ಆನ್‌ಲೈನ್‌ನಲ್ಲಿ ಆ್ಯಸಿಡ್ ಖರೀದಿಸಿದ್ದ ನಾಗೇಶ : ತನಿಖೆ ವೇಳೆ ವಿಚಾರ ಬಹಿರಂಗ
Team Udayavani, May 15, 2022, 11:45 PM IST
ಬೆಂಗಳೂರು : ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ನಾಗೇಶ ಕೃತ್ಯ ಎಸಗಲೆಂದೇ ಆನ್‌ಲೈನ್ ಮೂಲಕ ಆ್ಯಸಿಡ್ ಖರೀಸಿದ್ದ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮತ್ತೂಂದೆಡೆ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗನನ್ನು ಚೇತರಿಸಿಕೊಂಡ ಬಳಿಕ ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಹಿಂದೆ ನಾಗೇಶ ಪೀಣ್ಯ ಸಮೀಪದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆಗ ಆ ಕಂಪೆನಿಯವರು ಸೋಲಾರ್ ಸ್ವತ್ಛಗೊಳಿಸಲು ಆನ್‌ಲೈನ್ ಮೂಲಕ ಆ್ಯಸಿಡ್ ಖರೀದಿಸಿದ್ದರು. ಈ ವಿಚಾರ ತಿಳಿದುಕೊಂಡಿದ್ದ ಆರೋಪಿ ನಾಗೇಶ, ಅಲ್ಲಿ ಕೆಲಸ ಬಿಟ್ಟ ಬಳಿಕ ಆ್ಯಸಿಡ್ ಮಾರಾಟ ಮಾಡುವ ಕಂಪೆನಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ. ಅನಂತರ ತಾನೊಂದು ಗಾರ್ಮೆಂಟ್ಸ್ ಆರಂಭಿಸಿದ್ದೇನೆ. ಅಲ್ಲಿನ ಕೆಲ ವಸ್ತುಗಳ ಸ್ವತ್ಛತೆಗಾಗಿ ಆ್ಯಸಿಡ್ ಅಗತ್ಯವಿದೆ ಎಂದು ಹೇಳಿ, 10 ಲೀಟರ್‌ನ 1 ಕ್ಯಾನ್, ಜತೆಗೆ ಪ್ರತ್ಯೇಕ ಒಂದು ಲೀಟರ್‌ನ ಆ್ಯಸಿಡ್ ಖರೀದಿಸಿದ್ದ.
ಆಟೋ ಚಾಲಕರ ಮಾಹಿತಿ
ಆರೋಪಿ ಪತ್ತೆಗಾಗಿ ಪೊಲೀಸರು ಹಲವು ತಂಡಗಳಾಗಿ ಹಗಲಿರುಳು ಕಾರ್ಯಾಚರಣೆ ನಡೆಸುತ್ತಲೇ ಇದ್ದರು. ಜತೆಗೆ ರಾಜ್ಯ, ಹೊರರಾಜ್ಯಗಳಲ್ಲಿ ಕರಪತ್ರ ಹಂಚಿ ಸಾರ್ವಜನಿಕರ ನೆರವು ಕೋರಿದ್ದರು. ಈ ಮಧ್ಯೆ ತಮಿಳುನಾಡಿನ ಗಡಿ ಭಾಗದಲ್ಲಿ ಆಟೋ ಚಾಲಕನೊಬ್ಬ ನಾಗ ತಮಿಳುನಾಡಿನ ಕಡೆ ಹೋಗಿರುವ ಬಗ್ಗೆ ಮೊದಲ ಸುಳಿವು ಕೊಟ್ಟಿದ್ದ. ಅಲ್ಲದೆ,ತಮಿಳುನಾಡಿನ ರಮಣಶ್ರೀ ಆಶ್ರಮದಲ್ಲಿದ್ದ ನಾಗನ ಫೋಟೋವನ್ನು ಆಶ್ರಮಕ್ಕೆ ತೆರಳಿದ್ದ ಆಟೋ ಚಾಲಕನೊಬ್ಬ ತೆಗೆದು ಪೊಲೀಸರಿಗೆ ಕಳುಹಿಸಿದ್ದ.
