“ಕೈ’ಗೆ ಸಿಗದ ನಾಗೇಂದ್ರ ಮೊಬೈಲ್‌ ಸ್ವಿಚ್‌ಆಫ್!

Team Udayavani, Jul 9, 2019, 3:03 AM IST

ಬಳ್ಳಾರಿ: ಸಮ್ಮಿಶ್ರ ಸರ್ಕಾರಕ್ಕೆ ಸಂಕಟ ಎದುರಾದ ಬೆನ್ನಲ್ಲೇ ಬಳ್ಳಾರಿ ಗ್ರಾಮೀಣ ಕಾಂಗ್ರೆಸ್‌ ಶಾಸಕ ಬಿ.ನಾಗೇಂದ್ರ ನಾಟ್‌ ರೀಚಬಲ್‌ ಆಗಿದ್ದಾರೆ. ಬೆಂಗಳೂರಿನಲ್ಲೇ ಇದ್ದಾರೆ ಎನ್ನಲಾಗುತ್ತಿದ್ದರೂ ಯಾರ ಕೈಗೂ ಸಿಗದೆ ಇರುವುದರಿಂದ ಕಾಂಗ್ರೆಸ್‌ ನಾಯಕರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದೆ.

ಸಾರ್ವಜನಿಕರ ಸಂಪರ್ಕಕ್ಕೆಂದು ನೀಡಿದ್ದ ಎಲ್ಲ ಮೊಬೈಲ್‌ ಸಂಖ್ಯೆಗಳನ್ನು ಸ್ವಿಚ್‌ಆಫ್‌ ಮಾಡಿಕೊಂಡಿದ್ದು, ಯಾರಿಗೂ ಸಿಗುತ್ತಿಲ್ಲ. ಕಳೆದ ವಾರವಷ್ಟೇ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಕ್ಷೇತ್ರಕ್ಕೆ ಆಗಮಿಸಿದ್ದರು. ಬಳಿಕ ತೆರಳಿದವರು ವಾಪಸ್‌ ಬಂದಿಲ್ಲ. ಅಲ್ಲದೇ ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ. ಅತೃಪ್ತರ ಗುಂಪಿಗೆ ಸೇರಿರಬಹುದೆಂಬ ಆತಂಕ ಕಾಂಗ್ರೆಸ್‌ ನಾಯಕರಿಗೆ ಶುರುವಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