ಎಸೆಸೆಲ್ಸಿ ಅಂಕಪಟ್ಟಿಗೆ ಕ್ಯುಆರ್ ಕೋಡ್?
Team Udayavani, Jan 19, 2021, 7:00 AM IST
ಬೆಂಗಳೂರು: ಎಸೆಸೆಲ್ಸಿ ವಿದ್ಯಾರ್ಥಿಗಳ ಅಂಕಪಟ್ಟಿಗೆ ಇನ್ನಷ್ಟು ಸುರಕ್ಷೆ ಒದಗಿಸುವುದಕ್ಕಾಗಿ ಕ್ಯುಆರ್ ಕೋಡ್ ಅಳವಡಿಸುವ ಬಗ್ಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿದೆ. ಅಂಕಪಟ್ಟಿ ನಕಲು ತಡೆಯಲು, ಶೀಘ್ರ ಮಾಹಿತಿ ಪಡೆಯಲು ಅನುಕೂಲಕರ ಎನ್ನು ವುದು ಮಂಡಳಿಯ ಪ್ರತಿಪಾದನೆ. ಸರಕಾರದ ಅನುಮತಿ ದೊರೆತರೆ 2020-21ನೇ ಸಾಲಿನ ಅಂಕಪಟ್ಟಿಯಲ್ಲೇ ಈ ವ್ಯವಸ್ಥೆ ಬರುವ ಸಾಧ್ಯತೆ ಇದೆ.
ಬಹುತೇಕ ಎಲ್ಲ ಔದ್ಯೋಗಿಕ ಮತ್ತು ಶೈಕ್ಷಣಿಕ ಉದ್ದೇಶ ಗಳಿಗೆ ಎಸೆಸೆಲ್ಸಿ ಅಂಕಪಟ್ಟಿ ಅಗತ್ಯ. ಇದಕ್ಕೆ ಎಷ್ಟು ಭದ್ರತೆ ಒದಗಿಸಿದರೂ ನಕಲಿ ಅಂಕಪಟ್ಟಿ ಸೃಷ್ಟಿಸುವವರು ಹೊಸ ಮಾರ್ಗಗಳನ್ನು ಪತ್ತೆಹಚ್ಚುತ್ತಲೇ ಇರುತ್ತಾರೆ. ಹೀಗಾಗಿ ಕ್ಯುಆರ್ ಕೋಡ್ ಅಳವಡಿಸಲು ನಿರ್ಧರಿಸಲಾಗಿದೆ.
ಡಿಜಿ ಲಾಕರ್ಗೆ ಅಂಕಪಟ್ಟಿ ಅಪ್ಡೇಟ್ ಮಾಡುವ ಕಾರ್ಯವೂ ನಡೆಯುತ್ತಿದೆ. ಇದೆಲ್ಲ ಪೂರ್ಣಗೊಂಡ ಅನಂತರ ಕ್ಯುಆರ್ ಕೋಡ್ ಅಳವಡಿಸುವ ಚಿಂತನೆ ಇದೆ ಎಂದು ಅಧಿಕಾರಿಯೊಬ್ಬರು ವಿವರ ನೀಡಿದ್ದಾರೆ.
ಎಲ್ಲ ದಾಖಲೆಗಳ ಡಿಜಿಟಲೀಕರಣ ಬಹು ತೇಕ ಪೂರ್ಣಗೊಳ್ಳುತ್ತಿದೆ. ಅಂಕಪಟ್ಟಿ ಗಳಿಗೆ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾದ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ. ಅಂಕಪಟ್ಟಿಗಳ ಸುರಕ್ಷೆ ಸಂಬಂಧ ಕ್ಯುಆರ್ ಕೋಡ್ ಅಳವಡಿಸುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದೇವೆ.–ವಿ. ಸುಮಂಗಲಾ, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ
- ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ
ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು
Temperature; ರಾಜ್ಯದಲ್ಲಿ ಮತ್ತೆ ದಿಢೀರ್ ಏರಿದ ತಾಪಮಾನ
ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ
MUST WATCH
ಹೊಸ ಸೇರ್ಪಡೆ
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?