- Friday 13 Dec 2019
ಪ್ರಧಾನಿ ಮೋದಿ ಅಪ್ಪಟ ಸುಳ್ಳುಗಾರ : ಸಿಎಂ ಕುಮಾರಸ್ವಾಮಿ
Team Udayavani, Mar 9, 2019, 2:09 AM IST
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅಪ್ಪಟ ಸುಳ್ಳುಗಾರ. ಅವರ ಬಣ್ಣದ ಮಾತುಗಳಿಗೆ ಜನರು ಮರುಳಾಗಬಾರದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬೆಟ್ಟಹಲಸೂರು ಗ್ರಾಮ ಪಂಚಾಯ್ತಿಯ ಕುದುರೆಗೆ ಗ್ರಾಮದಲ್ಲಿ ಶುಕ್ರವಾರ “1ಲಕ್ಷ ಬಹುಮಹಡಿ ಬೆಂಗಳೂರು ನಗರ ವಸತಿ ಯೋಜನೆ’ಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರೈತರ ಖಾತೆಗಳಿಗೆ ಹಣಹಾಕುವ ಯೋಜನೆ ಕೂಡ ಮೋಸದ ಕಾರ್ಯಕ್ರಮ ಎಂದು ದೂರಿದರು.
“ಜೆಡಿಎಸ್-ಕಾಂಗ್ರೆಸ್’ ಸರ್ಕಾರ ಸಾಲಮನ್ನಾ ಹೆಸರಿನಲ್ಲಿ ರೈತರಿಗೆ ಮೋಸ ಮಾಡಿದೆ ಎಂದು ಟೀಕೆ ಮಾಡಿರುವ ಪ್ರಧಾನಿ ಮೋದಿ ಅವರ ಮಾತಿನಲ್ಲಿ ಯಾವುದೇ ಹುರುಳಿಲ್ಲ. ರೈತರ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದ್ದು, ಈ ವರ್ಷಾಂತ್ಯದ ವೇಳೆಗೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಹೇಳಿದರು.
ರೈತರ ಖಾತೆಗೆ ಪ್ರತಿ ವರ್ಷ 6 ಸಾವಿರ ರೂ. ಹಾಕಲಾಗುವುದು ಎಂದು ಕೇಂದ್ರ ಘೋಷಣೆ ಮಾಡಿದೆ. ದೇಶದ 12 ಕೋಟಿ ರೈತರಿಗೆ 75 ಸಾವಿರ ಕೋಟಿ ರೂ.ನೀಡಲಾಗುವುದು ಎಂದಿದೆ. ಆದರೆ ಮೋದಿ ಅವರ ಕಾರ್ಯಕ್ರಮಗಳು ಬರೀ ಸುಳ್ಳಿನ ಕಂತೆಯಿಂದ ಕೂಡಿದ್ದು, ರೈತರ ಬೆನ್ನಿಗೆ ಚೂರಿ ಹಾಕುವಲ್ಲಿ ಮೋದಿ ನಿರತರಾಗಿದ್ದಾರೆ ಎಂದು ದೂರಿದರು.
ಫಲಾನುಭವಿಗಳ ಸಂಖ್ಯೆ 17: ಕಿಸಾನ್‌ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ ರೈತರಿಗೆ 6 ಸಾವಿರ ರೂ.ನೀಡಲು ಸಿದಟಛಿವಿದೆ. ಆದರೆ ರಾಜ್ಯ ಸರ್ಕಾರ ರೈತರ ಮಾಹಿತಿಯನ್ನು ನೀಡುತ್ತಿಲ್ಲ ಎಂದು ನರೇಂದ್ರ ಮೋದಿ ದೂರಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ 8.54 ಲಕ್ಷ ರೈತರ ಅರ್ಜಿಗಳನ್ನು ಪರಿಶೀಲನೆ ಮಾಡಿ, ಅದರಲ್ಲಿ ಮಾಹಿತಿ ಸರಿಯಾಗಿರುವ 2.8 ಲಕ್ಷ ರೈತರ ಅರ್ಜಿಗಳನ್ನು ಕಿಸಾನ್ ಸಮ್ಮಾನ್ ಯೋಜನೆ ಆ್ಯಪ್‌ಗೆ ಅಪ್ ಲೋಡ್ ಮಾಡಿದೆ. ಇದರಲ್ಲಿ ಕೇವಲ 17 ಜನ ಫಲಾನುಭವಿಗಳನ್ನು ಮಾತ್ರ ಕೇಂದ್ರ ಸರ್ಕಾರ ಗುರುತಿಸಿದ್ದು, ಅದರಲ್ಲಿ 6 ಮಂದಿ ಅಕೌಂಟ್‌ಗೆ ಕೇವಲ 950 ರೂ.ಹಾಕಲಾಗಿದೆ ಎಂದು ಲೇವಡಿ ಮಾಡಿದರು.ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಕೃಷ್ಣಬೈರೇಗೌಡ, ಎಂಟಿಬಿ ನಾಗರಾಜ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.
