ರಾಷ್ಟ್ರೀಯ ಮಿಲಿಟರಿ ಶಾಲೆ “ವೈವಿಧ್ಯದಲ್ಲಿ ಏಕತೆ’ಯ ಪ್ರತೀಕ: ರಾಷ್ಟ್ರಪತಿ ಕೋವಿಂದ್‌

Team Udayavani, Jun 13, 2022, 11:52 PM IST

ರಾಷ್ಟ್ರೀಯ ಮಿಲಿಟರಿ ಶಾಲೆ “ವೈವಿಧ್ಯದಲ್ಲಿ ಏಕತೆ’ಯ ಪ್ರತೀಕ: ರಾಷ್ಟ್ರಪತಿ ಕೋವಿಂದ್‌

ಬೆಂಗಳೂರು: ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ರಾಷ್ಟ್ರೀಯ ಮಿಲಿಟರಿ ಶಾಲೆಯು ದೇಶದ ಮೂಲತತ್ವ “ವೈವಿಧ್ಯದಲ್ಲಿ ಏಕತೆ’ಯ ಪ್ರತೀಕವಾಗಿದೆ’ ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ವಿಶ್ಲೇಷಿಸಿದರು.

ಸೋಮವಾರ ನಗರದ ರಾಷ್ಟ್ರೀಯ ಮಿಲಿಟರಿ ಶಾಲೆಯ ಸುವರ್ಣ ಮಹೋತ್ಸವ ಸಂಭ್ರಮಾ ಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಏಳೂವರೆ ದಶಕಗಳಿಂದ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಉದ್ದೇಶಿತ ಶಾಲೆಯು ಈ ಹಿಂದೆ ಸೇನಾ ಸಿಬಂದಿಯ ಮಕ್ಕಳಿಗೆ ಮಾತ್ರ ಸೀಮಿತವಾಗಿತ್ತು. ಬಳಿಕ ಸಾಮಾನ್ಯ ನಾಗರಿಕರ ಮಕ್ಕಳಿಗೂ ಇಲ್ಲಿ ಶಿಕ್ಷಣ ದೊರೆಯುತ್ತಿದೆ. ಪ್ರಸ್ತುತ ಈ ಶಾಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಹಿಡಿದು ಕೇರಳವರೆಗಿನ 23 ರಾಜ್ಯಗಳ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ದೇಶದ ಎಲ್ಲ ಪ್ರದೇಶಗಳ ಸಂಸ್ಕೃತಿ, ಭಾಷೆ, ಆಚರಣೆಗಳು, ಸಂಪ್ರದಾಯಗಳ ಸಮ್ಮಿಲನಕ್ಕೆ ಇದು ವೇದಿಕೆ ಆಗಿದ್ದು, ಆ ಮೂಲಕ “ವೈವಿಧ್ಯದಲ್ಲಿ ಏಕತೆ’ಯನ್ನು ಈ ಶಾಲೆ ಪ್ರತಿನಿಧಿಸುತ್ತದೆ ಎಂದು ಬಣ್ಣಿಸಿದರು.

ತನ್ನ ಸುದೀರ್ಘ‌ ಪಯಣದಲ್ಲಿ ಶ್ರೇಷ್ಠ ನ್ಯಾಯಮೂರ್ತಿಗಳು, ರಾಜ ಕೀಯ ನಾಯಕರು, ನಾಗರಿಕ ಸೇವೆ, ಉದ್ಯಮಿಗಳು, ಕ್ರೀಡೆ, ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅನೇಕ ಕೊಡುಗೆಗಳನ್ನು ನೀಡಿದ ಹೆಗ್ಗಳಿಕೆ ಈ ಶಾಲೆಗೆ ಸಲ್ಲುತ್ತದೆ. ಇದರ ಹಳೆಯ ವಿದ್ಯಾರ್ಥಿಗಳು ರಾಷ್ಟ್ರಪತಿ ಭವನದಲ್ಲೂ ಇದ್ದಾರೆ.

