Udayavni Special

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ


Team Udayavani, Mar 11, 2021, 8:26 PM IST

ಚಿಕ್ಕಮಗಳೂರು : ಪೆಟ್ರೋಲ್‌, ಡೀಸೆಲ್‌ ಮತ್ತು ಅಡುಗೆ ಅನಿಲ ದರ ಹೆಚ್ಚಳ ವಿರೋಧಿ ಸಿ ಜಿಲ್ಲಾಕಾಂಗ್ರೆಸ್‌ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆನಡೆಸಿದರು.

ಬುಧವಾರ ನಗರದ ತಾಲೂಕು ಕಚೇರಿ ಆವರಣದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಕಾರ್ಯಕರ್ತರು, ಕಾರಿಗೆ ಹಗ್ಗಕಟ್ಟಿ ಎಳೆದು, ಬೈಕ್‌ ತಳ್ಳಿಕೊಂಡು ಆಜಾದ್‌ ಪಾರ್ಕ್‌ ವೃತ್ತ ತಲುಪಿದರು. ಅಲ್ಲಿ ಕಟ್ಟಿಗೆ ಬಳಸಿ ಚಹ ತಯಾರಿಸಿ ಎಲ್ಲರಿಗೂ ಹಂಚುವ ಮೂಲಕ ವಿನೂತನ ಪ್ರತಿಭಟನೆ ನಡೆಸಿ,ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಘೋಷಣೆಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ|ಅಂಶುಮಂತ್‌ ಮಾತನಾಡಿ, ಬಿಜೆಪಿಜನರ ಭಾವನೆಗಳನ್ನು ಕೆರಳಿಸುವ ಮೂಲಕ ರಾಜಕಾರಣ ಮಾಡುತ್ತಿದೆ. ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಬದುಕು ಕಳೆದುಕೊಳ್ಳುತ್ತಿದ್ದಾರೆ.ಕಾರ್ಮಿಕರ ಬದುಕು ಸಂಕಷ್ಟದಲ್ಲಿದೆ. ಯುವಜನತೆಯ ಉತ್ಸಾಹ ಕುಗ್ಗುತ್ತಿದೆ. ಜನರ ಸಮಸ್ಯೆಗೆ ಕಾಂಗ್ರೆಸ್‌ ಧ್ವನಿಯಾಗುವ ಮೂಲಕ ಜನಪರ ಹೋರಾಟಕ್ಕೆ ಮುಂದಾಗಲಿದೆ ಎಂದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ರೈತರ ಬದುಕನ್ನು ನಾಶ ಮಾಡಲು ಮುಂದಾಗಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರುಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಗೆ ಯಾವುದೇಕೊಡುಗೆ ನೀಡಿಲ್ಲ, ಅತಿವೃಷ್ಟಿ, ಅಕಾಲಿಕ ಮಳೆಯಿಂದ ರೈತರು ಮತ್ತು ಬೆಳೆಗಾರರು ಬೆಳೆ ಕಳೆದುಕೊಂಡಿದ್ದಾರೆ. ಅದಕ್ಕೆ ಪರಿಹಾರ ನೀಡಲುಸರ್ಕಾರ ಮುಂದಾಗದಿರುವುದನ್ನು ಜನರು ಗಮನಿಸಬೇಕೆಂದು ತಿಳಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಎಂ.ಎಲ್‌.ಮೂರ್ತಿ ಮಾತನಾಡಿ, ದೇಶದ ನಾನಾ ರಾಜ್ಯಗಳಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅರಾಜಕತೆಯನ್ನು ಸೃಷ್ಟಿಸುತ್ತಿದೆ. ಮನಸ್ಸು ಮನಸ್ಸುಗಳನ್ನುಒಡೆಯುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಇದೇ ರೀತಿಯ ಆಡಳಿತ ಮುಂದುವರೆದರೆ ದೇಶಕ್ಕೆ ಉಳಿಗಾಲವಿಲ್ಲ. ಬೇಜವಾಬ್ದಾರಿ ಕೇಂದ್ರಮತ್ತು ರಾಜ್ಯ ಸರ್ಕಾರಗಳನ್ನು ಅಧಿ ಕಾರದಿಂದ ಕೆಳಗಿಳಿಸಬೇಕೆಂದು ಮನವಿ ಮಾಡಿದರು.

