ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ

Team Udayavani, Jan 26, 2020, 3:08 AM IST

ಬೆಂಗಳೂರು: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್‌ ಇಲಾಖೆಯ 19 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಈ ಬಾರಿಯ ರಾಷ್ಟ್ರಪತಿ ಪದಕ ಲಭಿಸಿದೆ.

ರಾಜ್ಯದ ಎಸ್ಪಿ, 9 ಮಂದಿ ಡಿವೈಎಸ್ಪಿ, ಇಬ್ಬರು ಇನ್‌ಸ್ಪೆಕ್ಟರ್‌, ಒಬ್ಬರು ಸಬ್‌ ಇನ್‌ಸ್ಪೆಕ್ಟರ್‌, ಮೂವರು ಅಸಿ ಸ್ಟೆಂಟ್‌ ಸಬ್‌ ಇನ್‌ಸ್ಪೆಕ್ಟರ್‌(ಎಎಸ್‌ಐ), ಮೂವರು ಮುಖ್ಯ ಪೇದೆಗಳು ರಾಷ್ಟ್ರಪತಿ ಪದಕಕ್ಕೆ ಭಾಜನ ರಾಗಿದ್ದಾರೆ. ಎಸ್ಪಿ: ಬಿ.ಎನ್‌.ಓಬಳೇಶ್‌ (ಬಿಎಂಟಿಎಫ್, ಬೆಂಗಳೂರು),

ಡಿವೈಎಸ್ಪಿ: ಕೆ.ಎಂ.ಮಹಾದೇವ ಪ್ರಸಾದ್‌( ಕಮಾಂ ಡೆಂಟ್‌, ಐಆರ್‌ಬಿ, ಮುನಿರಾ ಬಾದ್‌), ಎಂ.ಜಿ.ಪಂಪಾ ಪತಿ (ಎಸಿಪಿ, ಮಾರತ್‌ಹಳ್ಳಿ, ಬೆಂಗಳೂರು), ಎಚ್‌.ಎನ್‌. ಧರ್ಮೇಂದ್ರ (ಎಸಿಪಿ, ವಿಜಯನಗರ, ಬೆಂಗಳೂರು), ಎಸ್‌.ಟಿ.ಚಂದ್ರಶೇಖರ್‌ (ಡಿವೈಎಸ್ಪಿ, ಸಿಐಡಿ), ಶಂಕರ್‌ ಎಂ.ರಾಗಿ (ಎಸಿಪಿ, ಉತ್ತರ ಉಪ ವಿಭಾಗ, ಹುಬ್ಬಳ್ಳಿ ನಗರ), ಸಿ.ಸಿದ್ದರಾಜು(ಡಿವೈಎಸ್ಪಿ, ಎಸ್‌ಐಟಿ, ಕೆಎಲ್‌ಎ, ಬೆಂಗಳೂರು), ಎ.ಜಿ.ಕರಿಯಪ್ಪ (ಡಿವೈಎಸ್ಪಿ, ಎಸ್‌ಐಟಿ, ಕೆಎಲ್‌ಎ, ಬೆಂಗಳೂರು), ಸಂಗಪ್ಪ ಎಸ್‌. ಹುಲ್ಲೂರು (ಡಿವೈಎಸ್ಪಿ, ಕಲಬುರಗಿ ಗ್ರಾಮಾಂತರ ಉಪವಿಭಾಗ), ಎ.ವಿ.ಲಕ್ಷ್ಮೀನಾರಾಯಣ (ಡಿವೈಎಸ್ಪಿ, ಮಾಗಡಿ ತಾಲೂಕು, ರಾಮನಗರ ಜಿಲ್ಲೆ).

ಇನ್‌ಸ್ಪೆಕ್ಟರ್‌: ಬಿ.ಜಿ.ಶಂಕರಪ್ಪ (ಪಿಐ, ಸಿಐಡಿ), ಬಿ.ಎಸ್‌.ಸತೀಶ್‌ (ಪಿಐ, ಎಸಿಬಿ, ಉಡುಪಿ ಜಿಲ್ಲೆ).

ಸಬ್‌ಇನ್‌ಸ್ಪೆಕ್ಟರ್‌: ಬಾಬುಸಿಂಗ್‌ ಎಚ್‌.ಕಿತ್ತೂರು (ಪಿಎಸ್‌ಐ, ಎಫ್ಪಿಯು, ಹುಬ್ಬಳ್ಳಿ-ಧಾರವಾಡ ನಗರ).

ಅಸಿಸ್ಟೆಂಟ್‌ ಸಬ್‌ಇನ್‌ಸ್ಪೆಕ್ಟರ್‌(ಎಎಸ್‌ಐ): ಕೆ.ವೆಂಕಟೇಶ್‌ (ಬಸವನಗುಡಿ ಸಂಚಾರ ಠಾಣೆ, ಬೆಂಗಳೂರು), ಎಸ್‌.ಸುಕುಮಾರ್‌ (ಚಿಕ್ಕಮಗಳೂರು ಗ್ರಾಮಾಂತರ), ರಾಜಕುಮಾರ್‌ (ಎಆರ್‌ಎಸ್‌ಐ, ಡಿಎಆರ್‌, ಮೈಸೂರು).

ಹೆಡ್‌ಕಾನ್‌ಸ್ಟೆಬಲ್‌: ಪಿ.ಎಸ್‌.ಶಿವಕುಮಾರ್‌ (ರಾಜ್ಯ ಗುಪ್ತಚರ ಇಲಾಖೆ, ಬೆಂಗಳೂರು), ಜಿ.ಸಿ.ನಂಜುಂಡಯ್ಯ (ರಾಜ್ಯ ಗುಪ್ತಚರ ಇಲಾಖೆ, ಬೆಂಗಳೂರು), ಆರ್‌.ರಂಗನಾಥ್‌ (ಎಸ್‌ಸಿಆರ್‌ಬಿ, ಬೆಂಗಳೂರು).

ಇವರಿಗೆ ಸದ್ಯದಲ್ಲೇ ರಾಜ್ಯಪಾಲ ವಜುಭಾಯ್‌ ವಾಲಾ ಅವರು ರಾಷ್ಟ್ರಪತಿ ಪದಕ ವಿತರಿಸಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