Udayavni Special

ಮುನಿರತ್ನ ವಿರುದ್ಧ ದಾಖಲೆ ಬಿಡುಗಡೆ ಮಾಡುವುದಿಲ್ಲ: ಡಿಕೆ ಸುರೇಶ್ ಯೂಟರ್ನ್


Team Udayavani, Nov 6, 2020, 3:31 PM IST

ಮುನಿರತ್ನ ವಿರುದ್ಧ ದಾಖಲೆ ಬಿಡುಗಡೆ ಮಾಡುವುದಿಲ್ಲ: ಡಿಕೆ ಸುರೇಶ್ ಯೂಟರ್ನ್

ಬೆಂಗಳೂರು: ಮುನಿರತ್ನ ವಿರುದ್ಧದ ದಾಖಲೆಗಳನ್ನು ನಾವು ಬಿಡುಗಡೆ ಮಾಡುತ್ತೇವೆ ಎಂದಿದ್ದ ಸಂಸದ ಡಿ ಕೆ ಸುರೇಶ್ ಇದೀಗ ಯೂ ಟರ್ನ್ ಹೊಡೆದಿದ್ದು, ಮುನಿರತ್ನ ವಿರುದ್ಧ ದಾಖಲೆ ಬಿಡುಗಡೆ ಮಾಡುವುದಿಲ್ಲ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗತ್ಯ ಇದ್ದರೆ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದಿದ್ದೆ. ಆದರೆ ಈಗ ಚುನಾವಣೆ ಮುಗಿದಿದೆ, ಹೀಗಾಗಿ ದಾಖಲೆ ಬಿಡುಗಡೆಯ ಅಗತ್ಯ ಇಲ್ಲ. ಈಗ ನಾವು ದಾಖಲೆ ಬಿಡುಗಡೆ ಮಾಡಲ್ಲ ಎಂದರು.

ಮುನಿರತ್ನ ಅವರು ಐಡಿ ಕಾರ್ಡ್ ಸಂಗ್ರಹ ಮಾಡಿದ್ದರ ಬಗ್ಗೆ ಹೇಳಲಿ, ಹೈಕೋರ್ಟ್ ನಲ್ಲಿ ಈ ಪ್ರಕರಣ ವಜಾ ಆಗಿಲ್ಲ. ವಜಾ ಆಗಿರೋದು ಎರಡನೇ ಸ್ಥಾನ ಬಂದಿರುವ ತಮಗೆ ವಿಜಯಿ ಮಾಡಿ ಎಂದು ಮುನಿರಾಜು ಸಲ್ಲಿಸಿದ ಅರ್ಜಿ. ಮುನಿರತ್ನ ಮಾದ್ಯಮದವರಿಗೇ‌ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದರು.

ಆರ್ ಆರ್ ನಗರದಲ್ಲಿ ಕಾಂಗ್ರೆಸ್‌ಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಕಾರ್ಯಕರ್ತರು ಗೆಲ್ಲುವ ಉತ್ಸಾಹದಿಂದ ಇದ್ದಾರೆ. ಅಂಡರ್ ಕರೆಂಟ್ ನಮ್ಮ ಪರವಿದೆ. ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ:ವಿನಯ ಕುಲಕರ್ಣಿ ಬಂಧನದ ಹಿಂದೆ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲ: ಸವದಿ

ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ವಿಚಾರದ ಬಗ್ಗೆ ಮಾತನಾಡಿದ ಅವರು,  ವಿನಯ್ ಕುಲರ್ಣಿಗೆ ತೊಂದರೆ ಕೊಡಲು ಬಂಧನ ಮಾಡಲಾಗಿದೆ. ಆ ಭಾಗದಲ್ಲಿ ವಿನಯ್ ಪ್ರಭಾವಿ ವೀರಶೈವ ನಾಯಕ, ಅವರಿಂದ ಸಮಸ್ಯೆ ಆಗುತ್ತದೆ ಎಂದು ದುರುದ್ದೇಶದಿಂದ ಬಂಧನ ಮಾಡಲಾಗಿದೆ. ವಿನಯ್ ಕುಲಕರ್ಣಿ ತಪ್ಪು ಮಾಡಿಲ್ಲ. ಆರೋಪ ಮುಕ್ತರಾಗಿ ಹೊರಗೆ ಬರುತ್ತಾರೆ ಎಂದರು.

