ಪ್ರಾಥಮಿಕ ಶಿಕ್ಷಣದಲ್ಲಿ ಎನ್‌ಇಪಿ: 15 ದಿನಗಳಲ್ಲಿ ಕೇಂದ್ರಕ್ಕೆ ಸ್ಥಿತಿಗತಿ ವರದಿ ಸಲ್ಲಿಕೆ
Team Udayavani, Jan 3, 2022, 6:40 AM IST
ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯಲ್ಲಿ ಇತರ ರಾಜ್ಯಗಳಿಗಿಂತ ಮುಂದಿರುವ ಕರ್ನಾಟಕವು, ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು ರಾಜ್ಯದ ಶಿಕ್ಷಣದ ಸ್ಥಿತಿಗತಿಗಳನ್ನು ತಿಳಿಸುವ (ಪೊಸಿಶನ್ ಪೇಪರ್) ಕರಡು ವರದಿಯನ್ನು ಜನವರಿ 3ನೇ ವಾರದಲ್ಲಿ ಕೇಂದ್ರಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದೆ.
ಪ್ರಾಥಮಿಕ ಶಿಕ್ಷಣದಲ್ಲಿ ಎನ್‌ಇಪಿ ಜಾರಿ ಕುರಿತು ವರದಿ ಸಲ್ಲಿಸುತ್ತಿರುವ ದೇಶದ ಮೊದಲ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ. ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ನೇತೃತ್ವದ ಟಾಸ್ಕ್ಪೋರ್ಸ್ ಸಮಿತಿಯು ಈ ವರೆಗೆ 4 ಸಭೆಗಳನ್ನು ನಡೆಸಿದ್ದು, ವರದಿಯ ಕರಡು ಪ್ರತಿಯನ್ನು ಸಿದ್ಧಪಡಿಸಿದೆ. ಇದನ್ನು ಮತ್ತೊಮ್ಮೆ ಪರಿಶೀಲಿಸಿ ಜ.15ರಿಂದ 20ನೇ ತಾರೀಕಿನೊಳಗೆ ಕೇಂದ್ರಕ್ಕೆ ಸಲ್ಲಿಸಲಿದೆ.
ಕೇಂದ್ರ ಸರಕಾರವೇ ಈ ವರೆಗೆ ಎನ್‌ಇಪಿ ಕುರಿತ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್) ರಚಿಸಿಲ್ಲ. ಅದಕ್ಕೂ ಮೊದಲೇ ರಾಜ್ಯ ಕರಡು ರಚನೆ ಮಾಡಿದೆ. ಈ ವರದಿಯನ್ನು ಕೇಂದ್ರ ಸರಕಾರ ಪರಿಶೀಲಿಸಿ ವಾಪಸ್ ಕಳಿಸಿದರೆ, ರಾಜ್ಯ ಪಠ್ಯಕ್ರಮ ಚೌಕಟ್ಟು (ಎಸ್‌ಸಿಎಫ್) ರಚನೆಗೆ ಅನುಕೂಲವಾಗಲಿದೆ.
ರಾಜ್ಯದಲ್ಲಿ ಪಠ್ಯಕ್ರಮ ಚೌಕಟ್ಟು ರಚನೆಯಾದರೆ, ಪ್ರಾಥಮಿಕ ಶಿಕ್ಷಣದಲ್ಲಿ ಪಠ್ಯಪುಸ್ತಕ ರಚನೆ ದಾರಿ ಸುಗಮವಾಗಲಿದೆ. ಪುಸ್ತಕ ಸಿದ್ಧವಾದರೆ, ಶಿಕ್ಷಕರಿಗೆ ಬೋಧನೆಗೆ ಸಂಬಂ ಧಿಸಿದ ತರಬೇತಿ, ಪಠ್ಯಪುಸ್ತಕ ಮುದ್ರಣ ಸಹಿತ ಹಲವು ಕಾರ್ಯಗಳನ್ನು ಅನುಷ್ಠಾನ ಮಾಡಲು ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಪಾಕ್ ಸೈನಿಕನ ಹೊಡೆದುರುಳಿಸಿದ ಸೇನೆ
ಸದ್ಯಕ್ಕೆ ಮೊದಲ ಹಂತ ಮಾತ್ರ
ಎನ್‌ಇಪಿ ಜಾರಿಯಲ್ಲಿ 3ರಿಂದ 8ನೇ ವರ್ಷದ ಮಗುವಿಗೆ ಶಿಕ್ಷಣದ ಮೊದಲ ಹಂತವಾಗಿದೆ. ಇದರಲ್ಲಿ ಮಗುವು ಓದಬೇಕಾದ ಪಠ್ಯ, ಚಟುವಟಿಕೆಗಳು, ಕಲಿಕಾ ವಿಷಯಗಳು, ಮಗುವಿನ ಕಲಿಕಾ ಸಾಮರ್ಥ್ಯ ಸಹಿತ ಹಲವು ವಿಷಯಗಳ ಕರಡು ಸಿದ್ಧಗೊಳಿಸಲಾಗಿದೆ. ಹಂತ ಹಂತವಾಗಿ ಎನ್‌ಇಪಿ ಜಾರಿ ಮಾಡುವುದು ಸರಕಾರದ ಉದ್ದೇಶವಾಗಿದೆ.
ಪ್ರಾಥಮಿಕ ಹಂತದಲ್ಲಿ ಎನ್‌ಇಪಿ ಜಾರಿಗೆ ಸಂಬಂಧಿಸಿದ 26 ಪೊಸಿಶನ್ ಪೇಪರ್‌ಗಳ ಕರಡು ಸಿದ್ಧವಾಗಿದ್ದು, ಟಾಸ್ಕ್ಫೋರ್ಸ್ ತಂಡ ಮತ್ತೊಮ್ಮೆ ಪರಿಶೀಲಿಸಿ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತದೆ. ಮೊದಲ ಹಂತದಲ್ಲಿ ಎನ್‌ಇಪಿ ಜಾರಿ ಮಾಡುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಹಳ ಪ್ರಾಮುಖ್ಯ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇಂದಿನ ಗ್ರಹಬಲ: ಈ ರಾಶಿಯವರಿಂದು ಉದ್ಯೋಗದಲ್ಲಿ ಘರ್ಷಣೆಗೆ ಅವಕಾಶ ನೀಡಬೇಡಿ
ಧಾರವಾಡದಲ್ಲಿ ಭೀಕರ ಅಪಘಾತ: ಮರಕ್ಕೆ ಕ್ರೂಸರ್ ಢಿಕ್ಕಿ; ಮಕ್ಕಳು ಸೇರಿ ಸ್ಥಳದಲ್ಲೇ 7 ಜನ ಸಾವು
ಎಲ್ಲೇ ಇದ್ದರೂ ಕನ್ನಡವೇ ಜೀವ; ಕೆನಡಾದಲ್ಲಿ ಕನ್ನಡ ಕಹಳೆ ಮೊಳಗಿಸಿದ ಚಂದ್ರ ಆರ್ಯ ಅಂತರಂಗ
ಜನನ-ಮರಣ ಪ್ರಮಾಣಪತ್ರಕ್ಕೆ ತಪ್ಪಿಲ್ಲ ಅಲೆದಾಟ
ಹೊರಗುತ್ತಿಗೆ ನೇಮಕಾತಿಗಳಲ್ಲಿ ಶೇ. 33 ಮೀಸಲಾತಿ; ಮಹಿಳೆಯರಿಗೆ ಮೀಸಲು