚಿಕೆಗಾಗಿ ಹಗ್ಗಜಗ್ಗಾಟ...

  • ಬೆಂಗಳೂರು: ಕಾರು ಪಲ್ಟಿಯಾಗಿ ನಾಲ್ವರು ದುರ್ಮರಣಗೊಂಡು ಐವರು ಗಾಯಗೊಂಡ ಘಟನೆ ದೇವನಹಳ್ಳಿ ತಾಲೂಕಿನ ಹಂದ್ರಹಳ್ಳಿಯಲ್ಲಿ ನಡೆದಿದೆ. ನಂದಿ ಬೆಟ್ಟಕ್ಕೆ ತೆರಳುತ್ತಿದ್ದ...

  • ಬೆಂಗಳೂರು: ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರ ಜಗಳ ವಿಕೋಪಕ್ಕೆ ತಿರುಗಿದ್ದು, ಗುರು ದೇವೇಗೌಡರ ವಿರುದ್ಧ ಶಿಷ್ಯ ಸಿದ್ದರಾಮಯ್ಯ ಪಾಯಿಂಟ್‌ ಟು ಪಾಯಿಂಟ್‌...

  • ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿಯಾಗುವುದಾಗಿ ಹೇಳಿ ಗುರುವಾರ ರಾತ್ರಿ ದಿಢೀರ್‌...

  • ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಮಾಡೆಲಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಮಾಡೆಲ್‌ವೊಬ್ಬರನ್ನು...

ಹೊಸ ಸೇರ್ಪಡೆ