ಶಾಲೆಗಳ ಆರಂಭ ವಿಚಾರವಾಗಿ ಮಾತನಾಡಿದ ಡಿಕೆ ಸುರೇಶ್, ಬೇರೆ ಬೇರೆ ದೇಶಗಳಲ್ಲಿ ಶಾಲಾರಂಭಕ್ಕೆ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಸರ್ಕಾರಕ್ಕೆ ಶಾಲಾ ಮಕ್ಕಳ ಸುರಕ್ಷತೆಯ ಚಿಂತೆ ಇಲ್ಲ. ಎಂಟು ತಿಂಗಳಿಂದ ಮಕ್ಕಳ ಸುರಕ್ಷತೆ ಬಗ್ಗೆ ಪ್ಲಾನ್ ಮಾಡಬೇಕಿತ್ತು. ಆದರೆ  ಈಗ ಜನಾಭಿಪ್ರಾಯ ಪಡೆಯುತ್ತೇವೆ ಎನ್ನುತ್ತಿದ್ದಾರೆ. ಸಚಿವರು, ಶಾಸಕರಿಗೆ, ಅಧಿಕಾರಿಗಳಿಗೆ ಸುರಕ್ಷತೆ ಕೊಡಲು ಸರ್ಕಾರಕ್ಕೆ ಗೊತ್ತು, ಆದರೆ ಅದೇ ಸುರಕ್ಷತೆ ಮಕ್ಕಳಿಗೆ ಯಾಕೆ ಕೊಡಲ್ಲ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ನಮ್ಮನ್ನು ಎದುರಿಸಲಾಗದ ಬಿಜೆಪಿ ಸುಳ್ಳು ಆರೋಪಗಳಿಂದ ಹೇಡಿಗಳ ರಾಜಕೀಯ ಮಾಡುತ್ತಿದೆ: ಕಾಂಗ್ರೆಸ್

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಆಗುತ್ತೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು,  ಬಿಹಾರ ಚುನಾವಣೆ ಬಳಿಕ ನೋಡಿ ಗೊತ್ತಾಗುತ್ತದೆ. ಬಿಜೆಪಿಯಲ್ಲಿ ದೊಡ್ಡ ಬದಲಾವಣೆ ಆಗ ಆಗಬಹುದು. ಯತ್ನಾಳ್ ವಿರುದ್ಧ ಇನ್ನೂ ಬಿಜೆಪಿ ಕ್ರಮ ತಗೊಂಡಿಲ್ಲ, ಯಾಕೆ ? ಅದರರ್ಥ, ಯತ್ನಾಳ್ ಗೆ ಸುಮ್ನಿರಪ್ಪ ಅಂದಿರಬೇಕು. ಬಿಜೆಪಿ ಒಳಗೆ ಏನೋ ನಡೆಯುತ್ತಿದೆ ಎನ್ನುವುದು ಇದು ತೋರಿಸ್ತಿದೆ, ಈ ತಿಂಗಳಲ್ಲಿ ಏನೇನು ಬದಲಾವಣೆ ಆಗುತ್ತೋ ಕಾದು ನೋಡಿ ಎಂದರು.

ಟಾಪ್ ನ್ಯೂಸ್

ಐಪಿಎಲ್ ಟ್ರೋಫಿಯ ಜೊತೆ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಮಾಹಿ!

ಐಪಿಎಲ್ ಟ್ರೋಫಿಯ ಜೊತೆ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಮಾಹಿ!

incident held at mangalore

ಮಂಗಳೂರು: ಪಾರ್ಟಿ ಮಾಡಲು ಹೋದ ಗೆಳೆಯರ ನಡುವೆ ಕಿರಿಕ್‌: ಕೊಲೆಯಲ್ಲಿ ಅಂತ್ಯ

daily-horoscope

ಈ ರಾಶಿಯವರಿಗೆ ಇಂದು ನಿರೀಕ್ಷೆಗೂ ಮೀರಿದ ಧನಾರ್ಜನೆ, ದಂಪತಿಗಳಲ್ಲಿ ಅನುರಾಗ ವೃದ್ಧಿ.

ಹೊಸ ಜನಸಂಖ್ಯಾ ನೀತಿ ಜಾರಿಯಾಗಲಿ: ಭಾಗವತ್‌

ಹೊಸ ಜನಸಂಖ್ಯಾ ನೀತಿ ಜಾರಿಯಾಗಲಿ: ಭಾಗವತ್‌

ಪ್ರತೀ ಠಾಣೆಯಲ್ಲೂ ಎಸ್‌ಜೆಪಿಯು ಪುನಶ್ಚೇತನ

ಪ್ರತೀ ಠಾಣೆಯಲ್ಲೂ ಎಸ್‌ಜೆಪಿಯು ಪುನಶ್ಚೇತನ

ಉತ್ತರ ಕರ್ನಾಟಕ ಮಧ್ಯಮ ಭೂಕಂಪ ಹಾನಿ ವಲಯ

ಉತ್ತರ ಕರ್ನಾಟಕ ಮಧ್ಯಮ ಭೂಕಂಪ ಹಾನಿ ವಲಯ

ಕರಾವಳಿ: ಸಂಭ್ರಮದ ನವರಾತ್ರಿ,ದಸರಾ ಸಮಾಪನ

ಕರಾವಳಿ: ಸಂಭ್ರಮದ ನವರಾತ್ರಿ,ದಸರಾ ಸಮಾಪನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉತ್ತರ ಕರ್ನಾಟಕ ಮಧ್ಯಮ ಭೂಕಂಪ ಹಾನಿ ವಲಯ

