Udayavni Special

ಸಿದ್ದು ಹಣಿಯಲು ಗೌಡರ ಕುರುಬ ಅಸ್ತ್ರ


Team Udayavani, Aug 8, 2018, 6:00 AM IST

33.jpg

ಬೆಂಗಳೂರು: ಸುಮಾರು ಎರಡು ದಶಕಗಳಿಂದ ಸಿದ್ದರಾಮಯ್ಯ ನಿಯಂತ್ರಣದಲ್ಲಿದ್ದ ಕುರುಬ ಸಮುದಾಯದ ಮತ ಬ್ಯಾಂಕ್‌ಗೆ ಈ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೇ ಲಗ್ಗೆ ಇಡಲು ಜೆಡಿಎಸ್‌, ಬಿಜೆಪಿ ಮುಂದಾಗಿವೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ “ಖದರ್‌’ ಕಡಿಮೆಯಾಗುತ್ತಿದೆ ಎಂದು ಬಿಂಬಿತವಾಗುತ್ತಿದ್ದಂತೆ ಅವರೊಂದಿಗಿರುವ ಕುರುಬ ಸಮುದಾ ಯವನ್ನು ತಮ್ಮತ್ತ ಸೆಳೆಯಲು ಕಾರ್ಯತಂತ್ರದಲ್ಲಿ ಮುಳುಗಿವೆ. ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಟ ಎಚ್‌.ಡಿ.ದೇವೇಗೌಡರು ಮೊದಲ ಬಾಣ ಬಿಟ್ಟಿದ್ದು, ಎಚ್‌.ವಿಶ್ವನಾಥ್‌ “ಅಸ್ತ್ರ’ ಬಳಸಿ ಈ ಚುನಾವಣೆಯಲ್ಲೇ ಯಶಸ್ಸು ಕಾಣಲು ಕಾರ್ಯತಂತ್ರ ರೂಪಿಸಿದ್ದಾರೆ. ಈ ಚುನಾವಣೆಯಲ್ಲಿ ಕುರುಬ ಸಮುದಾಯದವರಿಗೆ ಅತೀ ಹೆಚ್ಚು ಕಡೆ ಸ್ಪರ್ಧೆಗೆ ಅವಕಾಶ ನೀಡಲು  ಸೂಚಿಸಿದ್ದು, ಉತ್ತರ ಕರ್ನಾಟಕ ಭಾಗ “ಟಾರ್ಗೆಟ್‌’ ಮಾಡಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಬೆನ್ನಿಗೆ ನಿಂತಿರುವ ಕುರುಬ ಸಮುದಾಯವನ್ನು ಚದುರಿಸಿ ಜೆಡಿಎಸ್‌ ಬಲ ಹೆಚ್ಚಿಸಿಕೊಳ್ಳುವುದು ಮತ್ತು ಜೆಡಿಎಸ್‌ ಒಕ್ಕಲಿಗರ ಪಕ್ಷ ಎಂಬ ಹಣೆಪಟ್ಟಿಯಿಂದ ಹೊರಬರುವ ಮಾಸ್ಟರ್‌ ಪ್ಲಾನ್‌ ಇದು.

ಪ್ರದೇಶ ಕುರುಬರ ಸಂಘ ಕಟ್ಟಿ ಬೆಳೆಸುವಲ್ಲಿ ಸಿದ್ದರಾಮಯ್ಯ ಅವರಷ್ಟೇ ಶ್ರಮ ಹಾಕಿರುವ ಎಚ್‌.ವಿಶ್ವನಾಥ್‌ ಹಳೇ ಮೈಸೂರು ಭಾಗವಷ್ಟೇ ಅಲ್ಲದೆ ಉತ್ತರ ಕರ್ನಾಟಕ ಭಾಗದಲ್ಲೂ ಹಿಡಿತ ಹೊಂದಿದ್ದಾರೆ.  ಎಚ್‌.ಡಿ.ದೇವೇಗೌಡ-ಸಿದ್ದರಾಮಯ್ಯ ಒಂದಾಗಿದ್ದ ಸಂದರ್ಭದಲ್ಲಿ ಒಕ್ಕಲಿಗ ಹಾಗೂ ಕುರುಬ ಸಮುದಾಯದ ಸಮೀಕರಣ ರಾಜಕೀಯವಾಗಿ ದೊಡ್ಡ ಶಕ್ತಿಯಾಗಿತ್ತು. ಸಿದ್ದರಾಮಯ್ಯ ನಿರ್ಗಮನದ ಬಳಿಕ ಜೆಡಿಎಸ್‌ ಬಗ್ಗೆ ಕುರುಬ ಸಮುದಾಯ ಅಷ್ಟಕ್ಕಷ್ಟೇ ಎಂಬಂತಿತ್ತು. ಮತ್ತೆ ಅದೇ ತಂತ್ರ ಅನುಸರಿಸಲು ದೇವೇಗೌಡರು ವಿಶ್ವನಾಥ್‌ ಅವರಿಗೆ ಪಟ್ಟ ಕಟ್ಟಿದ್ದಾರೆ. ವಿಶ್ವನಾಥ್‌ ಅಹಿಂದ ನಾಯಕ ರಾಗಿಯೂ ಬಿಂಬಿಸಿಕೊಂಡಿರುವುದರಿಂದ ಜೆಡಿಎಸ್‌ಗೆ ಲಾಭವಾಗಲಿದೆ ಎಂಬ ಲೆಕ್ಕಾಚಾರವಿದೆ.

