ವಿದೇಶದಿಂದ ಯುವತಿಯರ ಕರೆಸಿ ವೇಶ್ಯಾವಾಟಿಕೆ
Team Udayavani, Jun 24, 2022, 9:26 AM IST
ಬೆಂಗಳೂರು: ವಿದೇಶದಿಂದ ಮಹಿಳೆಯರ ಕರೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವಿದೇಶಿ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಮೂದು ಬ್ರಿಡ್ಜೆಟ್(32) ಬಂಧಿತ ಆರೋಪಿ. ಈ ವೇಳೆ ಒಬ್ಬ ವಿದೇಶಿ ಮಹಿಳೆಯನ್ನು ರಕ್ಷಿಸಲಾಗಿದೆ.
ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ಈಕೆ ಬಾಡಿಗೆ ಮನೆ ಪಡೆದುಕೊಂಡು, ವಿದೇಶದಿಂದ ಯುವತಿಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಈ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮಹಿಳೆಯನ್ನು ಬಂಧಿಸಿ, ಮತ್ತೊಬ್ಬ ವಿದೇಶಿ ಮಹಿಳೆಯನ್ನು ರಕ್ಷಿಸಲಾಗಿದೆ. ದಾಳಿ ವೇಳೆ 42 ಗ್ರಾಂ ಗಾಂಜಾ ಹಾಗೂ ಇತರೆ ವಸ್ತುಗಳು ಪತ್ತೆಯಾಗಿವೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಇದನ್ನೂ ಓದಿ:ಮಂಗಳೂರು ವಿಶ್ವವಿದ್ಯಾನಿಲಯ: ಕುಂದ ಕನ್ನಡಕ್ಕೆ “ಪೀಠ’, ಅರೆ ಭಾಷೆಗೆ “ಅಧ್ಯಯನ ಕೇಂದ್ರ’
ಆರೋಪಿ ವಿರುದ್ಧ ವೇಶ್ಯಾವಾಟಿಕೆ ಹಾಗೂ ಎನ್‌ಡಿಪಿಎಸ್ ಕಾಯ್ದೆ ಅಡಿ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಾಗರ : 6 ಕೋಟಿ ರೂ. ವೆಚ್ಚದಲ್ಲಿ ಕಾರ್ಮಿಕ ಭವನ ನಿರ್ಮಾಣ : ಹಾಲಪ್ಪ
ಅನಧಿಕೃತ ಸಮಿತಿಯಿಂದ ಮಾರಿಕಾಂಬಾ ದೇವಸ್ಥಾನ ನಿರ್ವಹಣೆ ; ಎಂ.ನಾಗರಾಜ್ ಆರೋಪ
ಆಲೂರು: ಪೊಲೀಸರ ದಾಳಿ; ಶೆಡ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 25 ಜಾನುವಾರುಗಳ ರಕ್ಷಣೆ
ರಾಷ್ಟ್ರಪತಿ ಚುನಾವಣೆ; ದ್ರೌಪದಿ ಮುರ್ಮು ಅವರಿಗೆ ಜೆಡಿಎಸ್ ಬೆಂಬಲ
ಸ್ನೇಹಿತನನ್ನು ಬೀಳ್ಕೊಡಲು ಏರ್ಪೋರ್ಟ್ ಗೆ ಹೋಗುತ್ತಿದ್ದಾಗ ಅಪಘಾತ: ಬೈಕ್ ಸವಾರ ಸಾವು