ಮರಣೋತ್ತರವಾಗಿ ಪರಮವೀರ ಚಕ್ರ ಗೌರವಕ್ಕೆ ಪಾತ್ರರಾದ ಕ್ಯಾ| ಗುರ್ಬಾಚನ್‌ಸಿಂಗ್‌ ಸಲಾರಿಯಾ ಕೂಡ ಇದೇ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ರಾಷ್ಟ್ರೀಯ ಮಿಲಿಟರಿ ಶಾಲೆ ತನ್ನದೇ ಆದ ಪರಂಪರೆಯನ್ನು ಹೊಂದಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ವನ್ನು ಹೊಗಳಿದ ರಾಷ್ಟ್ರಪತಿಗಳು, ಕನ್ನಡನಾಡು ಆಧುನಿಕ ಶಿಕ್ಷಣ ಮತ್ತು ತಂತ್ರಜ್ಞಾನದ ಆಗರವಾಗಿ ಹೊರಹೊಮ್ಮಿದೆ. “ಭಾರತ ಆವಿಷ್ಕಾರ ಸೂಚ್ಯಂಕ’ದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. 2021ರ ವರದಿಯೊಂದರ ಪ್ರಕಾರ ಬಂಡವಾಳ ಹೂಡಿಕೆಯಲ್ಲಿ ಕೂಡ ವಿಶ್ವದ ಮೊದಲ ಐದು ನಗರಗಳಲ್ಲಿ ಬೆಂಗಳೂರು ಒಂದಾಗಿದೆ ಎಂದು ಬಣ್ಣಿಸಿದರು.

ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಷ್ಟ್ರಪತಿಗಳ ಪತ್ನಿ ಸವಿತಾ ಕೋವಿಂದ್‌ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಆ್ಯಂಟಿ ಬಯೋಟಿಕ್ : ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಶುಂಠಿ ರಾಮಬಾಣ

ಆ್ಯಂಟಿ ಬಯೋಟಿಕ್ : ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಶುಂಠಿ ರಾಮಬಾಣ

ನಾನು ಸೋನಿಯಾ ಗಾಂಧಿಯ ರಿಮೋಟ್ ಕಂಟ್ರೋಲ್ ಅಲ್ಲ; ಬಿಜೆಪಿಗೆ ಖರ್ಗೆ ತಿರುಗೇಟು

ನಾನು ಸೋನಿಯಾ ಗಾಂಧಿಯ ರಿಮೋಟ್ ಕಂಟ್ರೋಲ್ ಅಲ್ಲ; ಬಿಜೆಪಿಗೆ ಖರ್ಗೆ ತಿರುಗೇಟು

jds

SSC: 20,000 ಹುದ್ದೆ ಆಯ್ಕೆಗೆ ಕನ್ನಡದಲ್ಲೂ ಪರೀಕ್ಷೆ ನಡೆಸಲು ಹೆಚ್ ಡಿಕೆ ಆಗ್ರಹ

web baby corner

Easy recipes: ಬೇಬಿ ಕಾರ್ನ್ ಮಂಚೂರಿಯನ್‌ ಟ್ರೈ ಮಾಡಿ ಟೇಸ್ಟ್ ನೋಡಿ…

ಪ.ಜಾತಿಗೆ 17% ಪ. ಪಂಗಡಕ್ಕೆ 7% ಮೀಸಲಾತಿ ಹೆಚ್ಚಿಸಲು ತೀರ್ಮಾನ: ಸಿಎಂ ಬೊಮ್ಮಾಯಿ

ಪ.ಜಾತಿಗೆ 17%, ಪ. ಪಂಗಡಕ್ಕೆ 7% ಮೀಸಲಾತಿ ಹೆಚ್ಚಿಸಲು ತೀರ್ಮಾನ: ಸಿಎಂ ಬೊಮ್ಮಾಯಿ

1-adasas-dsa

ಮಂಗಳೂರು : ಲಂಚ ಪಡೆದ ಭೂಮಾಪಕನಿಗೆ 3 ವರ್ಷ ಶಿಕ್ಷೆ, ದಂಡ

doller money news

ಡಾಲರ್ ಎದುರು ರೂಪಾಯಿ ಮೌಲ್ಯ 82.33ಕ್ಕೆ ಇಳಿಕೆ: ಸಾರ್ವಕಾಲಿಕ ಕನಿಷ್ಠಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jds

