Udayavni Special

ಮಳೆ: ಲೋಕೋಪಯೋಗಿ ಇಲಾಖೆಗೆ ಸಾವಿರ ಕೋಟಿ ನಷ್ಟ

Team Udayavani, Aug 22, 2018, 6:00 AM IST

19.jpg

ಬೆಂಗಳೂರು: ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದ ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸೇರಿದ ಸುಮಾರು ಒಂದು ಸಾವಿರ ಕೋಟಿ ರೂ. ಮೌಲ್ಯದ ರಸ್ತೆ ಮತ್ತು ಕಟ್ಟಡಗಳು ಹಾನಿಗೀಡಾಗಿವೆ.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಲೋಕೋಪಯೋಗಿ ಸಚಿವ ಎಚ್‌ .ಡಿ.ರೇವಣ್ಣ, ಸದ್ಯದ ಮಾಹಿತಿ ಪ್ರಕಾರ 1 ಸಾವಿರ ಕೋಟಿ ರೂ.ನಷ್ಟವಾಗಿದೆ. ಜಿಲ್ಲೆಗಳಿಂದ ಸಮಗ್ರ ಮಾಹಿತಿ ಇನ್ನಷ್ಟೇ ಬರಬೇಕಿದ್ದು, ನಷ್ಟದ ಪ್ರಮಾಣ ಹೆಚ್ಚಾಗಲಿದೆ. ರಾಜ್ಯ ಹೆದ್ದಾರಿಗಳು ಹಾಳಾಗಿ 430.89 ಕೋಟಿ ರೂ., ರಾಷ್ಟ್ರೀಯ ಹೆದ್ದಾರಿಗಳು ಹಾಳಾಗಿ 487 ಕೋಟಿ ರೂ. ಹಾಗೂ ಸರ್ಕಾರಿ ಕಟ್ಟಡಗಳು ನಾಶವಾಗಿ 5.4 ಕೋಟಿ 
ರೂ.ನಷ್ಟ ಸಂಭವಿಸಿದೆ. ಎಲ್ಲಾ ಮಾಹಿತಿ ಬಂದ ಬಳಿಕ ವರದಿ ಸಿದಟಛಿಪಡಿಸಿ ಪರಿಹಾರ ಕೋರಿ ಪ್ರಧಾನಿ ಮತ್ತು ಕೇಂದ್ರ ಹೆದ್ದಾರಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಈ ಸಂದರ್ಭದಲ್ಲಿ ನಿಯೋಗದೊಂದಿಗೆ ಬರುವಂತೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನೂ ಕೋರಿದ್ದೇನೆ ಎಂದರು.

ಲೋಕೋಪಯೋಗಿ ರಸ್ತೆಗಳಿಗೆ ಸಂಬಂಧಿಸಿದಂತೆ  ಮಂಗಳೂರು, ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು, ಬೆಂಗಳೂರು, ಕೋಲಾರ, ಉಡುಪಿ, ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ವಲಯದಲ್ಲಿ 365 ಕೋಟಿ ರೂ., ಕಾರವಾರ, ಧಾರವಾಡ, ಹುಬ್ಬಳ್ಳಿ, ಹಾವೇರಿ, ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡ ಉತ್ತರ ವಲಯದಲ್ಲಿ 60.83 ಕೋಟಿ ರೂ., ಕಲಬುರಗಿ, ಬೀದರ್‌, ಬಳ್ಳಾರಿ, ರಾಯ ಚೂರು ಹಾಗೂ ಕೊಪ್ಪಳ ಜಿಲ್ಲೆಗಳನ್ನು ಒಳಗೊಂಡ ಈಶಾನ್ಯ ವಲಯದಲ್ಲಿ 5.10 ಕೋಟಿ ರೂ.ಮೌಲ್ಯದ
ರಸ್ತೆ ಮತ್ತು ಸೇತುವೆಗಳು ಹಾನಿಗೊಳಗಾಗಿವೆ. ಅಲ್ಲದೆ, ಒಟ್ಟು 538 ಸೇತುವೆಗಳು ಸಂಪೂರ್ಣ ನಾಶವಾಗಿದ್ದು 78.49 ಕೋಟಿ ರೂ.ನಷ್ಟವಾಗಿದೆ ಎಂದು ತಿಳಿಸಿದರು. ರಸ್ತೆ ಮತ್ತು ಸೇತುವೆಗಳ ದುರಸ್ಥಿ ಕಾರ್ಯ ಸದ್ಯಕ್ಕೆ ಸಾಧ್ಯವಿಲ್ಲ. ಏಕೆಂದರೆ, ಗುಡ್ಡಗಳು ಕುಸಿಯುತ್ತಿವೆ. ರಸ್ತೆಗಳು ಕೆಲವು ಕಡೆ 10 ಅಡಿಗಳಷ್ಟು ಕೆಳಗೆ ಕುಸಿದಿವೆ. ಸಕಲೇಶಪುರ-ಸೋಮವಾರಪೇಟೆ ರಸ್ತೆಯಲ್ಲಿ ಬಾಟ್ಲಾ ಎಂಬಲ್ಲಿ ಅರ್ಧ ಕಿ.ಮೀ.ನಷ್ಟು ಗುಂಡಿ ಬಿದ್ದಿದೆ. ಇದರ ದುರಸ್ಥಿಗೆ ಸುಮಾರು 60 ಕೋಟಿ ರೂ.ಬೇಕಾಗುವ ಅಂದಾಜಿದೆ ಎಂದರು. ನೆರೆಪೀಡಿತ ಕೊಡಗು ಜಿಲ್ಲೆಗೆ ಲೋಕೋಪಯೋಗಿ ಇಲಾಖೆಯ 4 ವಿಭಾಗಗಳನ್ನು
ಸ್ಥಳಾಂತರ ಮಾಡಲಾಗಿದ್ದು, 100 ಇಂಜಿನಿಯರ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಪ್ಪು ಎನ್ನುವುದಾದರೆ ಕ್ಷಮೆ ಯಾಚಿಸುವೆ
ಬೆಂಗಳೂರು: “ಪ್ರಕೃತಿ ವಿಕೋಪದಿಂದ ಕಂಗೆಟ್ಟಿದ್ದ ಸಂತ್ರಸ್ತರ ಹಸಿವು ತಣಿಸಲು ಎಲ್ಲರಿಗೂ ಬಿಸ್ಕತ್‌ ಸಿಗಲಿ ಎಂಬ ಉದ್ದೇಶದಿಂದ ಬಿಸ್ಕತ್‌  ಪ್ಯಾಕೆಟ್‌ಗಳನ್ನು ಎಸೆದಿದ್ದೇನೆಯೇ ಹೊರತು ದುರಹಂಕಾರ ಅಥವಾ ಅವರಿಗೆ ಅವಮಾನ ಮಾಡುವ ಉದ್ದೇಶದಿಂದ ಅಲ್ಲ’ ಎಂದು ಲೋಕೋಪಯೋಗಿ ಸಚಿವ ಎಚ್‌ .ಡಿ.ರೇವಣ್ಣ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ದುರಂಹಕಾರದ ವರ್ತನೆ ಮಾಡಿದ್ದರೆ ನಾನೇ ಮೊದಲು ಹೋಗಿ ನಾಲ್ಕು ದಿನ ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿರಲಿಲ್ಲ. 250 ಕ್ವಿಂಟಲ್‌ ಅಕ್ಕಿ, 3000 ಲೀಟರ್‌ ಹಾಲು, ಭಾರೀ ಪ್ರಮಾಣದಲ್ಲಿ ಬಿಸ್ಕತ್‌ ಮತ್ತು ಬೇಳೆಯನ್ನು ಸಂತ್ರಸ್ತರಿಗೆ ನೀಡುತ್ತಿರಲಿಲ್ಲ ಎಂದರು.