ಉತ್ತರ ಕರ್ನಾಟಕ ಮಧ್ಯಮ ಭೂಕಂಪ ಹಾನಿ ವಲಯ

BSYರಂಗೇರಿದ ಉಪಚುನಾವಣೆ ಕಣ; ಇಂದಿನಿಂದ ಘಟಾನುಘಟಿ ನಾಯಕರ “ರಂಗ’ಪ್ರವೇಶ

ರಂಗೇರಿದ ಉಪಚುನಾವಣೆ ಕಣ; ಇಂದಿನಿಂದ ಘಟಾನುಘಟಿ ನಾಯಕರ “ರಂಗ’ಪ್ರವೇಶ

ಹಾನಗಲ್‌ನಲ್ಲಿ ಕಾಂಗ್ರೆಸ್‌ಗೆ ಜಯ: ಸಲೀಂ ಆಹಮದ್‌ ವಿಶ್ವಾಸ

ಹಾನಗಲ್‌ನಲ್ಲಿ ಕಾಂಗ್ರೆಸ್‌ಗೆ ಜಯ: ಸಲೀಂ ಆಹಮದ್‌ ವಿಶ್ವಾಸ

ಸಿದ್ದರಾಮಯ್ಯರನ್ನು ಭೇಟಿಯಾದ ಬಿಜೆಪಿ ಶಾಸಕ ಕುಮಾರ್‌ ಬಂಗಾರಪ್ಪ

ಸಿದ್ದರಾಮಯ್ಯರನ್ನು ಭೇಟಿಯಾದ ಬಿಜೆಪಿ ಶಾಸಕ ಕುಮಾರ್‌ ಬಂಗಾರಪ್ಪ

ತ್ರಿಶೂಲ ದೇವರ ಮನೆಯಲ್ಲಿಟ್ಟು ಪೂಜೆ ಮಾಡಲಿ: ರಾಮಲಿಂಗಾರೆಡ್ಡಿ

ತ್ರಿಶೂಲ ದೇವರ ಮನೆಯಲ್ಲಿಟ್ಟು ಪೂಜೆ ಮಾಡಲಿ: ರಾಮಲಿಂಗಾರೆಡ್ಡಿ

MUST WATCH

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

udayavani youtube

ಇದೇ ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಂಬಾರಿ‌ಉತ್ಸವ ಮೂರ್ತಿ ಮೆರವಣಿಗೆ…

udayavani youtube

ಮೈಸೂರು ದಸರಾ: ಅಭಿಮನ್ಯು ಕಂಡರೆ ಕಾಡಾನೆಗೆ ಮೈನಡುಕ!

ಹೊಸ ಸೇರ್ಪಡೆ

ಐಪಿಎಲ್ ಟ್ರೋಫಿಯ ಜೊತೆ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಮಾಹಿ!

ಐಪಿಎಲ್ ಟ್ರೋಫಿಯ ಜೊತೆ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಮಾಹಿ!

incident held at mangalore

ಮಂಗಳೂರು: ಪಾರ್ಟಿ ಮಾಡಲು ಹೋದ ಗೆಳೆಯರ ನಡುವೆ ಕಿರಿಕ್‌: ಕೊಲೆಯಲ್ಲಿ ಅಂತ್ಯ

daily-horoscope

ಈ ರಾಶಿಯವರಿಗೆ ಇಂದು ನಿರೀಕ್ಷೆಗೂ ಮೀರಿದ ಧನಾರ್ಜನೆ, ದಂಪತಿಗಳಲ್ಲಿ ಅನುರಾಗ ವೃದ್ಧಿ.

ಹೊಸ ಜನಸಂಖ್ಯಾ ನೀತಿ ಜಾರಿಯಾಗಲಿ: ಭಾಗವತ್‌

ಹೊಸ ಜನಸಂಖ್ಯಾ ನೀತಿ ಜಾರಿಯಾಗಲಿ: ಭಾಗವತ್‌

ಪ್ರತೀ ಠಾಣೆಯಲ್ಲೂ ಎಸ್‌ಜೆಪಿಯು ಪುನಶ್ಚೇತನ

ಪ್ರತೀ ಠಾಣೆಯಲ್ಲೂ ಎಸ್‌ಜೆಪಿಯು ಪುನಶ್ಚೇತನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.