ಎಸ್.ಆರ್.ಪಾಟೀಲ್ ಗೆ ಟಿಕೆಟ್ ವಿಚಾರವಾಗಿ ನನ್ನ ಬಳಿ ಚರ್ಚೆ ಮಾಡಿಲ್ಲ: ಎಂ.ಬಿ.ಪಾಟೀಲ್
Team Udayavani, May 23, 2022, 1:18 PM IST
ಬೆಂಗಳೂರು: ಮೇಲ್ಮನೆ ಟಿಕೆಟ್ ವಿಚಾರದ ಬಗ್ಗೆ ಪಕ್ಷದ ಅಧ್ಯಕ್ಷರು, ವಿಧಾನಸಭೆಯ ವಿಪಕ್ಷ ನಾಯಕರ ಜೊತೆ ಚರ್ಚೆ ಮಾಡಿರುತ್ತಾರೆ. ಅವರಿಗೆ ಅದರ ಬಗ್ಗೆ ಗೊತ್ತಿರುತ್ತದೆ. ನನಗೆ ಅದರ ಬಗ್ಗೆ ಯಾವುದೂ ಗೊತ್ತಿಲ್ಲ. ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿದರು.
ಎಸ್.ಆರ್.ಪಾಟೀಲ್ ಅವರಿಗೆ ಮೇಲ್ಮನೆ ಟಿಕೆಟ್ ನೀಡಲು ವಿರೋಧ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ವಿರೋಧ ಮಾಡುವ ಬಗ್ಗೆ ಪ್ರಶ್ನೆ ಉದ್ಬವಿಸುವುದಿಲ್ಲ. ಈ ಬಗ್ಗೆ ಸಭೆಗೆ ನನ್ನನ್ನು ಕರೆದು ಚರ್ಚೆಯನ್ನೂ ಮಾಡಿಲ್ಲ. ನಾನು ಪರವೂ ಇಲ್ಲ, ವಿರೋಧವೂ ಇಲ್ಲ ನಾನ್ಯಾಕೆ ಅವರನ್ನ ವಿರೋಧ ಮಾಡಲಿ ಎಂದರು.
ಇದನ್ನೂ ಓದಿ:ಸಿದ್ದರಾಮಯ್ಯ ಬೇಕಾದರೆ ಗೋ ಮಾಂಸ ತಿನ್ನಲಿ, ಆದರೆ ವಕೀಲಿಕೆ ಮಾಡಬೇಡಿ: ಛಲವಾದಿ ನಾರಾಯಣಸ್ವಾಮಿ
ಪಠ್ಯಪುಸ್ತಕದಲ್ಲಿ ಹೆಡಗೇವಾರ್ ಸೇರಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಎಂ.ಬಿ.ಪಾಟೀಲ್, ನಾರಾಯಣ ಗುರು, ಬಸವಣ್ಣ ಆದರ್ಶಪ್ರಾಯರು. ಮುಂದಿನ ಪೀಳಿಗೆಗೆ ಅವರ ತತ್ವಗಳ ಮೌಲ್ಯ ತಿಳಿಸಬೇಕು. ಪಠ್ಯದಲ್ಲಿ ಆರ್ ಎಸ್ಎಸ್ ತತ್ವ ಸೇರಿಸುವುದು ಸರಿಯಲ್ಲ. ನಾರಾಯಣ ಗುರು, ಪೆರಿಯಾರ್, ಭಗತ್ ಸಿಂಗ್ ಪಠ್ಯ ಇರಲಿ. ಅವರ ತತ್ವಗಳನ್ನು ಮಕ್ಕಳಿಗೆ ತಿಳಿಸಲಿ. ಈ ರೀತಿ ಆರ್ ಎಸ್ಎಸ್ ಸಿದ್ಧಾಂತ ಹೇರುವುದು ಸರಿಯಲ್ಲ. ಬಿಜೆಪಿಯವರು ಇದನ್ನೇ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ಮೇ ತಿಂಗಳಲ್ಲಿ19 ಲಕ್ಷ ವಾಟ್ಸ್ಆ್ಯಪ್ ಖಾತೆ ಬ್ಯಾನ್
ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ಅತ್ಯಾಚಾರ ಆರೋಪ: ಹೈಕೋರ್ಟ್ ನೋಟಿಸ್
ಜಗನ್ನಾಥ ರಥಯಾತ್ರೆ ಈಗ ಅಬಾಧಿತ: ಕೇಂದ್ರ ಗೃಹ ಸಚಿವ ಅಮಿತ್ ಶಾ
ಗುತ್ತಿಗೆ ಪೌರಕಾರ್ಮಿಕರ ಖಾಯಂಗೆ ಒಪ್ಪಿಗೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
ಪಾಕಿಸ್ತಾನದಲ್ಲಿ ವಿದ್ಯುತ್ ಬಿಕ್ಕಟ್ಟು: ಮೊಬೈಲ್, ಇಂಟರ್ನೆಟ್ ಸೇವೆ ಸ್ಥಗಿತ?