ಈಶ್ವರಪ್ಪ ಸಾಹಸ
ಮತ್ತೂಂದೆಡೆ ಬಿಜೆಪಿ ನಾಯಕ ಕೆ.ಎಸ್‌. ಈಶ್ವರಪ್ಪ ಅವರೂ ಪಕ್ಷದಲ್ಲಿ ತಮ್ಮ ಶಕ್ತಿ ಸಾಬೀತುಪಡಿಸಿಕೊಳ್ಳಲು ಕುರುಬ ಸಮುದಾಯವನ್ನೇ ನೆಚ್ಚಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರು. ಮುಂದಿನ ಅವಕಾಶ ನನಗೆ ಇದೆೆ. ಸಮುದಾಯ ಬೆಂಬಲ ಇದ್ದರೆ ಪಕ್ಷ ಗುರುತಿಸಲಿದೆ ಎಂದು ಇತ್ತೀಚೆಗೆ ಆಪ್ತ ಬಳಗದ ಜತೆ ಹೇಳಿಕೊಂಡಿದ್ದಾರೆ. ಹೀಗಾಗಿ ಪಕ್ಷದಲ್ಲಿ ತಮ್ಮ ಬಲ ಹೆಚ್ಚಿಸಿಕೊಳ್ಳಲು ಅವರೂ ಕುರುಬ ಸಮುದಾಯದ ಬೆಂಬಲ ಪಡೆಯಲು ಹರಸಾಹಸ ನಡೆಸುತ್ತಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುರುಬ ಸಮುದಾಯಕ್ಕೆ ಹೆಚ್ಚು ಕಡೆ ಸ್ಪರ್ಧೆಗೆ ಅವಕಾಶ ಕೊಡಬೇಕು ಎಂದು ಯಡಿಯೂರಪ್ಪ ಅವರ ಬಳಿ ಬೇಡಿಕೆಯನ್ನೂ ಇಟ್ಟಿದ್ದಾರೆ. ಜತೆಗೆ ಯಡಿಯೂರಪ್ಪ ಸಹ ಚುನಾವಣೆ ಬಳಿಕ ಸಿದ್ದರಾಮಯ್ಯ ಬಗ್ಗೆ ಮೃದು ಧೋರಣೆ ತಾಳಿ ಆ ಮೂಲಕ ಕುರುಬ ಸಮುದಾಯದ ಒಲವು ಗಳಿಸುವ ಪ್ರಯತ್ನವನ್ನೂ ಮಾಡುತ್ತಿರುವುದು ಗುಟ್ಟೇನಲ್ಲ. ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಹಾಗೂ ಕುರುಬ ಸಮುದಾಯದ ಬೆಂಬಲ ಸಾರಾಸಗಟಾಗಿ ದೊರೆತರೆ ವೈಯಕ್ತಿಕವಾಗಿಯೂ ತಮ್ಮ ಶಕ್ತಿ ವೃದ್ಧಿಯಾಗಲಿದೆ ಎಂಬ ಲೆಕ್ಕಾಚಾರ ಅವರದು.

ಸಿದ್ದು ನಡೆ ಕುತೂಹಲ 
ಜೆಡಿಎಸ್‌ನ ಅಧ್ಯಕ್ಷರಾಗಿ ಎಚ್‌.ವಿಶ್ವನಾಥ್‌ ನೇಮಕದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಮುಂದಿನ ನಡೆ ಏನಿರಬಹುದು ಎಂಬುದು ಕುತೂಹಲ ಮೂಡಿಸಿದೆ. ಈ ಮೊದಲೇ ಮೈಸೂರಿನಲ್ಲಿ ಜಿ.ಟಿ. ದೇವೇಗೌಡರಿಗೆ ಹೆಚ್ಚು ಅಧಿಕಾರ ನೀಡುವ ಮೂಲಕ ತವರು ಜಿಲ್ಲೆಯಲ್ಲಿ ಶಕ್ತಿ ಕುಂದಿಸಲಾಗಿತ್ತು. ಈ ಬಗ್ಗೆ ಸಿದ್ದರಾಮಯ್ಯ ಅವರಿಗೂ ಅಸಮಾಧಾನವಿದ್ದು ಲೋಕಸಭೆ ಚುನಾವಣೆವರೆಗೂ ಕಾದು ನೋಡಲಿದ್ದಾರೆ ಎನ್ನುತ್ತಾರೆ ಅವರ ಆಪ್ತರು. 

