44 ಕಾಂಗ್ರೆಸ್‌ ಸಂಸದರ ಪೈಕಿ ಕರ್ನಾಟಕದವರೇ ಒಂಭತ್ತು ಜನ


Team Udayavani, Mar 11, 2019, 12:25 AM IST

congress.jpg

ಬೆಂಗಳೂರು: 2019ರ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಯಾಗಿದ್ದು, ರಾಜ್ಯದಲ್ಲಿಯೂ ಪ್ರಮುಖ ಮೂರು ಪಕ್ಷಗಳು ಚುನಾವಣೆ ಸ್ಪರ್ಧೆಗೆ ಸಿದ್ದತೆ ಮಾಡಿಕೊಂಡಿವೆ. 2014ರ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದರೂ, ಬಿಜೆಪಿ 17 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಕಾಂಗ್ರೆಸ್‌ 9 ಸ್ಥಾನ, ಜೆಡಿಎಸ್‌ 2 ಸ್ಥಾನಗಳನ್ನು ಮಾತ್ರ ಪಡೆಯುವಲ್ಲಿ ಸಫ‌ಲವಾಗಿದ್ದವು. 2013ರ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿಯಲ್ಲಿ ಒಡೆದು ಮೂರು ಹೋಳಾಗಿದ್ದ ಕೆಜೆಪಿಯಿಂದ ಬಿ.ಎಸ್‌. ಯಡಿಯೂರಪ್ಪ ಹಾಗೂ ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಶ್ರೀರಾಮುಲು ಮರಳಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ವಿಧಾನ ಸಭೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ಬಿಜೆಪಿಗೆ ಶಕ್ತಿ ವೃದಿಟಛಿಸಲು ಕಾರಣವಾಗಿತ್ತು. ಕಳೆದ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದವು. ಕಾಂಗ್ರೆಸ್‌ ನೇತೃತ್ವದ ಯುಪಿಎ ಕೇಂದ್ರದಲ್ಲಿ ಹತ್ತು ವರ್ಷ ಅಧಿಕಾರ ನಡೆಸಿದ್ದರಿಂದ ಆಡಳಿತ ವಿರೋಧಿ ಅಲೆ ಹಾಗೂ ಕೇಂದ್ರದ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ಸಾಕಷ್ಟು ಕೇಳಿ ಬಂದಿದ್ದವು. ಆದರೆ, ರಾಜ್ಯಕ್ಕೆ ಸಂಬಂಧಿಸಿದಂತೆ ಕೇಂದ್ರದ ವಿರುದ್ಧದ ಆರೋಪದ ನಡುವೆಯೂ ಸಿದ್ದರಾ ಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಅವಧಿ ಪೂರೈಸಿದ್ದರಿಂದ ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಭಾಗ್ಯದಂತಹ ಸಾಮಾನ್ಯ ಜನರಿಗೆ ತಲುಪುವಂತ ಜನಪ್ರಿಯ ಯೋಜನೆ ಗಳನ್ನು ಘೋಷಣೆ ಮಾಡಿದ್ದು ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸ್ಥಳೀಯ ಸರ್ಕಾರದ ಯೋಜನೆಗಳು 9 ಸಂಸದರನ್ನು ಗೆಲ್ಲಿಸಿಕೊಂಡು ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.

ಇಡೀ ದೇಶದಲ್ಲಿಯೇ ಕಾಂಗ್ರೆಸ್‌ ಯಾವ ರಾಜ್ಯದಲ್ಲಿಯೂ ಎರಡಂಕಿ ದಾಟಿ ರಲಿಲ್ಲ. ಎಂಭತ್ತು ಸಂಸದರ ಕ್ಷೇತ್ರಗಳನ್ನು ಹೊಂದಿರುವ ಹಾಗೂ ಯುಪಿಎ ಮತ್ತು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಸ್ಪರ್ಧಿಸುವ ಉತ್ತರ ಪ್ರದೇಶದಲ್ಲೇ ಕಾಂಗ್ರೆಸ್‌ ಕೇವಲ ಇಬ್ಬರು ಸಂಸದರನ್ನು ಗೆಲ್ಲಿಸಿಕೊಂಡು ಬರುವಲ್ಲಿ ತೃಪ್ತಿ ಪಟ್ಟಿತ್ತು. ಆದರೆ, ಕರ್ನಾ ಟಕದಲ್ಲಿ ಅತಿ ಹೆಚ್ಚು ಅಂದರೆ, 9 ಸಂಸದ ರನ್ನು ಗೆಲ್ಲಿಸಿಕೊಂಡು ಬರುವ ಮೂಲಕ, ಮೋದಿ ಬಿರುಗಾಳಿಯ ನಡುವೆಯೂ ತಮ್ಮ ಶಕ್ತಿ ತೋರಿಸುವಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕರು ಯಶಸ್ವಿಯಾಗಿದ್ದರು.