ಅಧಿಕಾರದಲ್ಲಿರೋವರೆಗೂ ಭಯ ಬೇಡ
ಬೆಂಗಳೂರು: ಇನ್ನೂ ನಾಲ್ಕು ವರ್ಷಗಳ ಕಾಲ ನಾನು ಅಧಿಕಾರದಲ್ಲಿರುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, “ಅಧಿಕಾರದಲ್ಲಿರುವವರೆಗೂ ಸರ್ಕಾರಿ ಹಾಸ್ಟೆಲ್ ಮತ್ತು ವಸತಿಶಾಲಾ ಹೊರಗುತ್ತಿಗೆ ನೌಕರರನ್ನು ಕೈಬಿಡುವುದಿಲ್ಲ’ ಎಂದು ಭರವಸೆ ನೀಡಿದರು.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿಶಾಲಾ ಹೊರಗುತ್ತಿಗೆ ನೌಕರರ ಸಂಘ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಇನ್ನೂ ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿರುತ್ತೇನೆ. ಅಲ್ಲಿಯವರೆಗೂ ಯಾವುದೇ ನೌಕರರನ್ನು ಕೆಲಸದಿಂದ ತೆಗೆದುಹಾಕುವುದಿಲ್ಲ. ನೆಮ್ಮದಿಯಿಂದ ಕೆಲಸ ಮಾಡಿಕೊಂಡು ಹೋಗಿ’ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ನಿತ್ಯಾನಂದಸ್ವಾಮಿ, “ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಅಧಿಕಾರಿಗಳು ನಮಗೆಲ್ಲರಿಗೂ ಪುನಃ ಕೆಲಸ ನೀಡಿದ್ದಾರೆ. ಮೊದಲು ಆರು ತಿಂಗಳವರೆಗೆ ಉದ್ಯೋಗಕ್ಕೆ ತೊಂದರೆ ಇಲ್ಲ ಎನ್ನಲಾಗಿತ್ತು. ಈಗ ಮುಖ್ಯಮಂತ್ರಿಗಳೇ ತಾವು ಅಧಿಕಾರದಲ್ಲಿರುವವರೆಗೆ ತೊಂದರೆ ಇಲ್ಲ ಎಂದು ಅಭಯ ನೀಡಿದ್ದಾರೆ. ಇದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ. ಆದರೆ, ಮತ್ತೆ ಕೆಲಸಕ್ಕೆ ಸೇರಿಸಿಕೊಂಡವರಿಗೆ ಈಗ ವೇತನ ಸರಿಯಾಗಿ ದೊರೆಯುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ. ಕೆಲವೆಡೆ ವೇತನವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಈ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಲಾಗುವುದು ಎಂದರು.
ಈ ವಿಭಾಗದಿಂದ ಇನ್ನಷ್ಟು
-
ಚಿಕ್ಕಬಳ್ಳಾಪುರ: ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಸತತ ಹ್ಯಾಟ್ರಿಕ್ ಗೆಲುವು ಸಾಧಿಸಿದ ಕೀರ್ತಿಗೆ ಪಾತ್ರರಾದ ಡಾ.ಕೆ.ಸುಧಾಕರ್,...
-
ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ಎದುರಾಗಿದ್ದರಿಂದ ಸರ್ಕಾರದ ಭವಿಷ್ಯದ ಬಗ್ಗೆ ಅಧಿಕಾರಿಗಳಲ್ಲಿ ಗೊಂದಲ ಇತ್ತು. ಈಗ ಸರ್ಕಾರ ಸುಭದ್ರವಾಗಿದೆ. ಇನ್ನಾದರೂ...
