ಪೋನ್‌ ಕದ್ದಾಲಿಕೆ ತನಿಖೆ ಚುರುಕು

Team Udayavani, Sep 7, 2019, 3:00 AM IST

ಬೆಂಗಳೂರು: ಹಿರಿಯ ಪೊಲೀಸ್‌ ಅಧಿಕಾರಿಗಳು ಹಾಗೂ ಪ್ರಮುಖ ರಾಜಕಾರಣಿಗಳು ಸೇರಿದಂತೆ ಹಲವು ಮಂದಿಯ ಫೋನ್‌ ಕದ್ದಾಲಿಕೆ ಆರೋಪ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಬಿಐ, ಡೇಟಾ ಸಂಗ್ರಹ ಕಾರ್ಯ ಮುಂದುವರಿಸಿದೆ.

ಪೋನ್‌ ಕದ್ದಾಲಿಕೆ ನಡೆದಿರುವ ಆಡುಗೋಡಿಯಲ್ಲಿರುವ ಸಿಸಿಬಿ ತಾಂತ್ರಿಕ ವಿಭಾಗದಿಂದ ಜಪ್ತಿ ಪಡಿಸಿಕೊಂಡಿದ್ದ ಕದ್ದಾಲಿಕೆ ಸಾಧನದಿಂದ ಡೇಟಾ ಸಂಗ್ರಹಿಸುತ್ತಿದ್ದು, ಕದ್ದಾಲಿಕೆ ನಡೆದಿರುವವರ ಮಾಹಿತಿಯನ್ನು ಕ್ರೋಢಿಕರಣ ಮಾಡುತ್ತಿದೆ. ತನಿಖೆಗೆ ನಿಗದಿಗೊಂಡಿರುವ 2018ರ ಅಕ್ಟೋಬರ್‌ 1ರಿಂದ 2019ರ ಆಗಸ್ಟ್‌ 9ರವರೆಗೆ ನಡೆದಿರುವ ಕದ್ದಾಲಿಕೆಯ ಮಾಹಿತಿಯ ಸಂಪೂರ್ಣ ಸಂಗ್ರಹ ಪೂರ್ಣಗೊಳಿಸುವ ಹಂತದಲ್ಲಿದೆ.

ಮಾಹಿತಿ ಕ್ರೋಢಿಕರಣದ ಬಳಿಕ ಕದ್ದಾಲಿಕೆಗೆ ಸೂಚಿಸಿದ ಹಿರಿಯ ಪೊಲೀಸ್‌ ಅಧಿಕಾರಿಗಳು, ಕದ್ದಾಲಿಕೆ ನಡೆಸಿದ ಅಧಿಕಾರಿಗಳು ಹಾಗೂ ಕದ್ದಾಲಿಕೆಯ ಧ್ವನಿಮುದ್ರಿಕೆಯನ್ನು ಬಹಿರಂಗಗೊಳಿಸಿದ ಎಲ್ಲ ಆರೋಪಿತರಿಗೆ ನೋಟಿಸ್‌ ನೀಡಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