Udayavni Special

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹಿಂಸೆಗೆ ಸ್ಥಾನವಿಲ್ಲ: ಮೋದಿ


Team Udayavani, May 8, 2018, 6:15 AM IST

modi-800.jpg

ಬೆಂಗಳೂರು: “ಹಿಂಸೆಗೆ ಪ್ರತಿ ಹಿಂಸೆ ಸಲ್ಲದು.ಸೇಡಿನ ಮನೋಭಾವ ಬೆಳೆಸಿಕೊಳ್ಳದೆ, ಪ್ರಜಾತಂತ್ರ ವ್ಯವಸ್ಥೆಯ ಮರ್ಯಾದೆ ಕಾಪಾಡಬೇಕು. ಅದಕ್ಕೆ ಯಾವುದೇ ರೀತಿ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು’.-ಇದು ಸೋಮವಾರ ಬಿಜೆಪಿ ಯುವ ಕಾರ್ಯಕರ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಪ್ರಧಾನಿ ಮೋದಿ ಅವರು ಈ ಕಿವಿಮಾತು ಹೇಳಿದರು.

ಹಿಂದೂ ಯುವ ಕಾರ್ಯಕರ್ತರ ಹತ್ಯೆಗಳಾಗುತ್ತಿರುವ ಬಗ್ಗೆ ಬೆಂಗಳೂರಿನ ತೇಜಸ್ವಿ ಸೂರ್ಯ ಅವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ಯಾವುದೇ ಪಕ್ಷದ ಕಾರ್ಯಕರ್ತ ಹಿಂಸೆಗೆ ಬಲಿಯಾದರೂ ಅದು ಖಂಡನೀಯ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹಿಂಸೆಗೆ ಸ್ಥಾನವಿಲ್ಲ. ದೇಶದ ಭವಿಷ್ಯದ ದೃಷ್ಟಿಯಿಂದ ಹಿಂಸೆಯನ್ನು ವಿರೋಧಿಸುವ ಮನೋಭಾವ ಪ್ರತಿಯೊಬ್ಬ ಕಾರ್ಯಕರ್ತರೂ ಬೆಳೆಸಿಕೊಳ್ಳಬೇಕು. ಈ ಮೂಲಕ ಪ್ರಜಾತಂತ್ರ ವ್ಯವಸ್ಥೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪರ-ವಿರೋಧ, ಚರ್ಚೆ, ಸಂವಾದಗಳಿಗೆ ಮುಕ್ತ ಅವಕಾಶವಿದೆ. ಆದರೆ, ಪ್ರತಿವಾದಿಗಳು ತಮ್ಮ ಮೇಲೆಯೇ ವಿಶ್ವಾಸ ಕಳೆದುಕೊಂಡಾಗ ಹಾಗೂ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಇದ್ದಾಗ, ಈ ರೀತಿಯ ಹಿಂಸಾ ಮಾರ್ಗ ತುಳಿಯುತ್ತಾರೆಂದು ತೀಕ್ಷ್ಣವಾಗಿ ಹೇಳಿದ ಅವರು, ಇದೇ ತ್ರಿಪುರಾ, ಕೇರಳ ಮತ್ತು ಕರ್ನಾಟಕದಲ್ಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ 4 ವರ್ಷಗಳಲ್ಲೇ ಸೃಷ್ಟಿ ಆಯ್ತಾ?: ನಿರುದ್ಯೋಗ ಸಮಸ್ಯೆ ನಿವಾರಣೆಯಲ್ಲಿ ಕೇಂದ್ರ ಸರ್ಕಾರ ಸೋತಿದೆ ಎಂದು ಪದೇಪದೆ ದೂರುವ ಕಾಂಗ್ರೆಸ್‌ಗೆ ನಮ್ಮ ಪ್ರತಿಕ್ರಿಯೆ ಏನಾಗಿರಬೇಕು ಎಂದು ಕೊಪ್ಪಳದ ಶರಣು ಅವರು ಕೇಳಿದ ಪ್ರಶ್ನೆಗೆ, “ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಳೆದ ನಾಲ್ಕು ವರ್ಷಗಳಲ್ಲೇ ಸೃಷ್ಟಿ ಆಯಿತೇ? ಇಲ್ಲ, ಕಳೆದ 40 ವರ್ಷಗಳಿಂದ ಸೃಷ್ಟಿಸಿದ ನಿರುದ್ಯೋಗ ಸಮಸ್ಯೆಗೆ ಈಗ ಪರಿಹಾರ ಸಿಗುತ್ತಿದೆ’ ಎಂದರು.

ಮುದ್ರಾ ಯೋಜನೆ, ವಿದೇಶಿ ನೇರ ಬಂಡವಾಳ ಹೂಡಿಕೆ, ಮೂಲಸೌಕರ್ಯಗಳ ಅಭಿವೃದ್ಧಿ ಸೇರಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.

