ಈ ಸಾವಯವ ಸಿಗರೇಟ್‌ ಸಾಯಿಸುವುದಿಲ್ಲ!

Team Udayavani, Jan 19, 2019, 1:10 AM IST

13.jpg

ಬೆಂಗಳೂರು: ರೋಗ ನಿವಾರಕ ಐಸ್‌ಕ್ರೀಂ ರುಚಿ ನೀವು ಸವಿದಿರಬಹುದು. ಈಗ ಸಾವಯವ ಸಿಗರೇಟ್‌ ಕೂಡ ಬಂದಿದೆ. ಆದರೆ, ಈ ಸಿಗರೇಟ್‌ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಅಲ್ಲ; ಬದಲಿಗೆ ಆರೋಗ್ಯ ವೃದ್ಧಿಗೆ ಪೂರಕ!

ಸಾಮಾನ್ಯವಾಗಿ ಸಿಗರೇಟ್‌ಗಳ ಸೇವನೆಯಿಂದ ಕೆಮ್ಮು, ಕಫ‌ ಬರುತ್ತದೆ. ಆದರೆ, ಸಾವಯವ
ಸಿಗರೇಟ್‌ ಸೇವನೆಯಿಂದ ಕೆಮ್ಮು, ಕಫ‌, ಶೀತ ಮತ್ತಿತರ ಕಾಯಿಲೆಗಳು ದೂರವಾಗುತ್ತವೆ. ಜತೆಗೆ ಮನುಷ್ಯ ಕೆಲಸದ ಒತ್ತಡದಿಂದ ಹೊರಬರಲಿಕ್ಕೂ ಈ ಸಾವಯವ ಸಿಗರೇಟ್‌ ಸಹಕಾರಿಯಾಗಿದೆ. ಅಂದ ಹಾಗೆ, ಇದಕ್ಕೆ ಕೇಂದ್ರ ಆಯುಷ್‌ ಇಲಾಖೆಯಿಂದ ಮಾನ್ಯತೆಯೂ ದೊರಕಿದೆ. ಇಂತಹದ್ದೊಂದು ವಿನೂತನ ಮಾದರಿಯ ಸಿಗರೇಟ್‌ ಮಾರುಕಟ್ಟೆ ಪ್ರವೇಶಿಸಿದೆ. ಗೀತಾ ಎಂಟರ್‌ ಪ್ರೈಸಸ್‌ ಎಂಬ ಸಂಸ್ಥೆ ಈ ಸಿಗರೇಟ್‌ ಪರಿಚಯಿಸಿದ್ದು, ಎಲ್ಲೆಡೆ ಬೇಡಿಕೆ ಕೇಳಿಬರುತ್ತಿದೆ. ಇದರಲ್ಲಿ ಯಾವುದೇ ರೀತಿಯ ತಂಬಾಕು, ನಿಕೋಟಿನ್‌ ಇರುವುದಿಲ್ಲ. ಇದನ್ನು ಪುದೀನ ಎಲೆಗಳು, ಗುಲಾಬಿಯ ದಳಗಳು, ಕ್ಯಾಮೆಲಿಯಾ ಸಿನೆನ್ಸಿಸ್‌ ಎಂಬ ಎಲೆಯ ಸಾರದ ಮಿಶ್ರಣ ಒಳಗೊಂಡಿದ್ದು, oxymoronic ಎಂಬ ಕಚ್ಚಾ ಕಾಗದದಲ್ಲಿ ಹಾಕಿ ಕೈಯಿಂದಲೇ ಸುರುಳಿ ಸುತ್ತ ಲಾಗಿರುತ್ತದೆ. ಹಾಗಾಗಿ, ಯಾವುದೇ ರೀತಿಯಿಂದ ಇದು ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂದು ಸಂಸ್ಥೆಯ ಸಂಸ್ಥಾಪಕ ಗಣೇಶ್‌ “ಉದಯವಾಣಿ’ಗೆ ಮಾಹಿತಿ ನೀಡಿದರು.

