25, 26ರಂದು ಹುಲಿಗೆಮ್ಮ ದೇವಿ ದರ್ಶನ ಇಲ್ಲ
Team Udayavani, Dec 24, 2019, 3:00 AM IST
ಕೊಪ್ಪಳ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಅಮಾವಾಸ್ಯೆ ನಿಮಿತ್ತ ಹಾಗೂ ಕಂಕಣಾಕೃತಿ ಸೂರ್ಯಗ್ರಹಣ ಇರುವ ಪ್ರಯುಕ್ತ ಡಿ.25ರಂದು ಸಂಜೆ 6ರಿಂದ ಡಿ.26ರಂದು ಮಧ್ಯಾಹ್ನ 12:30ರವರೆಗೆ ಶ್ರೀದೇವಿ ದರ್ಶನ ಇರುವುದಿಲ್ಲ. ಗ್ರಹಣದ ಪ್ರಯುಕ್ತ ಡಿ.25ರ ಸಂಜೆ 6 ಗಂಟೆಗೆ ವೇದಾರಂಭವಾಗುತ್ತದೆ. ಈ ಹಿನ್ನೆಲೆಯಲ್ಲಿ ಅಂದು ಸಂಜೆ 6ರಿಂದ ಡಿ.26ರಂದು ಮಧ್ಯಾಹ್ನ 12:30ರವರೆಗೆ ಶ್ರೀ ದೇವಿ ದರ್ಶನ ಇರುವುದಿಲ್ಲ. ಭಕ್ತರು ಸಹಕರಿಸಬೇಕು ಎಂದು ದೇಗಲದ ಕಾರ್ಯನಿರ್ವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.