ಸರ್ಕಾರ ಪತನ ಖಚಿತವಾಯ್ತೇ?ಜನರಿಗೆ ದಂಗೆ ಏಳಲು ಕರೆ ನೀಡ್ತಾರಂತೆ ಸಿಎಂ!!
Team Udayavani, Sep 20, 2018, 1:55 PM IST
ಹಾಸನ : ‘ಸರ್ಕಾರಕ್ಕೆ ಇದೇ ರೀತಿ ತೊಂದರೆ ಕೊಟ್ಟರೆ ಸುಮ್ಮನಿರುವುದಿಲ್ಲ. ರಾಜ್ಯದ ಜನರಿಗೆ ಬಿಜೆಪಿ ವಿರುದ್ಧ ದಂಗೆ ಏಳುವಂತೆ ಕರೆ ನೀಡುತ್ತೇನೆ‘…ಇದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ನೀಡಿದ ಹೇಳಿಕೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ನಾನು ಪ್ರತಿದಿನ ಇವರ ಕಾಟ ಸಹಿಸಿಕೊಳ್ಳಬೇಕೋ ? ರಾಜ್ಯದ ಜನರ ಹಿತ ಕಾಯಬೇಕೋ ಎಂದು ಪ್ರಶ್ನಿಸಿ ಈ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ನಾನು ಕಿಂಗ್ ಪಿನ್ ಅಂದು ಯಾರ ಹೆಸರನ್ನೂ ಹೇಳಿರಲಿಲ್ಲ,ಆದರೆ ಸೋಮಶೇಖರ್ ಯಾಕೆ ಹೆಗಲು ಮುಟ್ಟಿಕೊಂಡರು ಎಂದು ಪ್ರಶ್ನಿಸಿದರು.
ಗುರುವಾರ ಬೆಳಗ್ಗೆ ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದ ಸಿಎಂ ಪರ್ಸಂಟೇಜ್ ಸಿಸ್ಟಂನ ಜನಕ ಯಡಿಯೂರಪ್ಪ ಎಂದು ಆರೋಪಿಸಿ ನಾನು ಸುಮ್ಮನಿರುವುದಿಲ್ಲ . ಸರ್ಕಾರ ನನ್ನ ಬಳಿ ಇದೆ ಏನು ಮಾಡಬೇಕೆಂದು ಗೊತ್ತಿದೆ ಎಂದಿದ್ದರು. ಬೆನ್ನಲ್ಲೆ ಯಡಿಯೂರಪ್ಪ ಕೇಂದ್ರ ಸರ್ಕಾರ ನಮ್ಮದು ಸಂಜೆ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಪ್ರತಿಸವಾಲು ಸಾಕಿದ್ದರು.
ಒಂದೆಡೆ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಕೆಲ ಶಾಸಕರು ಮಹಾರಾಷ್ಟ್ರದ ರೆಸಾರ್ಟ್‌ಗೆ ತೆರಳಲಿದ್ದಾರೆ ಎನ್ನುವ ಗುಮಾನಿಯ ಬೆನ್ನಲ್ಲೇ ಸಿಎಂ ಈ ಹೇಳಿಕೆ ನೀಡಿದ್ದು, ಸರ್ಕಾರ ಉಳಿಯುತ್ತದೆಯೋ ಎನ್ನುವ ಪ್ರಶ್ನೆ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಸಲೀಲೆ ವಿಡಿಯೋ ಹಿಂದೆ ಕನಕಪುರದ ಷಡ್ಯಂತ್ರವಿದೆ: ಯೋಗೇಶ್ವರ್ ಹೊಸ ಬಾಂಬ್
ಅನಾವಶ್ಯಕವಾಗಿ ಕೋರ್ಟ್ ಗೆ ಹೋಗಿ ಮತ್ತಷ್ಟು ಗೋಜಲಾಗಿಸುವುದು ಒಳ್ಳೆಯದಲ್ಲ: ಸದಾನಂದ ಗೌಡ
ನಾವಷ್ಟೇ ಅಲ್ಲಾ, ಇನ್ನೂ ಐದಾರು ಮಂದಿ ನ್ಯಾಯಾಲಯಕ್ಕೆ ಹೋಗುತ್ತಾರೆ: ಸಚಿವ ಸುಧಾಕರ್
ರಾಜಕೀಯ ಷಡ್ಯಂತ್ರ ನಡೆಯುತ್ತಿದೆ, ಅದಕ್ಕಾಗಿ ಕೋರ್ಟ್ ಮೊರೆ ಹೋಗಿದ್ದೇವೆ: ಸಚಿವ ಸುಧಾಕರ್
ಖ್ಯಾತ ಕವಿ ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟರು ಇನ್ನಿಲ್ಲ