ಕಾಂಗ್ರೆಸ್‌ ಬಳುವಳಿ: ಅದೇನೇ ಇರಲಿ, ಕಾಂಗ್ರೆಸ್‌ ಕಳೆದ 40 ವರ್ಷ ಸೃಷ್ಟಿಸಿದ ಸಮಸ್ಯೆಯು ಕೇವಲ ನಾಲ್ಕು ವರ್ಷಗಳಲ್ಲಿ ಬಗೆಹರಿಯುವಂತಹದ್ದಲ್ಲ. ನಿರುದ್ಯೋಗ ಸಮಸ್ಯೆಯೂ ಕಾಂಗ್ರೆಸ್‌ನ ಬಳುವಳಿಯಾಗಿದೆ. ಇದರ ನಿವಾರಣೆಗೆ ಸರ್ಕಾರ ಬದ್ಧ ಎಂದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಂದಾಯ ಇಲಾಖೆಗೆ ಡೀಮ್ಡ್ ಅರಣ್ಯ ಸ್ಥಳ

ಕಂದಾಯ ಇಲಾಖೆಗೆ ಡೀಮ್ಡ್ ಅರಣ್ಯ ಸ್ಥಳ

ಮಕ್ಕಳಿಗೆ ದೊರೆಯದ ಬಿಸಿಯೂಟದ ಬೇಳೆ

ಮಕ್ಕಳಿಗೆ ದೊರೆಯದ ಬಿಸಿಯೂಟದ ಬೇಳೆ

ವಿಶ್ವಾಸ ಗೆಲ್ಲಲು ಬಿಜೆಪಿ ತಂತ್ರ: ಶಾಸಕರಿಗೆ ವಿಪ್‌ ಜಾರಿ

ವಿಶ್ವಾಸ ಗೆಲ್ಲಲು ಬಿಜೆಪಿ ತಂತ್ರ: ಶಾಸಕರಿಗೆ ವಿಪ್‌ ಜಾರಿ

ಕೆಕೆಆರ್‌ – ಹೈದರಾಬಾದ್‌: ಸೋತ ತಂಡಗಳ ಸೆಣಸು

ಕೆಕೆಆರ್‌ – ಹೈದರಾಬಾದ್‌: ಸೋತ ತಂಡಗಳ ಸೆಣಸು

Anushka-Sharma

ಗಾವಸ್ಕರ್‌ ಹೇಳಿಕೆಗೆ ಅನುಷ್ಕಾ ಕಿಡಿ

ಡ್ರಗ್ಸ್‌ ಚಾಟ್‌ ಗ್ರೂಪ್‌ಗೆ ದೀಪಿಕಾ ಅಡ್ಮಿನ್‌!

ಡ್ರಗ್ಸ್‌ ಚಾಟ್‌ ಗ್ರೂಪ್‌ಗೆ ದೀಪಿಕಾ ಅಡ್ಮಿನ್‌!

Farmer-Protest

ಹೆದ್ದಾರಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಂದಾಯ ಇಲಾಖೆಗೆ ಡೀಮ್ಡ್ ಅರಣ್ಯ ಸ್ಥಳ

ಕಂದಾಯ ಇಲಾಖೆಗೆ ಡೀಮ್ಡ್ ಅರಣ್ಯ ಸ್ಥಳ

ವಿಶ್ವಾಸ ಗೆಲ್ಲಲು ಬಿಜೆಪಿ ತಂತ್ರ: ಶಾಸಕರಿಗೆ ವಿಪ್‌ ಜಾರಿ

ವಿಶ್ವಾಸ ಗೆಲ್ಲಲು ಬಿಜೆಪಿ ತಂತ್ರ: ಶಾಸಕರಿಗೆ ವಿಪ್‌ ಜಾರಿ

Farmer-Protest

ಹೆದ್ದಾರಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಇಬ್ಬರ ಸಾವು, 44 ಹೊಸ ಪ್ರಕರಣ  ಪತ್ತೆ

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಇಬ್ಬರ ಸಾವು, 44 ಹೊಸ ಪ್ರಕರಣ ಪತ್ತೆ

ಹಾವೇರಿ ಜಿಲ್ಲೆಯಲ್ಲಿ 148 ಜನರಿಗೆ ಸೋಂಕು; ಓರ್ವ ಸಾವು

ಹಾವೇರಿ ಜಿಲ್ಲೆಯಲ್ಲಿ 148 ಜನರಿಗೆ ಸೋಂಕು; ಓರ್ವ ಸಾವು

MUST WATCH

udayavani youtube

Padma Shri SPB: A journey of Legendary Singer | S P Balasubrahmanyam

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ



ಹೊಸ ಸೇರ್ಪಡೆ

ಕಂದಾಯ ಇಲಾಖೆಗೆ ಡೀಮ್ಡ್ ಅರಣ್ಯ ಸ್ಥಳ

ಕಂದಾಯ ಇಲಾಖೆಗೆ ಡೀಮ್ಡ್ ಅರಣ್ಯ ಸ್ಥಳ

ಮಕ್ಕಳಿಗೆ ದೊರೆಯದ ಬಿಸಿಯೂಟದ ಬೇಳೆ

ಮಕ್ಕಳಿಗೆ ದೊರೆಯದ ಬಿಸಿಯೂಟದ ಬೇಳೆ

ವಿಶ್ವಾಸ ಗೆಲ್ಲಲು ಬಿಜೆಪಿ ತಂತ್ರ: ಶಾಸಕರಿಗೆ ವಿಪ್‌ ಜಾರಿ

ವಿಶ್ವಾಸ ಗೆಲ್ಲಲು ಬಿಜೆಪಿ ತಂತ್ರ: ಶಾಸಕರಿಗೆ ವಿಪ್‌ ಜಾರಿ

ಕೆಕೆಆರ್‌ – ಹೈದರಾಬಾದ್‌: ಸೋತ ತಂಡಗಳ ಸೆಣಸು

ಕೆಕೆಆರ್‌ – ಹೈದರಾಬಾದ್‌: ಸೋತ ತಂಡಗಳ ಸೆಣಸು

Anushka-Sharma

ಗಾವಸ್ಕರ್‌ ಹೇಳಿಕೆಗೆ ಅನುಷ್ಕಾ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.