ಬೆಟ್ಟದ ಹೂವಿಂದ ಬೆಟ್ಟದೆತ್ತರಕೆ…


Team Udayavani, Oct 30, 2021, 6:36 AM IST

ಬೆಟ್ಟದ ಹೂವಿಂದ ಬೆಟ್ಟದೆತ್ತರಕೆ…

ಬಾಲನಟರಾಗಿ ಚಿತ್ರರಂಗಕ್ಕೆ ಬಂದು ಮುಂದೆ ಹೀರೋ ಆಗಿ ಗೆಲುವು ಕಂಡವರು ಬೆರಳೆಣಿಕೆಯ ಮಂದಿ. ಆ ವಿಚಾರದಲ್ಲಿ ಪುನೀತ್‌ ರಾಜ್‌ಕುಮಾರ್‌ ಮುಂಚೂಣಿಯಲ್ಲಿ ನಿಲ್ಲುತ್ತಾರೆ.  ಮಾಸ್ಟರ್‌ ಲೋಹಿತ್‌ ಹೆಸರಿನಲ್ಲಿ ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದವರು ಅವರು. 1976ರಲ್ಲಿ ತೆರೆಕಂಡ ಡಾ. ರಾಜಕುಮಾರ್‌, ಆರತಿ, ಜಯಮಾಲಾ, ವಜ್ರಮುನಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ “ಪ್ರೇಮದ ಕಾಣಿಕೆ’ ಚಿತ್ರದ ದೃಶ್ಯದಲ್ಲಿ ಮಾ. ಲೋಹಿತ್‌ 6 ತಿಂಗಳ ಮಗುವಾಗಿದ್ದಾಗಲೇ ತೆರೆಮೇಲೆ ಕಾಣಿಸಿಕೊಂಡಿದ್ದರು. ಅದಾದ ಬಳಿಕ ನಿಧಾನವಾಗಿ ಒಂದರ ಹಿಂದೊಂದು ಚಿತ್ರಗಳು ಮಾ. ಲೋಹಿತ್‌ ಅವರನ್ನು ಅರಸಿಕೊಂಡು ಬಂದವು. ಮೂರು ವರ್ಷದ ಬಳಿಕ ಮಾ. ಲೋಹಿತ್‌, ಡಾ. ರಾಜಕುಮಾರ್‌ ಅಭಿನಯದ ಅನೇಕ ಚಿತ್ರಗಳಲ್ಲಿ ಬಾಲನಟರಾಗಿದ್ದರು.

ಬಾಲನಟ ಮುಟ್ಟಿದ್ದೆಲ್ಲ ಚಿನ್ನ
1980ರಲ್ಲಿ ತೆರೆಕಂಡ “ವಸಂತ ಗೀತ’, 1981ರ “ಭಾಗ್ಯವಂತ’, 1982ರಲ್ಲಿ ತೆರೆಕಂಡ “ಚಲಿಸುವ ಮೋಡಗಳು’, 1983ರಲ್ಲಿ ಬಿಡುಗಡೆಯಾದ “ಎರಡು ನಕ್ಷತ್ರಗಳು’, “ಭಕ್ತ ಪ್ರಹ್ಲಾದ’, 1984ರಲ್ಲಿ ಮೂಡಿಬಂದ “ಯಾರಿವನು’ 1985ರಲ್ಲಿ ಮನಸೂರೆಗೊಳಿಸಿದ “ಬೆಟ್ಟದ ಹೂವು’, 1988ರ “ಶಿವ ಮೆಚ್ಚಿದ ಕಣ್ಣಪ್ಪ’, 1989ರಲ್ಲಿ ತೆರೆಕಂಡ “ಪರಶುರಾಮ್‌’- ಇವು ಮಾ. ಲೋಹಿತ್‌ ಬಾಲನಟನಾಗಿ ಅಭಿನಯಿಸಿ ಸಕ್ಸಸ್‌ ಕಂಡಿದ್ದ ಪ್ರಮುಖ ಚಿತ್ರಗಳು.

