
ಮುಂದಿನ ದಿನಗಳಲ್ಲಿ ಕರ್ನಾಟಕವು ಯಶಸ್ಸಿನ ಹೊಸ ಎತ್ತರವನ್ನು ಏರಲಿ: ಪ್ರಧಾನಿ ಮೋದಿ
Team Udayavani, Nov 1, 2021, 9:22 AM IST

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅಗಲಿಕೆಯ ಬೇಸರದಲ್ಲೇ ರಾಜ್ಯ ಸರ್ಕಾರ ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಿಸುತಿದ್ದು, 66ನೇ ಕನ್ನಡ ರಾಜ್ಯೋತ್ಸವಕ್ಕೆ ಗಣ್ಯರು ಶುಭಾಶಯ ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿ ಶುಭಾಶಯ ಕೋರಿದ್ದು, ಕರ್ನಾಟಕ ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಶುಭ ಹಾರೈಕೆಗಳು. ಕರ್ನಾಟಕವು ತನ್ನ ಜನರ ಹೊಸತನದ ಶೋಧದ ತುಡಿತದಿಂದಾಗಿ ವಿಶೇಷ ಛಾಪು ಮೂಡಿಸಿದೆ. ರಾಜ್ಯವು ಅತ್ಯುತ್ಕೃಷ್ಟ ಸಂಶೋಧನೆ ಮತ್ತು ಉದ್ಯಮ ಶೀಲತೆಯಿಂದಾಗಿ ಮುಂಚೂಣಿಯಲ್ಲಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕವು ಯಶಸ್ಸಿನ ಹೊಸ ಎತ್ತರವನ್ನು ಏರಲಿ ಎಂದು ಹಾರೈಸಿದ್ದಾರೆ.
ಕರ್ನಾಟಕ ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಶುಭ ಹಾರೈಕೆಗಳು. ಕರ್ನಾಟಕವು ತನ್ನ ಜನರ ಹೊಸತನದ ಶೋಧದ ತುಡಿತದಿಂದಾಗಿ ವಿಶೇಷ ಛಾಪು ಮೂಡಿಸಿದೆ. ರಾಜ್ಯವು ಅತ್ಯುತ್ಕೃಷ್ಟ ಸಂಶೋಧನೆ ಮತ್ತು ಉದ್ಯಮಶೀಲತೆಯಿಂದಾಗಿ ಮುಂಚೂಣಿಯಲ್ಲಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕವು ಯಶಸ್ಸಿನ ಹೊಸ ಎತ್ತರವನ್ನು ಏರಲಿ.
— Narendra Modi (@narendramodi) November 1, 2021
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು , ‘ನಾಡಿನ ಸಮಸ್ತ ಜನತೆಗೆ ೬೬ನೇ ಕನ್ನಡ ರಾಜ್ಯೋತ್ಸವದ ಹೃತ್ಪೂರ್ವಕ ಶುಭಕಾಮನೆಗಳು. ನಾಡಿನ ಏಕತೆ, ಸ್ವಾಭಿಮಾನ, ಸಾಮರಸ್ಯ, ಸಹಬಾಳ್ವೆಯ ಸಂಕೇತವಾದ ರಾಜ್ಯೋತ್ಸವ ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆಯ ಆಚರಣೆ. ನಮ್ಮ ಕನ್ನಡದ ಅಸ್ಮಿತೆ ಸದಾ ಜಾಗೃತವಾಗಿರಲಿ, ಕನ್ನಡತನದ ಅಭಿಮಾನ ನಿರಂತರವಾಗಿರಲಿ” ಎಂದು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು , ‘ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ನಾಡು, ನುಡಿ, ಜನಪದ, ಇತಿಹಾಸ, ಪರಂಪರೆ, ಸಂಸ್ಕೃತಿಗಳನ್ನು ಉಳಿಸುವ, ಬೆಳೆಸುವ ದೃಢ ಸಂಕಲ್ಪ ನಮ್ಮದಾಗಿರಲಿ. ಸಮೃದ್ಧ, ಆರೋಗ್ಯಪೂರ್ಣ, ಪ್ರಗತಿಶೀಲ ನವಕರ್ನಾಟಕದ ನಿರ್ಮಾಣದ ನಿಟ್ಟಿನಲ್ಲಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸೋಣ’ ಎಂದು ಕೂ ಮಾಡಿದ್ದಾರೆ.
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ , ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ’ ಎಂದು ಶುಭ ಕೋರಿದ್ದಾರೆ.
ಸಂಸದ ಬಿ ವೈ ರಾಘವೇಂದ್ರ , ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಏಕೀಕರಣ ಚಳುವಳಿಯ ಮೂಲಕ ಹಲವು ಪ್ರಾಂತ್ಯಗಳಲ್ಲಿ ಚದುರಿ ಹೋಗಿದ್ದ ನಾಡನ್ನು ಅಖಂಡ ಕರ್ನಾಟಕವಾಗಿ ರೂಪುಗೊಳಿಸಿದ ಶ್ರೇಷ್ಠ ದಿನ. ಸಮಸ್ತ ಕನ್ನಡಿಗರ ಅಸ್ಮಿತೆ, ಸ್ವಾಭಿಮಾನದ ಪ್ರತೀಕವಾದ ದಿನ.ಕನ್ನಡ ಉಳಿಸೋಣ, ಕನ್ನಡ ಬೆಳೆಸೋಣ – ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ! ಜೈ ಭುವನೇಶ್ವರಿ !’ ಎಂದಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Kashmir; ಈ ವರ್ಷ ಜಂಟಿ ಕಾರ್ಯಾಚರಣೆಯಲ್ಲಿ 31 ಭಯೋತ್ಪಾದಕರ ಅಂತ್ಯ

Vivek Agnihotri ಅವರ ʼದಿ ವ್ಯಾಕ್ಸಿನ್ ವಾರ್ʼ ಸಿನಿಮಾಕ್ಕೆ ಪೈರಸಿ ಕಾಟ; HD ಕಾಪಿ ಲೀಕ್

Thane ನಕಲಿ ಕರೆನ್ಸಿ ಪ್ರಕರಣ; ಉಗ್ರ’ಅಂಕಲ್’ಸೇರಿ ನಾಲ್ವರ ವಿರುದ್ಧ ಎನ್ಐಎ ಚಾರ್ಜ್ ಶೀಟ್

ಒತ್ತುವರಿ ತೆರವಿಗೆ ರಾಜ್ಯಮಟ್ಟದ ಕಾರ್ಯಪಡೆ:ಅರಣ್ಯ ಸಚಿವರ ಟಿಪ್ಪಣೆಗೆ ರವೀಂದ್ರ ನಾಯ್ಕ ಆಕ್ಷೇಪ

Theft in Temple: ದೇವಸ್ಥಾನದಲ್ಲಿ ಕಳ್ಳತನ ಮಾಡಲು ಬಂದು ಸಿಕ್ಕಿಬಿದ್ದ ಕಳ್ಳರು