ಹೊರ ರಾಜ್ಯಗಳಲ್ಲೂ ಪೂರೈಕೆ: ಇತ್ತೀಚೆಗಷ್ಟೇ ಇದನ್ನು ಪರಿಚಯಿಸಲಾಗಿದ್ದು, ವಾರ್ಷಿಕ 10ರಿಂದ 20 ಸಾವಿರ ಸಾವಯವ ಸಿಗರೇಟ್‌ ಬಾಕ್ಸ್‌ಗಳು ಮಾರಾಟ ಆಗುತ್ತಿವೆ. ಮಹಾರಾಷ್ಟ್ರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಕೇರಳ ಸೇರಿದಂತೆ ವಿವಿಧೆಡೆ ಪೂರೈಕೆ ಮಾಡಲಾಗುತ್ತಿದೆ. ನಗರದ ಎಲ್ಲ ಸಾವಯವ ಮಳಿಗೆಗಳಲ್ಲೂ ಇದು ಲಭ್ಯ. ಇದರಲ್ಲಿ ರೆಗ್ಯುಲರ್‌, ಮೆಂಥಾಲ್‌ ಮತ್ತು ಮೈಲ್ಡ್‌ ಎಂಬ ಮೂರು ಪ್ರಕಾರಗಳಿವೆ. ಸಾಮಾನ್ಯ ಸಿಗರೇಟ್‌ ಸೇವನೆ ನೀಡುವ ಸ್ವಾದವನ್ನೇ ಹೆಚ್ಚು ಕಡಿಮೆ ಸಾವಯವ ಸಿಗರೇಟ್‌ನಲ್ಲೂ ಪಡೆಯಬಹುದು ಎಂದರು.

ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮೂರು ದಿನಗಳ ಸಾವಯವ ಮತ್ತು ಸಿರಿಧಾನ್ಯಗಳ ಅಂತರರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಈ ಸಿಗರೇಟ್‌ ಮಳಿಗೆ ಪ್ರಮುಖ ಆಕರ್ಷಣೆಯಾಗಿದೆ. ಮೇಳಕ್ಕೆ ಭೇಟಿ ನೀಡುವ ಜನ ಮುಗಿಬಿದ್ದು ಇದನ್ನು ಖರೀದಿಸಿ, ಹೊರಗಡೆ ಹೋಗಿ ಒಂದು ಧಮ್‌ ಎಳೆದುಬರುವುದು ಸಾಮಾನ್ಯವಾಗಿ ಕಂಡುಬರುತ್ತದೆ.

ಒಂದು ಪ್ಯಾಕಿಗೆ 255 ರೂ.!
ಸಾಮಾನ್ಯ ಸಿಗರೇಟಿನ ಬೆಲೆ ಒಂದಕ್ಕೆ 15 ರೂ. ಆದರೆ, ಇದರ ಬೆಲೆ 25 ರೂ. ಒಂದು ಪ್ಯಾಕೆಟ್‌ಗೆ 255 ರೂ. ನಿಗದಿಪಡಿಸಿದ್ದು, ಇದರಲ್ಲಿ 10 ಸಿಗರೇಟ್‌ಗಳಿರುತ್ತವೆ. ಒಮ್ಮೆ ಸೇವನೆ ಮಾಡಿದರೆ, ನಾಲ್ಕು ತಾಸು ಮತ್ತೆ ಸಿಗರೇಟ್‌ ಹತ್ತಿರಕ್ಕೆ ಹೋಗಲು ಮನಸ್ಸು ಬರುವುದಿಲ್ಲ. ಎಲ್ಲೆಡೆ “ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ’ ಎಂದು ಫ‌ಲಕಗಳು ಮತ್ತು ಜಾಗೃತಿ ಫ‌ಲಕಗಳಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಫ‌ಲ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅದಕ್ಕೆ ಪರ್ಯಾಯವಾಗಿ ಆರೋಗ್ಯಕ್ಕೆ ಪೂರ ಕವಾದ ಸಿಗರೇಟ್‌ ಯಾಕೆ ಪರಿಚಯಿಸಬಾರದು ಎಂಬ ಚಿಂತನೆ ಹೊಳೆಯಿತು. ಅದರ ಫ‌ಲವೇ ಈ “ಆಗ್ಯಾìನಿಕ್‌ ಸ್ಮೋಕ್ಸ್‌’ (organic smokes) ಎಂದು ಅವರು ತಿಳಿಸಿದರು.

ವಿಜಯ್‌ ಕುಮಾರ್‌ ಚಂದರಗಿ 

ಟಾಪ್ ನ್ಯೂಸ್

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಯತ್ನಾಳ್

Loksabha Election; ಈಶ್ವರಪ್ಪ ಬಂಡಾಯವನ್ನು ರಾಜಾಹುಲಿ ಶಮನ ಮಾಡಲಿ: ಯತ್ನಾಳ್

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.