SSC: 20,000 ಹುದ್ದೆ ಆಯ್ಕೆಗೆ ಕನ್ನಡದಲ್ಲೂ ಪರೀಕ್ಷೆ ನಡೆಸಲು ಹೆಚ್ ಡಿಕೆ ಆಗ್ರಹ

ಪ.ಜಾತಿಗೆ 17% ಪ. ಪಂಗಡಕ್ಕೆ 7% ಮೀಸಲಾತಿ ಹೆಚ್ಚಿಸಲು ತೀರ್ಮಾನ: ಸಿಎಂ ಬೊಮ್ಮಾಯಿ

ಪ.ಜಾತಿಗೆ 17%, ಪ. ಪಂಗಡಕ್ಕೆ 7% ಮೀಸಲಾತಿ ಹೆಚ್ಚಿಸಲು ತೀರ್ಮಾನ: ಸಿಎಂ ಬೊಮ್ಮಾಯಿ

ಟಿ.ಬಿ.ನಾಲೆ ಭೂ ಅಕ್ರಮಕ್ಕೆ ಸಂಬಂಧಿಸಿ ಸಚಿವ ರಾಮುಲು ರಾಜೀನಾಮೆ ನೀಡಬೇಕು: ಉಗ್ರಪ್ಪ ಆಗ್ರಹ

ಟಿ.ಬಿ.ನಾಲೆ ಭೂ ಅಕ್ರಮಕ್ಕೆ ಸಂಬಂಧಿಸಿ ಸಚಿವ ರಾಮುಲು ರಾಜೀನಾಮೆ ನೀಡಬೇಕು: ಉಗ್ರಪ್ಪ ಆಗ್ರಹ

ರಾಜ್ಯ ಬಿಜೆಪಿ ನಡೆ ಮತ್ತೊಮ್ಮೆ ಅಧಿಕಾರದ ಕಡೆ: ಯಡಿಯೂರಪ್ಪ

ರಾಜ್ಯ ಬಿಜೆಪಿ ನಡೆ ಮತ್ತೊಮ್ಮೆ ಅಧಿಕಾರದ ಕಡೆ: ಯಡಿಯೂರಪ್ಪ

Nalin-kumar

ಓಡಲು ದಾರಿ ಹುಡುಕುವ ಇಟೆಲಿಯ ಅಕ್ಕ: ನಳಿನ್‍ ಕಮಾರ್ ಕಟೀಲ್ ವ್ಯಂಗ್ಯ

MUST WATCH

udayavani youtube

ಯುವಕನಾದ ಸಿದ್ದರಾಮಯ್ಯ… ರಾಹುಲ್ ಜತೆ ರೇಸ್ …. ವಿಡಿಯೋ ವೈರಲ್

udayavani youtube

ಮೈಸೂರು ಜಂಬೂ ಸವಾರಿಯಲ್ಲೂ ಅಪ್ಪು ಸ್ಮರಣೆ

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

ಹೊಸ ಸೇರ್ಪಡೆ

ಆ್ಯಂಟಿ ಬಯೋಟಿಕ್ : ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಶುಂಠಿ ರಾಮಬಾಣ

ಆ್ಯಂಟಿ ಬಯೋಟಿಕ್ : ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಶುಂಠಿ ರಾಮಬಾಣ

ಭವನ ನಿರ್ಮಾಣಕ್ಕೆ ಕೋರ್ಟ್‌ ತಡೆಯಾಜ್ಞೆ

ಭವನ ನಿರ್ಮಾಣಕ್ಕೆ ಕೋರ್ಟ್‌ ತಡೆಯಾಜ್ಞೆ

ನಾನು ಸೋನಿಯಾ ಗಾಂಧಿಯ ರಿಮೋಟ್ ಕಂಟ್ರೋಲ್ ಅಲ್ಲ; ಬಿಜೆಪಿಗೆ ಖರ್ಗೆ ತಿರುಗೇಟು

ನಾನು ಸೋನಿಯಾ ಗಾಂಧಿಯ ರಿಮೋಟ್ ಕಂಟ್ರೋಲ್ ಅಲ್ಲ; ಬಿಜೆಪಿಗೆ ಖರ್ಗೆ ತಿರುಗೇಟು

jds

SSC: 20,000 ಹುದ್ದೆ ಆಯ್ಕೆಗೆ ಕನ್ನಡದಲ್ಲೂ ಪರೀಕ್ಷೆ ನಡೆಸಲು ಹೆಚ್ ಡಿಕೆ ಆಗ್ರಹ

web baby corner

Easy recipes: ಬೇಬಿ ಕಾರ್ನ್ ಮಂಚೂರಿಯನ್‌ ಟ್ರೈ ಮಾಡಿ ಟೇಸ್ಟ್ ನೋಡಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.