ಆರೋಪಿ ಕನ್ನಡವನ್ನೇ ಹೆಚ್ಚು ಮಾತನಾಡುತ್ತಿದ್ದ ಬಗ್ಗೆ ಅನುಮಾನಗೊಂಡಿದ್ದ ಚಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ : ಶಾಂತಾಬಾಯಿ-ಮೇಳಕುಂದಿಗೆ ಸಿಐಡಿ ತಲಾಶ್ : ಮುಖ್ಯಶಿಕ್ಷಕ ಕಾಶೀನಾಥ 2ನೇ ಬಾರಿ ಸಿಐಡಿ ವಶಕ್ಕೆ
ಅರ್ಧ ಲೀಟರ್ ಎಸೆದಿದ್ದ
ಎ. 28ರಂದು ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದು, ಅನಂತರ ಮಾರ್ಗಮಧ್ಯೆ ಅರ್ಧ ಲೀಟರ್‌ನ ಆ್ಯಸಿಡ್ ಬಾಟಲಿಯನ್ನು ಎಸೆದು ಪರಾರಿಯಾಗಿದ್ದ. ಬಳಿಕ ನೇರವಾಗಿ ವಕೀಲರನ್ನು ಭೇಟಿಯಾಗಿದ್ದ. ಘಟನೆಯ ತೀವ್ರತೆಯನ್ನು ಅರಿತ ಯಾವ ವಕೀಲರೂ ಆತನ ಪರವಾಗಿ ವಾದ ಮಂಡಿಸಲು ಮುಂದಾಗಿರಲಿಲ್ಲ. ಬಳಿಕ ಆತ ತಮಿಳುನಾಡಿನ ಕಡೆ ಪ್ರಯಾಣ ಬೆಳೆಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಳ್ಳು ಅನ್ನೋದು ಬಿಜೆಪಿಯವರಿಗೆ ರಕ್ತಗತವಾಗಿದೆ : ರಾಮಲಿಂಗಾ ರೆಡ್ಡಿ
ಫ್ರೀಡಂ ಪಾರ್ಕ್ ನಲ್ಲಿ ಆರೋಗ್ಯ ಸಿಬ್ಬಂದಿಗಳ ಪ್ರತಿಭಟನೆ; ಪೂರಕ ಸ್ಪಂದನೆ ಎಂದ ಸಚಿವ
ಸಿದ್ದರಾಮೋತ್ಸವಕ್ಕಿಂತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಿದ್ದತೆ ಮುಖ್ಯವೆಂದ ಡಿಕೆಶಿ
ಕಲಬುರಗಿ- ಯಾದಗಿರಿ ಡಿಸಿಸಿ ಬ್ಯಾಂಕ್ ಗೆ 19 ಕೋ ರೂ ಲಾಭ : ತೇಲ್ಕೂರ
ಕರ್ನಾಟಕ- ಕೊರಿಯಾ ಗಣರಾಜ್ಯ ಬಾಂಧವ್ಯ ವೃದ್ಧಿ: ಸಿಎಂ ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
ಮಹಾ ಚುನಾವಣೆಯತ್ತ ಚಿತ್ತ: ಶಿಂಧೆ ಬಣದ 13, ಬಿಜೆಪಿಯ 25 ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ
ಚಿಕ್ಕೋಡಿ: ವಿದ್ಯುತ್ ಅವಘಡದಿಂದ ವಿದ್ಯಾರ್ಥಿನಿ ಸಾವು: ಪರಿಹಾರಕ್ಕಾಗಿ ಬೃಹತ್ ಪ್ರತಿಭಟನೆ
ಸುಳ್ಳು ಅನ್ನೋದು ಬಿಜೆಪಿಯವರಿಗೆ ರಕ್ತಗತವಾಗಿದೆ : ರಾಮಲಿಂಗಾ ರೆಡ್ಡಿ
ಫ್ರೀಡಂ ಪಾರ್ಕ್ ನಲ್ಲಿ ಆರೋಗ್ಯ ಸಿಬ್ಬಂದಿಗಳ ಪ್ರತಿಭಟನೆ; ಪೂರಕ ಸ್ಪಂದನೆ ಎಂದ ಸಚಿವ
ಕೆಲಸಕಿದ್ದ ಮನೆಯಲ್ಲಿ ನಗನಾಣ್ಯ ಕದ್ದ ತಾಯಿ-ಮಗಳು