ಅರಣ್ಯ ಮತ್ತು ವಿಹಾರಧಾಮಗಳ ನಿಗಮದಮಾಜಿ ಅಧ್ಯಕ್ಷ ಎ.ಎನ್‌.ಮಹೇಶ್‌ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಜನವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಜನಪರ ಶಾಸನಗಳನ್ನು ರೂಪಿಸುವಲ್ಲಿ, ಮೂಲಭೂತಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ.ದಿನದಿಂದ ದಿನಕ್ಕೆ ಆರ್ಥಿಕತೆ ಕುಸಿಯುತ್ತಿದ್ದು,ಬಡವರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. 14ಕೋಟಿ ಜನರು ಕೆಲಸ ಕಳೆದುಕೊಂಡಿದ್ದಾರೆ. ಸಣ್ಣಮತ್ತು ಗುಡಿ ಕೈಗಾರಿಕೆಗಳು ಬಾಗಿಲು ಮುಚ್ಚಿವೆ.ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಜನರು ಬೀದಿಗಿಳಿದು ಹೋರಾಡಬೇಕಿದೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಡಾ|ಡಿ.ಎಲ್‌.ವಿಜಯಕುಮಾರ್‌ ಮಾತನಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಕಡಿಮೆ ಇದ್ದರು ದೇಶದಲ್ಲಿ ದಿನೇ ದಿನೆ ಪೆಟ್ರೋಲ್‌,ಡೀಸೆಲ್‌, ಅಡುಗೆ ಅನಿಲ ಬೆಲೆ ಏರಿಕೆಯಾಗುತ್ತಿದೆ.ಸರ್ಕಾರಗಳ ಜನವಿರೋ ಧಿ ನೀತಿಗಳಿಂದ ಸಾಮಾನ್ಯ ಜನರ ಸ್ಥಿತಿ ದುಸ್ತರವಾಗಿದೆ ಎಂದರು.ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಹೂವಪ್ಪ,ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಂತೋಷ್‌, ಜಿಲ್ಲಾವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಸಿಡಿಎ ಮಾಜಿ ಅಧ್ಯಕ್ಷ ಹನೀಫ್‌ ಮಾತನಾಡಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯಮಂಜುನಾಥ್‌, ಕ್ಷೇತ್ರ ಸಮಿತಿ ಅಧ್ಯಕ್ಷಹಂಪಾಪುರ ಮಂಜೇಗೌಡ, ಮುಖಂಡರಾದ ರೂಬೆನ್‌ ಮೊಸೆಸ್‌, ಪವನ್‌, ಹಿರೇಮಗಳೂರು ರಾಮಚಂದ್ರ, ಪ್ರಕಾಶ್‌, ಆದಿಲ್‌, ಜೇಮ್ಸ್‌,ಆನಂದ್‌, ಸಿಲ್ವೆಸ್ಟರ್‌, ಮಹಿಳಾ ಕಾಂಗ್ರೆಸ್‌ ಮುಖಂಡರಾದ ಚೇತನ, ಯಶೋಧಮ್ಮ,ಸುರೇಖಾ ಸಂಪತ್‌ರಾಜ್‌, ಗುಣವತಿ ಇತರರು ಉಪಸ್ಥಿತರಿದ್ದರು

ಟಾಪ್ ನ್ಯೂಸ್

dgssd

ವಿಟ್ಲ : ಬೈಕ್‍-ಪಿಕಪ್ ಡಿಕ್ಕಿ : ಓರ್ವ ಸಾವು

hkjghjgh

ನಾಳೆಯಿಂದ ಮಹಾರಾಷ್ಟ್ರಾದ್ಯಂತ ಸೆಕ್ಷನ್ 144 ಜಾರಿ : ಸಿಎಂ ಉದ್ದವ್ ಠಾಕ್ರೆ

fhf

ರಸಗೊಬ್ಬರ ವಿಚಾರ: ಎಚ್ ಡಿ ಕುಮಾರಸ್ವಾಮಿಗೆ ಕೇಂದ್ರ ಸಚಿವ ಸದಾನಂದ ಗೌಡ ತಿರುಗೇಟು

jghjjty

ವಿಟ್ಲ : ಅಕ್ರಮ ಗೋವು ಸಾಗಾಟ ತಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು

gfhjfgj

ಮತ್ತೆ ಪೊಲೀಸ್ ಠಾಣೆಗೆ ‘ದಾಂಪತ್ಯ ಕಲಹ’ : ಪತಿ ವಿರುದ್ಧ ದೂರು ನೀಡಿದ ಚೈತ್ರಾ ಕೊಟ್ಟೂರ್

ghmftghf

ನಿಧಿ ಆಸೆ : ಪುರಾತನ ದೇವಾಲಯದ ಶಿವಲಿಂಗ ಕದ್ದೊಯ್ದ ಖದೀಮರು

jhggg

ರಾಜ್ಯದಲ್ಲಿ ಮತ್ತೆ ಕೋವಿಡ್ ಅಟ್ಟಹಾಸ : ಇಂದು 8778 ಪ್ರಕರಣಗಳು ಪತ್ತೆ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jhggg

