ಬೀದರ್‌ ಚೆಲುವೆ ನಿಶಾಗೆ “ಮಿಸ್‌ ಇಂಡಿಯಾ’ ಕಿರೀಟ

Team Udayavani, Nov 20, 2019, 1:09 AM IST

ಬೀದರ್‌: ಅಪ್ಪಟ ಗ್ರಾಮೀಣ ಪ್ರತಿಭೆ, ಮಾಡೆಲಿಂಗ್‌ ಲೋಕದಲ್ಲಿ ಹೆಜ್ಜೆಯನ್ನಿಟ್ಟಿರುವ ಜಿಲ್ಲೆಯ ಧುಮ್ಮನಸೂರು ಗ್ರಾಮದ ಬೆಡಗಿ ನಿಶಾ ತಾಳಂಪಳ್ಳಿ ಈಗ “ಮಿಸ್‌ ಇಂಡಿಯಾ ಇಂಟರ್‌ನ್ಯಾಷನಲ್‌-2019′ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಬಣ್ಣದ ಲೋಕದಲ್ಲಿ ಮಿಂಚಲು ಯಶಸ್ಸಿನ ಬಾಗಿಲು ತೆರೆದುಕೊಂಡಿದೆ.

ದ್ವೀಪ ರಾಷ್ಟ್ರ ಇಂಡೋನೇಷ್ಯಾದ ಜಕಾರ್ತಾದಲ್ಲಿ “ಇಂಡಿಯನ್‌ ಫ್ಯಾಶನ್‌ ಫೆಸ್ಟ್‌’ ಸೋಮವಾರ ರಾತ್ರಿ “ಮಿಸ್‌ ಇಂಡಿಯಾ ಇಂಟರ್‌ನ್ಯಾಷನಲ್‌ ಸ್ಪರ್ಧೆ’ ಆಯೋಜಿಸಿತ್ತು. ವರ್ಣರಂಜಿತ ಗ್ಲಾಮರಸ್‌ ವೇದಿಕೆಯಲ್ಲಿ ಬಿಸಿಲೂರಿನ ಚೆಲುವೆ ನಿಶಾ ತಾಳಂಪಳ್ಳಿ ವಿನ್ನರ್‌ ಆಗಿ ಗೆಲುವಿನ ನಗೆ ಬೀರಿದ್ದಾರೆ. ಗ್ರ್ಯಾಂಡ್ ಫಿನಾಲೆಯಲ್ಲಿ ದೇಶದ ವಿವಿಧೆಡೆಗಳ 30 ಸುಂದರಿಯರು ಸ್ಪರ್ಧಾಳುಗಳಾಗಿದ್ದರು. ನಿಶಾ ಕರುನಾಡಿನಿಂದ ಸ್ಪರ್ಧಿಸಿದ್ದ ಏಕೈಕ ಚೆಲುವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