ದೇಶದಲ್ಲಿ ಕಾಂಗ್ರೆಸ್‌ ಒಟ್ಟು 44 ಸಂಸದರನ್ನು ಗೆಲ್ಲಿಸಿಕೊಂಡು ಬಂದಿದ್ದು, ಅವರಲ್ಲಿ ಕರ್ನಾಟಕದಿಂದಲೇ 9 ಸಂಸದರು ಆಯ್ಕೆಯಾಗಿದ್ದರು. ಅದು ರಾಜ್ಯದ ಹಿರಿಯ ನಾಯಕ, ಕಲಬುರಗಿ ಕ್ಷೇತ್ರದ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆಯಾಗಲು ಕಾರಣವಾಯಿತು.

ರಾಜ್ಯದಿಂದ 3 ಸಚಿವರು
ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಿಂದ ಮೂವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗಿತ್ತು. ಡಿ.ವಿ.ಸದಾನಂದಗೌಡ ಅವರನ್ನು ರೈಲ್ವೆ ಸಚಿವರನ್ನಾಗಿ ನೇಮಿಸಲಾಯಿತು. ಎಚ್‌.ಎನ್‌.ಅನಂತಕುಮಾರ್‌ ಅವರಿಗೆ ರಾಸಾಯನಿಕ ಗೊಬ್ಬರ ಖಾತೆ ನೀಡಲಾಗಿತ್ತು. ಜಿ.ಎಂ. ಸಿದ್ದೇಶ್ವರ್‌ಗೆ ಸಣ್ಣ ಕೈಗಾರಿಕೆ ಖಾತೆ ನೀಡಲಾಗಿತ್ತು. ಯಡಿಯೂರಪ್ಪಗೆ ಮೋದಿ ಸಂಪುಟದಲ್ಲಿ ಸ್ಥಾನ ನೀಡಲಾಗುತ್ತದೆ ಎಂಬ ಭರವಸೆ ಹುಸಿಯಾಗಿತ್ತು. ಅಲ್ಲದೆ, ಹೆಚ್ಚು ಸಂಸದರನ್ನು ಆಯ್ಕೆ ಮಾಡಿರುವ ರಾಜ್ಯದಲ್ಲಿ  ಲಿಂಗಾಯತರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂಬಮಾತುಗಳು ಕೇಳಿ ಬಂದವು.

ಕೇಂದ್ರದಲ್ಲಿ ರಾಜ್ಯದ ಸಂಸದರಿಗೆ ಹೆಚ್ಚಿನ ಸಚಿವ ಸ್ಥಾನ ನೀಡಬೇಕೆಂಬ ಒತ್ತಡವೂ ಕೇಳಿ ಬಂತು. ವರ್ಷದಲ್ಲಿಯೇ ಕೇಂದ್ರ ಸಚಿವ ಸಂಪುಟ ಪುನಾರಚನೆ ಮಾಡಿ, ಸದಾನಂದಗೌಡರಿಂದ ರೈಲ್ವೆ ಖಾತೆ ವಾಪಸ್‌ ಪಡೆದು, ಕಾನೂನು ಸಚಿವರನ್ನಾಗಿ ಮೋದಿ ಮುಂದುವರೆಸಿದರು. ಸಣ್ಣ ಕೈಗಾರಿಕೆ ಸಚಿವರಾಗಿದ್ದ ಸಿದ್ದೇಶ್ವರ್‌ ಅವರನ್ನು ಸಚಿವ ಸ್ಥಾನದಿಂದ ಕೈ ಬಿಟ್ಟು, ರಮೇಶ್‌ ಜಿಗಜಿಣಗಿಯವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ರಾಜ್ಯ ಸಚಿವರನ್ನಾಗಿ ನೇಮಿಸಲಾಯಿತು.

2017ರಲ್ಲಿ ಕೇಂದ್ರ ಸಚಿವ ಸಂಪುಟ ಪುನಾರಚನೆ ಮಾಡಿ ಅನಂತಕುಮಾರ್‌ ಹೆಗಡೆಯವರನ್ನು ಕೇಂದ್ರ ಕೌಶಲ್ಯಾಭಿವೃದ್ಧಿ  ಸಚಿವರನ್ನಾಗಿ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅನಂತಕುಮಾರ್‌ಗೆ ಹೆಚ್ಚುವರಿಯಾಗಿ ಸಂಸದೀಯ ವ್ಯವಹಾರಳ ಖಾತೆ ನೀಡಲಾಯಿತು. ಸದಾನಂದಗೌಡರಿಂದ ಕಾನೂನು ಇಲಾಖೆಯನ್ನು ವಾಪಸ್‌ ಪಡೆದು, ಯೋಜನೆ ಮತ್ತು ಸಾಂಖೀÂಕ ಇಲಾಖೆಯ ಜವಾಬ್ದಾರಿ ನೀಡಲಾಯಿತು. ಈ ಸಂದರ್ಭದಲ್ಲಿ ಜಾತಿ ಲೆಕ್ಕಾಚಾರದಲ್ಲಿ ಕರ್ನಾಟಕಕ್ಕೆ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಕ್ಕೆ ಸೇರಿದ ಸಂಸದರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿತ್ತು. ಅನಂತಕುಮಾರ್‌ ಅಕಾಲಿಕ ನಿಧನದಿಂದ ತೆರವಾಗಿದ್ದ ರಾಸಾಯನಿಕ ಗೊಬ್ಬರ ಖಾತೆಯನ್ನು ಸದಾನಂದಗೌಡರಿಗೆ ಹೆಚ್ಚುವರಿಗೆಯಾಗಿ ಜವಾಬ್ದಾರಿ ವಹಿಸಲಾಯಿತು.