ಲೋಹಿತ್‌ ಬಾಲನಟನಾಗಿ ಅಭಿನಯಿಸಿದ್ದ “ಎರಡು ನಕ್ಷತ್ರಗಳು’ (1983) ಮತ್ತು “ಬೆಟ್ಟದ ಹೂವು’ (1985) ಭಾರೀ ಜನಪ್ರಿಯತೆ ಕಂಡವು. “ಬೆಟ್ಟದ ಹೂವು’ ಚಿತ್ರದ ರಾಮು ಪಾತ್ರದ ಬಾಲನಟನೆಗೆ ರಾಷ್ಟ್ರ  ಚಲನಚಿತ್ರ ಪ್ರಶಸ್ತಿಯೂ ಸಿಕ್ಕಿತು. ಸುಮಾರು ಒಂದೂವರೆ ದಶಕಗಳ ಕಾಲ ಬಾಲನಟನಾಗಿ, ಮಾ. ಲೋಹಿತ್‌ ಅಭಿನಯಿಸಿದ್ದ ಬಹುತೇಕ ಎಲ್ಲ ಸಿನೆಮಾಗಳೂ ಸೂಪರ್‌ ಹಿಟ್‌ ಆಗಿದ್ದವು.

ಸಿನಿರಂಗ ಕಂಡ “ಭಾಗ್ಯವಂತ’
ಮೊದಲ ಬಾರಿಗೆ ಮಾ. ಲೋಹಿತ್‌ ಹೆಸರು ಜಾಹೀರುಗೊಂಡಿದ್ದು, 1981ರಲ್ಲಿ ತೆರೆಕಂಡ “ಭಾಗ್ಯವಂತ’ ಚಿತ್ರದ ಮೂಲಕ. ಅನಾಥ ಮಗುವಿನ ಪಾತ್ರಕ್ಕೆ ಜೀವ ತುಂಬುವ ಮಾ. ಲೋಹಿತ್‌ ಎಲ್ಲರಿಂದಲೂ ನತದೃಷ್ಟ ಎನಿಸಿಕೊಳ್ಳುತ್ತಾರೆ. ಆದರೆ ರೈಲೊಂದನ್ನು ಅಪಾಯದಿಂದ ಪಾರು ಮಾಡಿ ಅದರ ಚಾಲಕ (ತೂಗುದೀಪ ಶ್ರೀನಿವಾಸ್‌)ನಿಂದ “ಭಾಗ್ಯವಂತ’ ಎಂದು ಹೊಗಳಿಸಿಕೊಳ್ಳುತ್ತಾರೆ. ಇಂದಿಗೂ ಜನರ ಬಾಯಲ್ಲಿ ಆಗಾಗ್ಗೆ ಗುನುಗುಡುವ “ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ’, “ಗುರುವಾರ ಬಂತಮ್ಮ’ ಜನಪ್ರಿಯ ಹಾಡುಗಳಾಗಿವೆ.

ಬಿಸಿಲು- ಮಳೆ ಲೆಕ್ಕಿಸದ ಪಯಣ
1985ರಲ್ಲಿ ತೆರೆಕಂಡ “ಬೆಟ್ಟದ ಹೂವು’ ಬಡ ಹುಡುಗನ ಕಲಿಕೆಯ ಆಸಕ್ತಿ ಕಟ್ಟಿಕೊಡುವ ಅಪರೂಪದ ಚಿತ್ರ. ಈ ಚಿತ್ರದ “ತಾಯಿ ಶಾರದೆ ಲೋಕ ಪೂಜಿತೆ’ ಹಾಡು ಇಂದಿಗೂ ಅದೆಷ್ಟೋ ಶಾಲೆಗಳಲ್ಲಿ ಪ್ರತಿನಿತ್ಯ ಕಡ್ಡಾಯವಾಗಿ ಹಾಡುವ ಗೀತೆಯಾಗಿದೆ. ಈ “ಬೆಟ್ಟದ ಹೂವು’ ಚಿತ್ರದ ಅಭಿನಯಕ್ಕಾಗಿ ಮಾ. ಲೋಹಿತ್‌ಗೆ ಎರಡನೇ ಬಾರಿಗೆ “ಅತ್ಯುತ್ತಮ ಬಾಲನಟ’ ಪ್ರಶಸ್ತಿ ದೊರೆತಿತ್ತು. ಈ “ಚಿತ್ರದ ಬಿಸಿಲೇ ಇರಲಿ, ಮಳೆಯೇ ಬರಲಿ’ ಹಾಡು  ಜನಪ್ರಿಯ ಗೀತೆಯಾಗಿದೆ.

