ಮನೆ ಬಾಗಿಲಿಗೆ ಪಿಂಚಣಿ ಕಾರ್ಯಕ್ರಮ ಮುಂದೂಡಿಕೆ
Team Udayavani, Jan 19, 2022, 10:00 PM IST
ಬೆಂಗಳೂರು:ಮನೆ ಬಾಗಿಲಿಗೆ ಪಹಣಿ ಹಾಗೂ ರೈತರಿಗೆ ಅಗತ್ಯವಾದ ದಾಖಲೆ ವಿತರಿಸುವಕಾರ್ಯಕ್ರಮಕ್ಕೆ ಜ.26 ರಂದು ಚಾಲನೆ ನೀಡಲು ಉದ್ದೇಶಿಸಲಾಗಿತ್ತಾದರೂ ಇದೀಗ ಮುಂದೂಡಲಾಗಿದೆ.
ಕೊರೊನಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಲಾಗಿದ್ದು ಫೆಬ್ರವರಿ ತಿಂಗಳಲ್ಲಿ ಆಯೋಜಿಸು ನಿರ್ಧರಿಸಲಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.
40 ಲಕ್ಷ ರೈತರಿಗೆ ಪಹಣಿ ಮತ್ತು ಇತರೆ ಅಗತ್ಯ ದಾಖಲೆ ಮನೆ ಬಾಗಿಲಿಗೆ ತಲುಪಿಸುವ ಸಂಬಂಧ ಈಗಾಗಲೇ ಕಂದಾಯ ಇಲಾಖೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಜ.26 ರಂದು ರಾಜ್ಯವ್ಯಾಪಿ ಚಾಲನೆ ನೀಡಲು ಉದ್ದೇಶಿಸಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಕಾರ್ಯಕ್ರಮ ಮುಂದೂಡಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.