ಸ್ವಂತ ಮನೆಯಲ್ಲೇ ಯುವತಿಯಿಂದ ಕಳವು
Team Udayavani, May 18, 2022, 1:36 AM IST
ಸಾಂದರ್ಭಿಕ ಚಿತ್ರ.
ಬೆಂಗಳೂರು: ಪ್ರಿಯಕರನ ಜತೆ ಐಷಾರಾಮಿ ಜೀವನ ನಡೆಸಲು ಸ್ವಂತ ಮನೆಯಲ್ಲಿಯೇ ಕಳ್ಳತನ ಮಾಡಿದ ಮಹಿಳೆ ಹಾಗೂ ಆಕೆಯ ಪ್ರಿಯಕರ ಅಮೃತಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಜಕ್ಕೂರು ಲೇಔಟ್ ನಿವಾಸಿ ದೀಪ್ತಿ (24) ಮತ್ತು ಆಕೆಯ ಪ್ರಿಯಕರ ಅಮೃತಹಳ್ಳಿಯ ಓಲ್ಡ್ ಪೊಲೀಸ್ ಬಿಲ್ಡಿಂಗ್ ನಿವಾಸಿ ಸಿ.ಎನ್.ಮದನ್(27) ಬಂಧಿತರು. ಅವರಿಂದ 36 ಲಕ್ಷ ರೂ. ಮೌಲ್ಯದ 725 ಗ್ರಾಂ ಚಿನ್ನಾಭರಣ, 6 ಲಕ್ಷ ರೂ. ಮೌಲ್ಯದ ಮೂರು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ದೀಪ್ತಿಗೆ ಈಗಾಗಲೇ ಮದುವೆಯಾಗಿದ್ದು, ಪತಿಯಿಂದ ದೂರವಾಗಿ ತಾಯಿ ಜತೆ ಇದ್ದರು. ಈ ಮಧ್ಯೆ ಜೆರಾಕ್ಸ್ ಅಂಗಡಿ ನಡೆಸುತ್ತಿದ್ದ ಮದನ್ ಪರಿಚಯವಾಗಿ ಸಂಬಂಧದಲ್ಲಿದ್ದರು. ತಾಯಿ ಮನೆಯಿಂದ ಹೊರ ಹೋಗಿದ್ದಾಗ ದೀಪ್ತಿ ಪ್ರಿಯಕರನ ಜತೆಗೂಡಿ ಚಿನ್ನಾಭರಣ ಕಳವುಗೈದಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಸದ ವಾಹನದಲ್ಲಿ ಕೆಂಪೇಗೌಡರ ಭಾವಚಿತ್ರ ಮೆರವಣಿಗೆ: ಉಗ್ರ ಹೋರಾಟದ ಎಚ್ಚರಿಕೆ
ಪೌರ ಕಾರ್ಮಿಕರನ್ನು ಖಾಯಂ ಮಾಡಿ ; ಇಲ್ಲದಿದ್ದರೆ ಜುಲೈ 1 ರಿಂದ ಕೆಲಸ ಸ್ಥಗಿತ
ಕೆಂಪೇಗೌಡರ ಆಶಯ ಈಡೇರಿಸುತ್ತಿರುವ ಪ್ರಧಾನಿ ಮೋದಿ: ನಳಿನ್ಕುಮಾರ್ ಕಟೀಲ್
ಸಾಗರ : ಅಗ್ನಿಪಥ್ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ, 50 ಕ್ಕೂ ಹೆಚ್ಚು ಕಾರ್ಯಕರ್ತರ ಬಂಧನ
ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ;ಲಕ್ಷ್ಮಣ ನಿಂಬರಗಿ, ಹರಿರಾಂ ಶಂಕರ್ ಸೇರಿ ಹಲವರ ವರ್ಗಾವಣೆ