ಶಂಕರ ಪಾಗೋಜಿ 

ಟಾಪ್ ನ್ಯೂಸ್

1-belur

ರಾಘವೇಂದ್ರ ಮತ್ತು ವಿಜಯೇಂದ್ರರ ಹಣವೆಲ್ಲವೂ ಷಡಕ್ಷರಿ ಬಳಿ : ಬೇಳೂರು ಬಾಂಬ್

ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಮೇಲೆ ದಾಳಿ: ಬಿಜೆಪಿ ಕೈವಾಡದ ಆರೋಪ

ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಮೇಲೆ ದಾಳಿ: ಬಿಜೆಪಿ ಕೈವಾಡದ ಆರೋಪ

kedhara

ಚಾರ್ ಧಾಮ್ ಯಾತ್ರೆ : 2 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳ ಭೇಟಿ

mamata

ಫಾಲೆರೊ ಟಿಎಂಸಿ ರಾಷ್ಟ್ರೀಯ ಉಪಾಧ್ಯಕ್ಷ : ಅ.28ಕ್ಕೆ ಗೋವಾಕ್ಕೆ ಮಮತಾ ಬ್ಯಾನರ್ಜಿ

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

Deepika Padukone, Ranveer Singh Set To Bid For New IPL Team

ಹೊಸ ಐಪಿಎಲ್ ತಂಡ ಖರೀದಿಸುತ್ತಾರಂತೆ ದೀಪಿಕಾ- ರಣವೀರ್

12-asasa

ನಾನು ಸಚಿವನಾಗಲು, ಸಿಎಂ ಆಗಲು ಯಡಿಯೂರಪ್ಪ ಕಾರಣ : ಬಸವರಾಜ ಬೊಮ್ಮಾಯಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-belur

ರಾಘವೇಂದ್ರ ಮತ್ತು ವಿಜಯೇಂದ್ರರ ಹಣವೆಲ್ಲವೂ ಷಡಕ್ಷರಿ ಬಳಿ : ಬೇಳೂರು ಬಾಂಬ್

12-asasa

ನಾನು ಸಚಿವನಾಗಲು, ಸಿಎಂ ಆಗಲು ಯಡಿಯೂರಪ್ಪ ಕಾರಣ : ಬಸವರಾಜ ಬೊಮ್ಮಾಯಿ

1-ghate

ಬಿಜೆಪಿ ಹಿರಿಯ ನಾಯಕ,ಉದ್ಯಮಿ ಸುಧೀರ್ ಘಾಟೆ ವಿಧಿವಶ

ishwarappa-15

ಕಾಂಗ್ರೆಸ್‍ಗೆ ನಾಯಕತ್ವ, ಸಂಘಟನೆ, ಸಾಧನೆ ಇಲ್ಲ: ಈಶ್ವರಪ್ಪ

ಸಿಎಎ ವಿರೋಧಿಸಿ ಮಂಗಳೂರು ಗಲಭೆ ಪ್ರಕರಣ: ಪೊಲೀಸರು ತಪ್ಪಿತಸ್ಥರಲ್ಲ ಎಂದ ಸರ್ಕಾರ

ಸಿಎಎ ವಿರೋಧಿಸಿ ಮಂಗಳೂರು ಗಲಭೆ ಪ್ರಕರಣ: ‘ಪೊಲೀಸರು ತಪ್ಪಿತಸ್ಥರಲ್ಲ’ ಎಂದ ಸರ್ಕಾರ

MUST WATCH

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

ಹೊಸ ಸೇರ್ಪಡೆ

Inauguration of Maharishi Valmiki Jayanti Program

ಮಹಾಕಾವ್ಯ ರಾಮಾಯಣ ಎಂದಿಗೂ ಪ್ರಸ್ತುತ: ಸಚಿವ

1-belur

ರಾಘವೇಂದ್ರ ಮತ್ತು ವಿಜಯೇಂದ್ರರ ಹಣವೆಲ್ಲವೂ ಷಡಕ್ಷರಿ ಬಳಿ : ಬೇಳೂರು ಬಾಂಬ್

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

DCC Bank has not been involved in any transactions

ಡಿಸಿಸಿ ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದಿಲ್ಲ

Warrior M Jayaram Nayak honored with Presidential Medal of Honor

ಯೋಧರಿಗೆ ಗೌರವ ಸಲ್ಲಿಕೆ ಎಲ್ಲರ ಕರ್ತವ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.