Udayavni Special

ಬಡ್ತಿ ಮೀಸಲು ಕಾಯ್ದೆ: ಶೀಘ್ರ ನಿರ್ಧಾರ

Team Udayavani, Sep 26, 2018, 6:00 AM IST

e-14.jpg

ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡದ ಅಧಿಕಾರಿಗಳ ಮುಂಬಡ್ತಿ ಕಾಯ್ದುಕೊಳ್ಳುವ ಸಂಬಂಧ ಸುಪ್ರೀಂ ಕೋರ್ಟ್‌ ಆದೇಶಕ್ಕೆ ಒಳಪಟ್ಟಂತೆ ಕಾಯ್ದೆ ಜಾರಿ ಬಗ್ಗೆ ಸದ್ಯದಲ್ಲೇ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಗೃಹ ಕಚೇರಿ “ಕೃಷ್ಣಾ’ದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಸುದೀರ್ಘ‌ ಚರ್ಚೆ ನಡೆದಿದೆ. ಕಳೆದ
ಸಚಿವ ಸಂಪುಟ ಸಭೆಯಲ್ಲೂ ಈ ಬಗ್ಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವ ಪ್ರಿಯಾಂಕ್‌ ಖರ್ಗೆ ಅವರು ಪ್ರಸ್ತಾಪಿಸಿದ್ದರು. ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೊಳಿಸಲು ಆದೇಶ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ. ಆದರೆ ಕಾಯ್ದೆ ಜಾರಿಗೊಳಿಸಬೇಕೆ ಅಥವಾ ತಡೆ ಹಿಡಿಯಬೇಕೆ ಎಂಬ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ ಎಂದು ಹೇಳಿದರು.

ಇನ್ನೊಂದೆಡೆ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ಮುಂದೂಡಿಕೆಯಾಗುತ್ತಿದೆ. ಇದರಿಂದಾಗಿ ಆ ಸಮುದಾಯದವರಿಗೆ ಅಸಮಾಧಾನವಾಗುತ್ತಿದೆ ಎಂಬುದನ್ನು ಪರಮೇಶ್ವರ್‌, ಪ್ರಿಯಾಂಕ್‌ ಖರ್ಗೆ ಗಮನಕ್ಕೆ ತಂದಿದ್ದಾರೆ. ಆ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳಿಗೂ ಈ ಬಗ್ಗೆ ಪರಿಶೀಲಿಸುವಂತೆ ಸೂಚಿಸಲಾಗಿದ್ದು, ಸದ್ಯದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಿಜೆಪಿಗೆ ಎಚ್ಡಿಕೆ ಅಭಿನಂದನೆ
ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮೈತ್ರಿ ಪಕ್ಷದ ಅಭ್ಯರ್ಥಿಗಳು ಸುಗುಮವಾಗಿ ಆಯ್ಕೆಯಾಗಲು ಬಿಜೆಪಿ ಸ್ನೇಹಿತರು ಸಹಕಾರ ನೀಡಿದ್ದಾರೆ. ಇದಕ್ಕಾಗಿ ಎರಡೂ ಪಕ್ಷಗಳ ಪರವಾಗಿ ಬಿಜೆಪಿಗೆ ಕೃತಜ್ಞತೆ ಸಲ್ಲಿಸುತ್ತೇನೆಂದು ಸಿಎಂ ಕುಮಾರಸ್ವಾಮಿ ಹೇಳಿದರು. ಶಾಸಕ ಸುರೇಶ್‌ಗೌಡ ಅವರಿಗೆ ಬಿಜೆಪಿಯು ಆಮಿಷ ಒಡ್ಡಿರುವ ಬಗ್ಗೆ ಸಮಯ ಬಂದಾಗ ಮಾಹಿತಿ ಬಹಿರಂಗಪಡಿಸುತ್ತೇನೆ. ಸುರೇಶ್‌ ಗೌಡ ಅವರೊಂದಿಗೆ ಎಲ್ಲಿ ಕುಳಿತು ಚರ್ಚಿಸಿದ್ದಾರೆ, ಏನೆಲ್ಲಾ ಭರವಸೆ ನೀಡಿದ್ದಾರೆ ಎಂಬುದೆಲ್ಲಾ ಗೊತ್ತಿದೆ. ಆ ದೃಶ್ಯಾವಳಿ ನೋಡಿದರೆ ತೃಪ್ತಿಯಾಗುತ್ತದೆ ಎನ್ನುವುದಾದರೆ ಕೊಡುತ್ತೇನೆ ಎಂದರು.