ಇದನ್ನೂ ಓದಿ:ಕರಾಳ ದಿನ : ಪುನೀತ್ ಅಗಲಿಕೆಗೆ ಪ್ರಧಾನಿ ಮೋದಿ, ರಾಹುಲ್ ಸೇರಿ ಗಣ್ಯರ ಕಂಬನಿ

ನಾಯಕ ನಟನಾಗಿ ಗ್ರ್ಯಾಂಡ್‌ ಎಂಟ್ರಿ
ಬಾಲನಟನಾಗಿ ಎಲ್ಲರ ಮೆಚ್ಚುಗೆ ಪಡೆದಿದ್ದ ಪುನೀತ್‌  ನಾಯಕ ನಟರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, “ಅಪ್ಪು’ ಸಿನೆಮಾ ಮೂಲಕ. 2002ರಲ್ಲಿ ತೆರೆಕಂಡ ಈ ಚಿತ್ರವನ್ನು ತೆಲುಗಿನ  ಪುರಿ ಜಗನ್ನಾಥ್‌ ನಿರ್ದೇಶಿಸಿದ್ದರು. ವಜ್ರೇಶ್ವರಿ ಕಂಬೈನ್ಸ್‌ ನಿರ್ಮಿಸಿದ ಈ ಚಿತ್ರದಲ್ಲಿ ಪುನೀತ್‌  ಸಖತ್‌ ಡ್ಯಾಶಿಂಗ್‌ ಲುಕ್‌ ಹಾಗೂ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ ಹಾಗೂ ಅದರ “ತಾಲಿಬಾನ್‌ ಅಲ್ಲ, ಅಲ್ಲ…’, “ಬಾರೇ ಬಾರೇ’, “ಎಲ್ಲಿಂದ ಆರಂಭವೋ’, “ಜಾಲಿಗೋ ಜಾಲಿಗೋ’ ಹಾಡುಗಳು ಹಿಟ್‌ಲಿಸ್ಟ್‌ ಸೇರಿದ್ದವು.  ಅನಂತರ ಬಂದ “ಅಭಿ’, “ವೀರ ಕನ್ನಡಿಗ’, “ಮೌರ್ಯ’, “ಆಕಾಶ್‌’, “ಅಜೇಯ್‌’, “ಅರಸು’… ಹೀಗೆ ಸಾಲು ಸಾಲು ಸಿನೆಮಾಗಳ ಮೂಲಕ ಹಿಟ್‌ ಕೊಡುತ್ತಲೇ ಬಂದ ಪುನೀತ್‌, ಬಹುಬೇಗನೇ ಕನ್ನಡ ಚಿತ್ರರಂಗದ ಸ್ಟಾರ್‌ನಟರಾಗುವ ಜತೆಗೆ ನಿರ್ಮಾಪಕ ಸ್ನೇಹಿ ನಟ ಎನಿಸಿಕೊಂಡರು. ತಾವು ಸ್ಟಾರ್‌ ನಟರಾದರೂ ಅದನ್ನು ತಲೆಗೇರಿಸಿಕೊಳ್ಳದೆ, ಸಮಚಿತ್ತದಿಂದ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಬಂದ ಪರಿಣಾಮ, ಅವರ ಕೆರಿಯರ್‌ಗ್ರಾಫ್ ಎಲ್ಲೂ ದೊಡ್ಡ ಮಟ್ಟದಲ್ಲಿ ಕುಸಿಯಲಿಲ್ಲ. ಯಶಸ್ವಿ ಚಿತ್ರಗಳೊಂದಿಗೆ ಪಯಣ ಮುಂದುವರಿಸುತ್ತಲೇ ಬಂದರು. ಕೊನೆಯದಾಗಿ ಬಿಡುಗಡೆಯಾದ “ಯುವರತ್ನ’ ಚಿತ್ರ ಒಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಆಗಿತ್ತು. ಪ್ರಸ್ತುತ ಪುನೀತ್‌ “ಜೇಮ್ಸ್‌’ ಚಿತ್ರದಲ್ಲಿ ನಟಿಸುತ್ತಿದ್ದರು. ಆ ಚಿತ್ರದ ಬಹುತೇಕ ಚಿತ್ರೀಕರಣ ಕೂಡ ಮುಗಿದಿತ್ತು. ಇದಲ್ಲದೇ, “ದ್ವಿತ್ವ’ ಸೇರಿದಂತೆ ಇನ್ನೊಂದೆರಡು ಚಿತ್ರಗಳು ಪುನೀತ್‌ ಕೈಯಲ್ಲಿದ್ದವು.

