ರಾ.ರಾ.ನಗರ: ಮತ್ತೆ ಮುನಿರತ್ನ MLA ; 25,492 ಮತಗಳ ಅಂತರದ ಗೆಲುವು

Team Udayavani, May 31, 2018, 9:00 AM IST

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ನಂತರ ಮಿನಿ ಸಮರ ಎಂದೇ ಬಿಂಬಿತವಾಗಿರುವ
ರಾಜರಾಜೇಶ್ವರಿ ನಗರ ಕ್ಷೇತ್ರದ ಫ‌ಲಿತಾಂಶ ಗುರುವಾರ ಹೊರಬಿದ್ದಿದ್ದು, ಹಾಲಿ ಕಾಂಗ್ರೆಸ್‌ ಶಾಸಕ ಮುನಿರತ್ನ  ನಾಯ್ಡು  ಅವರು ಬಿಜೆಪಿಯ ತುಳಸಿ ಮುನಿರಾಜು ಗೌಡ ವಿರುದ್ಧ  25,492 ಮತಗಳ ಅಂತರದ ಭರ್ಜರಿ ಗೆಲುವು ದಾಖಲಿಸುವ ಮೂಲಕ 2 ನೇ ಬಾರಿಗೆ ವಿಧಾನ ಸಭೆಗೆ ಪ್ರವೇಶಿಸಿದ್ದಾರೆ. 

ರಾಜರಾಜೇಶ್ವರಿ ನಗರದಲ್ಲಿ  ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಎಲ್ಲೆ ಡೆ ಕಾಂಗ್ರೆಸ್‌ ಧ್ವಜಗಳನ್ನು ಹಿಡಿದು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಗುತ್ತಿದೆ. 

 ಮೈಸೂರು ರಸ್ತೆ ಹಲಗೆವಡೇರಹಳ್ಳಿಯ ಶ್ರೀ ಜ್ಞಾನಶಕ್ತಿ ವಿದ್ಯಾನಿಕೇತನ ಶಾಲೆಯಲ್ಲಿ  ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿ ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಅವರು ಆರಂಭದಿಂದಲೂ ಭಾರೀ ಮುನ್ನಡೆ ಕಾಯ್ದುಕೊಂಡಿದ್ದರು. 

ಎಲ್ಲಾ ಸುತ್ತುಗಳಲ್ಲಿ  ಭಾರೀ ಮುನ್ನಡೆ ಕಾಯ್ದು ಕೊಂಡ ಮುನಿರತ್ನ ಅವರು ಮತ ಎಣಿಕೆ ಮುಗಿದಾಗ 1,08,064 ಮತಗಳನ್ನು ಪಡೆದು ಜಯಭೇರಿ ಬಾರಿಸಿದರು. 

ಬಿಜೆಪಿಯ ಮುನಿರಾಜು ಗೌಡ ಅವರು 82,572 ಮತಗಳನ್ನು ಪಡೆದರೆ ಜೆಡಿಎಸ್‌ನ ರಾಮಚಂದ್ರ 60,360 ಮತಗಳನ್ನು ಪಡೆದರು. 

ದಾಪುಗಾಲಿಟ್ಟಿದ್ದಾರೆ.ಹುಚ್ಚ ವೆಂಕಟ್‌ಗೆ 193 ಮತಗಳು ನೋಟಾಗೆ 799 ಮತಗಳು ಚಲಾವಣೆಯಾಗಿವೆ. 

ಮೊದಲ ಸುತ್ತಿನಲ್ಲಿ ಮುನಿರತ್ನ ಅವರು 9,342 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಮುನಿರಾಜುಗೌಡ 5,520 ಹಾಗೂ ಜೆಡಿಎಸ್‌ನ ರಾಮಚಂದ್ರ ಅವರು 1,539 ಮತಗಳನ್ನು ಪಡೆದಿದ್ದಾರೆ. 

ಪಕ್ಷೇತರ ಹುಚ್ಚ ವೆಂಕಟ್‌ ಸೇರಿ ಒಟ್ಟು  14 ಅಭ್ಯರ್ಥಿಗಳು ಕಣದಲ್ಲಿದ್ದರು.  

ಮತ ಎಣಿಕೆ ಕೇಂದ್ರದಲ್ಲಿ ಅಗತ್ಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಮುಂಜಾಗ್ರತೆ ಕ್ರಮವಾಗಿ ಮತ ಎಣಿಕೆ ಸುತ್ತ ಹಾಗೂ ಕ್ಷೇತ್ರದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಡಿ.ಕೆ ಬ್ರದರ್ಸ್‌ ಜೊತೆ ಸುದ್ದಿಗೋಷ್ಠಿ 

ಗೆಲುವು ಖಾತ್ರಿಯಾಗುತ್ತಿದ್ದಂತೆ ಮುನಿರತ್ನ ಅವರು ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್‌ ಮತ್ತು ಡಿ.ಕೆ.ಸುರೇಶ್‌ ಅವರೊಂದಿಗೆ ಸುದ್ದಿಗೋಷ್ಠಿ  ಮತದಾರರರಿಗೆ ಧನ್ಯವಾದ ಸಲ್ಲಿಸಿದರು. ನಾನು ಈ ಜನ್ಮದಲ್ಲಿ ನಿಮ್ಮ ಋಣ ತೀರಿಸುವುದು ಅಸಾಧ್ಯ ಎಂದರು. 

ಜನರು ಯಡಿಯೂರಪ್ಪನವರು ಹೇಳಿದಂತೆ ಹಣ ಬಲಕ್ಕೆ ಮತ ನೀಡಿಲ್ಲ. ನಾನು ಕಳೆದ 5 ಷರ್ವಗಳಲ್ಲಿ  ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ನೋಡಿ ಮತ ನೀಡಿದ್ದಾರೆ. ಇದು ಕ್ಷೇತ್ರದ ಜನರ ಗೆಲುವು ಎಂದರು. 

ಡಿ.ಕೆ.ಶಿವಕುಮಾರ್‌ ಅವರು ಮಾತನಾಡಿ ಯಾವುದೇ ಕುತಂತ್ರಗಳಿಗೆ ಜನರು ಮರುಳಾಗಲಿಲ್ಲ. ಅಪಪ್ರಚಾರಕ್ಕೆ ಕಿವಿಗೊಡಲಿಲ್ಲ. ಇದು ಅಭಿವೃದ್ಧಿಯ ಗೆಲುವು ಎಂದರು. 

 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