ಹೆಸರು ಕಾಳು ಖರೀದಿಗೆ ಮನವಿ
ಬೆಂಗಳೂರು: ರಾಜ್ಯದ ರೈತರು ಹೆಚ್ಚಿನ ಪ್ರಮಾಣದಲ್ಲಿ ಹೆಸರುಕಾಳು ಬೆಳೆದಿರುವ ಹಿನ್ನೆಲೆಯಲ್ಲಿ ಪ್ರತಿ ರೈತರಿಂದ 10 ಕ್ವಿಂಟಾಲ್‌ ಹೆಸರು ಕಾಳನ್ನು ಬೆಂಬಲ ಬೆಲೆ ನೀಡಿ ಖರೀದಿಸಲು ಅನುಮತಿ ಪಡೆಯುವ ಸಂಬಂಧ ಸಚಿವದ್ವಯರು ಬುಧವಾರ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು. ಗೃಹ ಕಚೇರಿ “ಕೃಷ್ಣಾ’ದಲ್ಲಿ ಬುಧವಾರ ಸಚಿವರಾದ ಬಂಡೆಪ್ಪ ಕಾಶೆಂಪುರ ಹಾಗೂ ಪ್ರಿಯಾಂಕ್‌ ಖರ್ಗೆ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರಾಜ್ಯದ ರೈತರಿಂದ 23,000 ಟನ್‌ ಹೆಸರು ಕಾಳನ್ನು ಬೆಂಬಲ ಬೆಲೆಯೊಂದಿಗೆ ಖರೀದಿಸಲು ಕೇಂದ್ರ ಅನುಮತಿ ನೀಡಿತ್ತು. ಆದರೆ ಉತ್ತರ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ರೈತರು ಸುಮಾರು 1.50 ಲಕ್ಷ ಟನ್‌ನಷ್ಟು ಹೆಸರು ಕಾಳು ಬೆಳೆದಿದ್ದಾರೆ. ಆ ಹಿನ್ನೆಲೆಯಲ್ಲಿ ಖರೀದಿ ಪ್ರಮಾಣ ಹೆಚ್ಚಿಸುವಂತೆ ಈ ಹಿಂದೆ ಕೇಂದ್ರ ಆಹಾರ ಸಚಿವರು, ಕೃಷಿ ಸಚಿವರಿಗೆ ಮನವಿ ಮಾಡಲಾಗಿತ್ತು ಎಂದು ತಿಳಿಸಿದರು.

ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಬುಧವಾರ ಸಂಜೆ ದೆಹಲಿಯಲ್ಲಿ ಸಭೆ ಕರೆದಿದ್ದು, ಸಚಿವರಾದ ಬಂಡೆಪ್ಪ ಕಾಶೆಂಪುರ, ಪ್ರಿಯಾಂಕ್‌ ಖರ್ಗೆ ಪಾಲ್ಗೊಳ್ಳಲಿದ್ದಾರೆ. ಸದ್ಯ ಪ್ರತಿ ರೈತರಿಂದ ನಾಲ್ಕು ಕ್ವಿಂಟಾಲ್‌ ಖರೀದಿಸಲಾಗುತ್ತಿದೆ. ಇದನ್ನು 10 ಕ್ವಿಂಟಾಲ್‌ಗೆ ವಿಸ್ತರಿಸುವ ಮೂಲಕ
ಒಂದು ಲಕ್ಷ ಟನ್‌ ಹೆಸರುಕಾಳು ಖರೀದಿಗೆ ಅನುಮತಿ ನೀಡುವಂತೆ ಸಚಿವರು ಮನವಿ ಮಾಡಲಿದ್ದು, ಒಪ್ಪಿಗೆ ಸಿಗುವ ನಿರೀಕ್ಷೆಯಿದೆ. ಹಾಗಾಗಿ ರೈತರು ಆತಂಕಪಡಬೇಕಾದ ಅಗತ್ಯವಿಲ್ಲ. ರೈತರ ಪರಿಸ್ಥಿತಿ ಅರಿತು ಸರ್ಕಾರ ಸ್ಪಂದಿಸಲು ಈಗಾಗಲೇ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು. ಮಂಡ್ಯ ಮಾದರಿಯಲ್ಲಿ ಸದ್ಯದಲ್ಲೇ ಉತ್ತರ ಕರ್ನಾಟಕದ ಧಾರವಾಡ, ರಾಯಚೂರು ಇಲ್ಲವೇ ಒಂದು ಜಿಲ್ಲೆಗೆ ಭೇಟಿ ನೀಡಲಿದ್ದೇನೆಂದು ಪ್ರತಿಕ್ರಿಯಿಸಿದರು.
 