ಎಸ್‌. ಲಕ್ಷ್ಮೀನಾರಾಯಣ 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Sannu-01

ಶಾರ್ಜಾ ಮೈದಾನದಲ್ಲಿ ಸ್ಯಾಮ್ಸನ್-ಸ್ಮಿತ್ ಸ್ಪೋಟಕ ಜೊತೆಯಾಟ ; ಚೆನ್ನೈಗೆ 217 ರನ್ ಟಾರ್ಗೆಟ್

IPL

ಕೀಡಾಕ್ಷೇತ್ರದಲ್ಲಿ ದಾಖಲೆ ಬರೆದ ಐಪಿಎಲ್‌ ಉದ್ಘಾಟನಾ ಪಂದ್ಯ; 20 ಕೋಟಿ ವೀಕ್ಷಣೆ !

Gilirama

Viral Video: ದೈತ್ಯ ಗಿಳಿಯ ಫುಟ್ಬಾಲ್ ಮೋಹ ; ಆಟಗಾರ್ತಿಯ ತಲೆಯೇರಿದ್ದೇಕೆ ಗಿಣಿರಾಮ?

paytm

ಗೂಗಲ್‌ ಪ್ಲೇ ಸ್ಟೋರ್‌ V/S ಪೇಟಿಎಂ; ಅಷ್ಟಕ್ಕೂ Paytm ಜೂಜಿನ ಆ್ಯಪ್‌‌ ಆಗಿದ್ದು ಹೇಗೆ?

hunasur

ಹುಣಸೂರು: ಜಮೀನಿನಲ್ಲಿ ಗಾಂಜಾ ಬೆಳೆ; ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

sucide

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಕೊಚ್ಚಿ ಕೊಲೆಗೈದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ !

ರಿಯಾಗಿಲ್ಲ ರಿಲೀಫ್ ; ನ್ಯಾಯಾಂಗ ಬಂಧನ ವಿಸ್ತರಣೆ

ರಿಯಾಗಿಲ್ಲ ರಿಲೀಫ್ ; ನ್ಯಾಯಾಂಗ ಬಂಧನ ವಿಸ್ತರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hunasur

ಹುಣಸೂರು: ಜಮೀನಿನಲ್ಲಿ ಗಾಂಜಾ ಬೆಳೆ; ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

sucide

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಕೊಚ್ಚಿ ಕೊಲೆಗೈದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ !

200ಕ್ಕೂ ಹೆಚ್ಚು ಸಹಾಯಕ ನಿರ್ದೇಶಕರು ತಾಲೂಕು ಮಟ್ಟದ ಹುದ್ದೆಗೆ ನಿಯುಕ್ತಿ : ಸಚಿವ ಚವ್ಹಾಣ್

200ಕ್ಕೂ ಹೆಚ್ಚು ಸಹಾಯಕ ನಿರ್ದೇಶಕರು ತಾಲೂಕು ಮಟ್ಟದ ಹುದ್ದೆಗೆ ನಿಯುಕ್ತಿ : ಸಚಿವ ಚವ್ಹಾಣ್

dk-shivakumar

ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಅಮಾನವೀಯವಾಗಿ ವರ್ತಿಸಿದೆ: ಡಿ.ಕೆ ಶಿವಕುಮಾರ್

TIPPER

ಗ್ರಾಮೀಣ ಯುವಕನ ಸಾಧನೆ: ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ !

MUST WATCH

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

udayavani youtube

Manipal: Multi-storey building in danger | inspection by DC Jagadeesh

udayavani youtube

ಗೇರು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆಹೊಸ ಸೇರ್ಪಡೆ

ರೂಪ ಕೈಕೊಟ್ಟರೂ ಬುದ್ಧಿಕೈಕೊಡಲಿಲ್ಲ!

ರೂಪ ಕೈಕೊಟ್ಟರೂ ಬುದ್ಧಿಕೈಕೊಡಲಿಲ್ಲ!

Sannu-01

ಶಾರ್ಜಾ ಮೈದಾನದಲ್ಲಿ ಸ್ಯಾಮ್ಸನ್-ಸ್ಮಿತ್ ಸ್ಪೋಟಕ ಜೊತೆಯಾಟ ; ಚೆನ್ನೈಗೆ 217 ರನ್ ಟಾರ್ಗೆಟ್

ಕೊಡಬೇಕಿದ್ದ ಪ್ರೇಮ ಪತ್ರ ಅಲ್ಲೆಲ್ಲೋ ಬಿದ್ದುಹೋಗಿತ್ತು…

ಕೊಡಬೇಕಿದ್ದ ಪ್ರೇಮ ಪತ್ರ ಅಲ್ಲೆಲ್ಲೋ ಬಿದ್ದುಹೋಗಿತ್ತು…

IPL

ಕೀಡಾಕ್ಷೇತ್ರದಲ್ಲಿ ದಾಖಲೆ ಬರೆದ ಐಪಿಎಲ್‌ ಉದ್ಘಾಟನಾ ಪಂದ್ಯ; 20 ಕೋಟಿ ವೀಕ್ಷಣೆ !

ಇನ್ನೊಬ್ಬರನ್ನು ಮೆಚ್ಚಿಸಿ ಏನುಪಯೋಗ?

ಇನ್ನೊಬ್ಬರನ್ನು ಮೆಚ್ಚಿಸಿ ಏನುಪಯೋಗ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.