-
ಬೆಂಗಳೂರು: ಸಂಪುಟ ವಿಸ್ತರಣೆಗೆ ವಿಳಂಬವಾಗಿಲ್ಲ. ಅದಕ್ಕಾಗಿ ನಮಗೇನೂ ಆತುರವೂ ಇಲ್ಲ. ನನಗೆ ಯಾವ ಖಾತೆ ಕೊಟ್ಟರೂ ಆಶೀರ್ವಾದ ಅಂತ ಸ್ವೀಕರಿಸುತ್ತೇನೆ. ಎಂದು ಶಾಸಕ...
-
ಬೆಂಗಳೂರು: ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿ ಜನರು ಸಂಕಷ್ಟ ಅನುಭವಿಸಿದ್ದು ಗೊತ್ತೇ ಇದೆ. ಉಳ್ಳಾಗಡ್ಡಿ ಬೆಲೆ ದ್ವಿಶತಕ ಸಮೀಪಿಸುತ್ತಿದ್ದಂತೆ ದೇಶದಾದ್ಯಂತ...
-
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಹೃದಯದ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನೂತನ ಬಿಜೆಪಿ...
ಹೊಸ ಸೇರ್ಪಡೆ
-
ಶಾರ್ಜಾ: ಶಾರ್ಜಾದಲ್ಲಿನ ಬೃಹತ್ ಕಟ್ಟಡಗಳ ಮಾಲಕರಿಗೆ ತಮ್ಮ ಕಟ್ಟಡದ ಸುರಕ್ಷೆಗಾಗಿ ಎಚ್ಚರ ವಹಿಸುವಂತೆ ಅವರು ದುಬೈ ಆಡಳಿತ ಸೂಚನೆ ನೀಡಿದೆ. ಅಪಾಯ ತಡೆಗಟ್ಟುವಿಕೆ...
-
ದುಬೈ: "ದ ಇಂಡಿಯನ್ ಸ್ಕೂಲ್ ದುಬೈ' ತನ್ನ ಮುಖ್ಯಕಾರ್ಯ ನಿರ್ವಹಣಾಧಿಕಾರಿಯನ್ನು ಬದಲಾಯಿಸಿದೆ. ಈ ಹಿಂದೆ ಸಿಇಒ ಆಗಿ ಕೆಲಸ ನಿರ್ವಹಿಸುತ್ತಿದ್ದ ಅಶೋಕ್ ಕುಮಾರ್...
-
ಪುತ್ತೂರು: ಚಳಿಗಾಲ ಆರಂಭವಾಗುತ್ತಿದ್ದಂತೆ ಹಕ್ಕಿಗಳ ವಲಸೆ ಆರಂಭವಾಗುತ್ತದೆ. ಪುತ್ತೂರಿನ ಹೃದಯಭಾಗದಲ್ಲಿರುವ ಗಾಂಧಿ ಕಟ್ಟೆ ಬಳಿ ಅಶ್ವತ್ಥ ಮರಕ್ಕೆ ಲಗ್ಗೆ ಇಟ್ಟಿರುವ...
-
ವಾಷಿಂಗ್ಟನ್: ಬಹು ದಿನಗಳ ನಂತರ, ಮಂಗಳನಲ್ಲಿ ಮನುಷ್ಯ ಜೀವಿಸಲು ಅನುಕೂಲವಾದ ವಾತಾವರಣ ಇರುವ ಸಿದ್ಧಾಂತ ಮತ್ತೆ ಚರ್ಚೆಗೆ ಬಂದಿದೆ. ಮಂಗಳನ ನೆಲದ ಒಂದು ಇಂಚಿನೊಳಗೆ...
-
ಮಹಾನಗರ: ಮಂಗಳೂರಿನಲ್ಲಿ ಒಂದು ವಾರದಲ್ಲಿ ಘಟಿಸುತ್ತಿರುವ ಅಪಘಾತಗಳ ಪೈಕಿ ಶೇ. 21ರಷ್ಟು ಅಪಘಾತಗಳು ರವಿವಾರದಂದೇ ಘಟಿಸುತ್ತಿವೆ. ಮೂರು ವರ್ಷಗಳ ಅವಧಿಯಲ್ಲಿ ಘಟಿಸಿದ...