ಟಾಪ್ ನ್ಯೂಸ್

ಕಿರುಕುಳ ನೀಡುತ್ತಿದ್ದ ಪತಿಯ ಹತ್ಯೆ ಸುಪಾರಿ ಕೊಟ್ಟ ಪತ್ನಿ, ಪುತ್ರ ಸೇರಿ ಐವರ ಬಂಧನ

ಕಿರುಕುಳ ನೀಡುತ್ತಿದ್ದ ಪತಿಯ ಹತ್ಯೆ ಸುಪಾರಿ ಕೊಟ್ಟ ಪತ್ನಿ, ಪುತ್ರ ಸೇರಿ ಐವರ ಬಂಧನ

ಕೇರಳ ರಾಜಕೀಯವಾಗಿ ಬದಲಾಗಲು ಈಗ ಸಕಾಲ : ಡಿಸಿಎಂ ಅಶ್ವತ್ಥನಾರಾಯಣ

ಕೇರಳ ರಾಜಕೀಯವಾಗಿ ಬದಲಾಗಲು ಈಗ ಸಕಾಲ : ಡಿಸಿಎಂ ಅಶ್ವತ್ಥನಾರಾಯಣ

ಹರ್ಯಾಣದಲ್ಲಿ ಹಾಲಿನ ದರ ಲೀ.ಗೆ 100 ರೂ! ಅಚ್ಚರಿಯಾದರೂ ಇದು ಸತ್ಯ

ಹರ್ಯಾಣದಲ್ಲಿ ಹಾಲಿನ ದರ ಲೀ.ಗೆ 100 ರೂ! ಅಚ್ಚರಿಯಾದರೂ ಇದು ಸತ್ಯ

yatnal

ಮಂತ್ರಿಗಳು ಮಠಗಳನ್ನು ಖರೀದಿಸಲು ಹೊರಟಿದ್ದಾರೆ: ಯತ್ನಾಳ್‌

ಜಿ-23ಯಲ್ಲಿ ಗುರುತಿಸಿಕೊಳ್ಳಲ್ಲ: ಮಾಜಿ ಮುಖ್ಯಮಂತ್ರಿ ಮೊಯ್ಲಿ ಸ್ಪಷ್ಟನೆ

ಜಿ-23ಯಲ್ಲಿ ಗುರುತಿಸಿಕೊಳ್ಳಲ್ಲ: ಮಾಜಿ ಮುಖ್ಯಮಂತ್ರಿ ಮೊಯ್ಲಿ ಸ್ಪಷ್ಟನೆ

ಭಾರತದ ವಾತಾವರಣ ಅಶುದ್ಧ: ಮತ್ತೆ ಕಿಡಿಕಾರಿದ ಟ್ರಂಪ್‌

ಭಾರತದ ವಾತಾವರಣ ಅಶುದ್ಧ: ಮತ್ತೆ ಕಿಡಿಕಾರಿದ ಟ್ರಂಪ್‌

shidlaghata

ಶಿಡ್ಲಘಟ್ಟ: ದುಗ್ಗಲಮ್ಮ ದೇಗುಲಕ್ಕೆ ಕ್ಯಾಂಟರ್ ಡಿಕ್ಕಿ ; ಕ್ಲೀನರ್ ಸಾವು, ದೇಗುಲಕ್ಕೆ ಹಾನಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಿರುಕುಳ ನೀಡುತ್ತಿದ್ದ ಪತಿಯ ಹತ್ಯೆ ಸುಪಾರಿ ಕೊಟ್ಟ ಪತ್ನಿ, ಪುತ್ರ ಸೇರಿ ಐವರ ಬಂಧನ

