ತೌಕ್ತೆ ಚಂಡಮಾರುತದಿಂದ ಹಾನಿ: ಕರಾವಳಿ ಜಿಲ್ಲೆಗಳಿಗೆ ಸಚಿವ ಅಶೋಕ್ ಎರಡು ದಿನಗಳ ಭೇಟಿ
Team Udayavani, May 17, 2021, 8:57 AM IST
ಬೆಂಗಳೂರು: ತೌಕ್ತೇ ಚಂಡಮಾರುತದಿಂದ ಉಂಟಾಗಿರುವ ಹಾನಿ ಪರಿಶೀಲನೆಗೆ ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ಅವರು ಕರಾವಳಿ ಜಿಲ್ಲೆಯಲ್ಲಿ ಎರಡು ದಿನ ಪ್ರವಾಸ ಮಾಡಲಿದ್ದಾರೆ.
ಇಂದು ಮಧ್ಯಾಹ್ನ ವಿಮಾನದ ಮೂಲಕ ಆಗಮಿಸುವ ಅವರು ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಉಂಟಾಗಿರುವ ಹಾನಿಯ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.
ಇದನ್ನೂ ಓದಿ:ಸಮುದ್ರ ಮಧ್ಯೆ 40 ಗಂಟೆಯಿಂದ ಒದ್ದಾಡುತ್ತಿರುವ ಟಗ್ ಸಿಬ್ಬಂದಿ: ಇನ್ನೂ ನಡೆಯದ ರಕ್ಷಣಾ ಕಾರ್ಯ
ಮಂಗಳೂರಿನ ಎನ್ ಎಂಪಿಟಿ ಕಚೇರಿಯಲ್ಲಿ ಎನ್ ಎಂಪಿಟಿ, ಎಂಆರ್ ಪಿಎಲ್, ಕೋಸ್ಟ್ ಗಾರ್ಡ್, ಕೋಸ್ಟಲ್ ಪೊಲೀಸ್ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ನಂತರ ಸಸಿಹಿತ್ಲು, ಭಟ್ಕಳ, ಮರವಂತೆ, ಕಾಫುಗೆ ತೆರಳಿ ಅಲ್ಲಿ ತೌಕ್ತೆ ಚಂಡಮಾರುತದಿಂದ ಉಂಟಾಗಿರುವ ಹಾನಿಯ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.