ಪುನೀತ್‌ ಹಿಟ್‌ ಸಿನೆಮಾಗಳು
ಪುನೀತ್‌ ರಾಜಕುಮಾರ್‌ ನಾಯಕ ನಟನಾಗಿ ಅಭಿನಯದ 28 ಸಿನೆಮಾಗಳ ಪೈಕಿ, 20ಕ್ಕೂ ಹೆಚ್ಚು ಸಿನೆಮಾಗಳು ಪುನೀತ್‌ ಸಿನಿ ಕೆರಿಯರ್‌ನ ಸೂಪರ್‌ ಹಿಟ್‌ ಸಿನೆಮಾಗಳಲ್ಲಿ ನಿಲ್ಲುತ್ತವೆ. ಪುನೀತ್‌ ನಾಯಕನಾಗಿ ಎಂಟ್ರಿಯಾದ ಮೊದಲ ಸಿನೆಮಾ “ಅಪ್ಪು’, ಎರಡನೇ ಸಿನೆಮಾ “ಅಭಿ’, “ಆಕಾಶ್‌’, “ನಮ್ಮ ಬಸವ’, “ಅಜಯ್‌’,  “ಮಿಲನ’, “ರಾಮ್‌’, “ಪೃಥ್ವಿ’, “ಜಾಕಿ’, “ಹುಡುಗರು’, “ಅಣ್ಣಾಬಾಂಡ್‌’, “ಪರಮಾತ್ಮ’, “ರಾಜಕುಮಾರ’, “ಯುವರತ್ನ’ ಹೀಗೆ ಹಲವು ಸಿನೆಮಾಗಳು ಸಿಗುತ್ತವೆ. ನಿರ್ಮಾಪಕರ ಪಾಲಿಗೆ ಸಿನೆಮಾಕ್ಕೆ ಹಾಕಿದ ಬಂಡವಾಳವನ್ನು “ಮಿನಿಮಂ ಗ್ಯಾರೆಂಟಿ’ಯ ಜೊತೆಗೆ ತಂದು ಕೊಡುವ ಸ್ಟಾರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪುನೀತ್‌ ರಾಜಕುಮಾರ್‌ ಅವರದ್ದು.

ಗಾಯಕರಾಗಿ ಹಿಟ್‌
ಡಾ| ರಾಜ್‌ಕುಮಾರ್‌ ನಾಯಕ ನಟರಾಗಿ ಹೇಗೆ ಖ್ಯಾತಿ ಪಡೆದಿದ್ದರೋ, ಗಾಯಕರಾಗಿಯೂ ಅಷ್ಟೇ ಜನಪ್ರಿಯತೆ ಹೊಂದಿದ್ದರು. ರಾಜ್‌ ಅವರ ಆ ಗುಣ ಪುನೀತ್‌ ಅವರಿಗೂ ಬಂದಿತ್ತು. ಪುನೀತ್‌ ಕೂಡಾ ನಾಯಕ ನಟರಾಗಿ ಹಿಟ್‌ ಆಗುವ ಜೊತೆಗೆ ಗಾಯಕರಾಗಿಯೂ ಯಶಸ್ಸು ಕಂಡಿದ್ದರು. ಬಾಲನಟರಾಗಿ 10ಕ್ಕೂ ಹೆಚ್ಚು ಹಾಡುಗಳು ಹಾಗೂ ನಾಯಕ ನಟರಾದ ನಂತರ 80ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಖ್ಯಾತಿ ಪುನೀತ್‌ ಅವರದು.

ಟಾಪ್ ನ್ಯೂಸ್

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.