ಕಿರುಕುಳ ನೀಡುತ್ತಿದ್ದ ಪತಿಯ ಹತ್ಯೆ ಸುಪಾರಿ ಕೊಟ್ಟ ಪತ್ನಿ, ಪುತ್ರ ಸೇರಿ ಐವರ ಬಂಧನ

yatnal

ಮಂತ್ರಿಗಳು ಮಠಗಳನ್ನು ಖರೀದಿಸಲು ಹೊರಟಿದ್ದಾರೆ: ಯತ್ನಾಳ್‌

shidlaghata

ಶಿಡ್ಲಘಟ್ಟ: ದುಗ್ಗಲಮ್ಮ ದೇಗುಲಕ್ಕೆ ಕ್ಯಾಂಟರ್ ಡಿಕ್ಕಿ ; ಕ್ಲೀನರ್ ಸಾವು, ದೇಗುಲಕ್ಕೆ ಹಾನಿ

ಚಿಕ್ಕಬಳ್ಳಾಪುರ : ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ಕೆರೆಗೆ ಹಾರಿ ಆತ್ಮಹತ್ಯೆ

ಅನಾರೋಗ್ಯ : ಮನನೊಂದ ಯುವಕ ಕಂದವಾರ ಕೆರೆಗೆ ಹಾರಿ ಆತ್ಮಹತ್ಯೆ

72ರ ವೃದ್ಧನ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ: ಕಾನೂನು ಸಲಹೆ ಪಡೆಯಲು ಹೈಕೋರ್ಟ್‌ ಸೂಚನೆ

72ರ ವೃದ್ಧನ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ: ಕಾನೂನು ಸಲಹೆ ಪಡೆಯಲು ಹೈಕೋರ್ಟ್‌ ಸೂಚನೆ

MUST WATCH

udayavani youtube

ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ| ಬಿ.ಆರ್‌.ಶೆಟ್ಟಿ

udayavani youtube

30 ನಿಮಿಷದಲ್ಲಿಯೇ ಕೊರೊನಾ ಲಸಿಕೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಿದರು

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

ಹೊಸ ಸೇರ್ಪಡೆ

ಕಿರುಕುಳ ನೀಡುತ್ತಿದ್ದ ಪತಿಯ ಹತ್ಯೆ ಸುಪಾರಿ ಕೊಟ್ಟ ಪತ್ನಿ, ಪುತ್ರ ಸೇರಿ ಐವರ ಬಂಧನ

ಕಿರುಕುಳ ನೀಡುತ್ತಿದ್ದ ಪತಿಯ ಹತ್ಯೆ ಸುಪಾರಿ ಕೊಟ್ಟ ಪತ್ನಿ, ಪುತ್ರ ಸೇರಿ ಐವರ ಬಂಧನ

ಕೇರಳ ರಾಜಕೀಯವಾಗಿ ಬದಲಾಗಲು ಈಗ ಸಕಾಲ : ಡಿಸಿಎಂ ಅಶ್ವತ್ಥನಾರಾಯಣ

ಕೇರಳ ರಾಜಕೀಯವಾಗಿ ಬದಲಾಗಲು ಈಗ ಸಕಾಲ : ಡಿಸಿಎಂ ಅಶ್ವತ್ಥನಾರಾಯಣ

ಹರ್ಯಾಣದಲ್ಲಿ ಹಾಲಿನ ದರ ಲೀ.ಗೆ 100 ರೂ! ಅಚ್ಚರಿಯಾದರೂ ಇದು ಸತ್ಯ

ಹರ್ಯಾಣದಲ್ಲಿ ಹಾಲಿನ ದರ ಲೀ.ಗೆ 100 ರೂ! ಅಚ್ಚರಿಯಾದರೂ ಇದು ಸತ್ಯ

yatnal

ಮಂತ್ರಿಗಳು ಮಠಗಳನ್ನು ಖರೀದಿಸಲು ಹೊರಟಿದ್ದಾರೆ: ಯತ್ನಾಳ್‌

ಜಿ-23ಯಲ್ಲಿ ಗುರುತಿಸಿಕೊಳ್ಳಲ್ಲ: ಮಾಜಿ ಮುಖ್ಯಮಂತ್ರಿ ಮೊಯ್ಲಿ ಸ್ಪಷ್ಟನೆ

ಜಿ-23ಯಲ್ಲಿ ಗುರುತಿಸಿಕೊಳ್ಳಲ್ಲ: ಮಾಜಿ ಮುಖ್ಯಮಂತ್ರಿ ಮೊಯ್ಲಿ ಸ್ಪಷ್ಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.