ವಿಲೀನ ಚರ್ಚೆ ಬಾಲಿಶ, ಜೆಡಿಎಸ್ ಪಕ್ಷವನ್ನು ಅಲುಗಾಡಿಸಲು ಸಾಧ್ಯವಿಲ್ಲ: ದೇವೇಗೌಡ
Team Udayavani, Dec 26, 2020, 2:10 PM IST
ಬೆಂಗಳೂರು: ರಾಜಕಾರಣದಲ್ಲಿ ಸೋಲು ಗೆಲುವು ಮಾಲೂಲಿ. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ಜೆಡಿಎಸ್ ಪಕ್ಷವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನ ಚರ್ಚೆಯೇ ಬಾಲಿಷ. ಜ. 7ರಂದು ಎಚ್.ಡಿ.ಕುಮಾರಸ್ವಾಮಿ ಅರಮನೆ ಮೈದಾನದಲ್ಲಿ ನಡೆಯುವ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಈ ಬಗ್ಗೆ ಗಟ್ಟಿ ದನಿಯಲ್ಲಿ ಹೇಳಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಬಂಗಾಳ; ಬಿಜೆಪಿ ಸೇರ್ಪಡೆಗೆ ಆಗಮಿಸಿದ್ದ TMC ಸಂಸದ ಮಂಡಲ್ ಗೆ ಟಿಎಂಸಿ ಮುತ್ತಿಗೆ, ಪ್ರತಿಭಟನೆ
ಕಾಂಗ್ರೆಸ್ ಏನು ಎಂಬುದು ಗೊತ್ತಿದೆ. ಸಭಾಪತಿ ವಿಚಾರದಲ್ಲಿ ಜಾತ್ಯಾತೀತ ನಾಯಕತ್ವ ಪ್ರಶ್ನೆ ಮಾಡುವ ನಾಟಕ ವಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ದೇವೇಗೌಡ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.