“ನಮ್ಮ ವೈದ್ಯಶಾಲಾ’ ಸಂಸ್ಥೆಗೆ ಪ್ರಶಸ್ತಿ
Team Udayavani, Jun 4, 2019, 3:03 AM IST
ಬೆಂಗಳೂರು: ನಗರ ಮೂಲದ “ನಮ್ಮ ವೈದ್ಯಶಾಲಾ’ ಸಂಸ್ಥೆ ಹೋಮಿಯೋಪಥಿ ಚಿಕಿತ್ಸೆಯಲ್ಲಿ ನೀಡುತ್ತಿರುವ ಸುದೀರ್ಘ ವೈದ್ಯಕೀಯ ಸೇವೆಯನ್ನು ಹಾಗೂ ನೂತನ ಆವಿಷ್ಕಾರದ ನ್ಯಾನೋ ಜೆನೆಟಿಕ್ ಕಾಸ್ಟಿಟ್ಯೂಷನಲ್ ಹೋಮಿಯೋಪಥಿ ಚಿಕಿತ್ಸೆಯನ್ನು ಗುರುತಿಸಿ ಟೈಮ್ಸ್ ಸಮೂಹ 2019ನೇ ಸಾಲಿನ “Excellence Award in Medical Service & Treatments in the field of Homeopathy” ಪ್ರಶಸ್ತಿ ನೀಡಿ ಸನ್ಮಾನಿಸಿದೆ.
ಬಾಲಿವುಡ್ ಖ್ಯಾತ ಕಲಾವಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅನುಪಮ್ ಖೇರ್ ಅವರು ಸಂಸ್ಥೆಯ ವೈದ್ಯರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಈ ನೂತನ ಆವಿಷ್ಕಾರದ ಚಿಕಿತ್ಸಾ ಪದ್ಧತಿಯಿಂದ ಸಾವಿರಾರು ರೋಗಿಗಳನ್ನು ನಮ್ಮ ವೈದ್ಯಶಾಲಾ ವಾಸಿ ಮಾಡಿದ್ದಲ್ಲದೆ, ಸಂತೋಷದಾಯಕ ಜೀವನ ನಡೆಸುವಲ್ಲಿ ಶ್ರಮಿಸಿದೆ.