ರಾಜ್ಯದಲ್ಲಿ ಮತ್ತೆ ಕೋವಿಡ್ ಅಟ್ಟಹಾಸ : ಇಂದು 8778 ಪ್ರಕರಣಗಳು ಪತ್ತೆ

ಇಂದಿನಿಂದ ರಂಜಾನ್ ಉಪವಾಸ: ಹೊಸ ಗೈಡ್ ಲೈನ್ಸ್ ಪ್ರಕಟಿಸಿದ ಸರ್ಕಾರ

ಇಂದಿನಿಂದ ರಂಜಾನ್ ಉಪವಾಸ: ಹೊಸ ಗೈಡ್ ಲೈನ್ಸ್ ಪ್ರಕಟಿಸಿದ ಸರ್ಕಾರ

k-sudhakar

ಖಾಸಗಿ ಆಸ್ಪತ್ರೆಗಳಲ್ಲಿ 50% ರಷ್ಟು ಹಾಸಿಗೆ ಮೀಸಲು: ಸಚಿವ ಡಾ.ಕೆ.ಸುಧಾಕರ್

ಮಸ್ಕಿಯಲ್ಲಿ ಲಂಬಾಣಿ ಮತ ಸೆಳೆಯಲು ತೆಲುಗು ಸಿಂಗರ್‌ ಮಂಗ್ಲಿ ಮೋಡಿ!

ಮಸ್ಕಿಯಲ್ಲಿ ಲಂಬಾಣಿ ಮತ ಸೆಳೆಯಲು ತೆಲುಗು ಸಿಂಗರ್‌ ಮಂಗ್ಲಿ ಮೋಡಿ!

bs-yediyurappa

ನಾವು ಲಾಕ್ ಡೌನ್ ಮಾಡುವ ಪ್ರಮೇಯವಿಲ್ಲ: ಸಿಎಂ ಯಡಿಯೂರಪ್ಪ ಸ್ಪಷ್ಟನೆ

MUST WATCH

udayavani youtube

ಕುರಿಗಾಹಿಯ ಲವ್ ಸ್ಟೋರಿ ಕೊಲೆಯಲ್ಲಿ ಕೊನೆ| CRIME FILE | Udayavani

udayavani youtube

News bulletin 13- 04-2021 | UDAYAVANI

udayavani youtube

ಮಂಗಳೂರಿನಲ್ಲಿ ಇಳಿಯಬೇಕಿದ್ದ ವಿಮಾನ ಕೊಚ್ಚಿಯಲ್ಲಿ ಲ್ಯಾಂಡ್: ಪರದಾಡಿದ ಪ್ರಯಾಣಿಕರು

udayavani youtube

ಎಲ್ಲವೂ ಸುಳ್ಳು ಸುದ್ದಿ : ಸಿಡಿ ಲೇಡಿಯ ಮತ್ತೊಂದು ವಿಡಿಯೋ

udayavani youtube

Kanchipuram ಸೀರೆಗಳ ನಿಮ್ಮ Favorite Spot

ಹೊಸ ಸೇರ್ಪಡೆ

dgssd

ವಿಟ್ಲ : ಬೈಕ್‍-ಪಿಕಪ್ ಡಿಕ್ಕಿ : ಓರ್ವ ಸಾವು

hkjghjgh

ನಾಳೆಯಿಂದ ಮಹಾರಾಷ್ಟ್ರಾದ್ಯಂತ ಸೆಕ್ಷನ್ 144 ಜಾರಿ : ಸಿಎಂ ಉದ್ದವ್ ಠಾಕ್ರೆ

fhf

ರಸಗೊಬ್ಬರ ವಿಚಾರ: ಎಚ್ ಡಿ ಕುಮಾರಸ್ವಾಮಿಗೆ ಕೇಂದ್ರ ಸಚಿವ ಸದಾನಂದ ಗೌಡ ತಿರುಗೇಟು

jghjjty

ವಿಟ್ಲ : ಅಕ್ರಮ ಗೋವು ಸಾಗಾಟ ತಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು

gfhjfgj

ಮತ್ತೆ ಪೊಲೀಸ್ ಠಾಣೆಗೆ ‘ದಾಂಪತ್ಯ ಕಲಹ’ : ಪತಿ ವಿರುದ್ಧ ದೂರು ನೀಡಿದ ಚೈತ್ರಾ ಕೊಟ್ಟೂರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.