ರಾಮನಾಥಪುರಕ್ಕೆ ಭೇಟಿ ನೀಡಿದಾಗ ಅಲ್ಲಿ ಸಂತ್ರಸ್ತರು ಹಸಿವಿನಿಂತ ತತ್ತರಿಸುತ್ತಿದ್ದುದು ಕಂಡುಬಂತು. ಹೀಗಾಗಿ ನಾನೇ ಮುಂದೆ ನಿಂತು ಬಿಸ್ಕತ್‌ ಹಂಚಿದೆ. ಮೊದಲ ಎರಡು ಸಾಲಿನಲ್ಲಿದ್ದವರ ಕೈಗೆ ಬಿಸ್ಕತ್‌ ಪ್ಯಾಕ್‌ ಕೊಟ್ಟೆ. ಅಷ್ಟರಲ್ಲಿ ಹಿಂದೆ ನಿಂತಿದ್ದವರು ತಮಗೂ ತಲುಪಿಸಿ ಎಂದು ಕೂಗಲಾರಂಭಿಸಿದರು. ಆದರೆ, ಅವರ ಮಧ್ಯೆ ಹೋಗಲು ಜಾಗ ಇರಲಿಲ್ಲ. ಹೀಗಾಗಿ ಎಲ್ಲರಿಗೂ ಬಿಸ್ಕತ್‌ ಸಿಗಬೇಕು ಎಂದು ನಿಂತಲ್ಲಿಂದಲೇ ಎಸೆದೆ. ಇದು ತಪ್ಪು ಎನ್ನುವುದಾದರೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸುವೆ ಎಂದು ಸ್ಪಷ್ಟಪಡಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸ್ಯಾಂಡಲ್ ವುಡ್ ಡ್ರಗ್ ಕೇಸ್: ರಾಗಿಣಿ, ಸಂಜನಾ ಜಾಮೀನು ಅರ್ಜಿ ಮುಂದೂಡಿಕೆ

ಸ್ಯಾಂಡಲ್ ವುಡ್ ಡ್ರಗ್ ಕೇಸ್: ರಾಗಿಣಿ, ಸಂಜನಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಆತ್ಮನಿರ್ಭರ ಯೋಜನೆಯಡಿ ಸಾವಯವ ಬೆಲ್ಲ ಉತ್ಪಾದನೆಗೆ ಉತ್ತೇಜನ: ಸೋಮಶೇಖರ್

ಆತ್ಮನಿರ್ಭರ ಯೋಜನೆಯಡಿ ಸಾವಯವ ಬೆಲ್ಲ ಉತ್ಪಾದನೆಗೆ ಉತ್ತೇಜನ: ಸೋಮಶೇಖರ್

ವೈದ್ಯರು, ನರ್ಸ್ ಮೇಲೆ ಹಲ್ಲೆ ನಡೆಸಿದ್ರೆ ಜೈಲು: ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆ ಪಾಸ್

ವೈದ್ಯರು, ನರ್ಸ್ ಮೇಲೆ ಹಲ್ಲೆ ನಡೆಸಿದ್ರೆ ಜೈಲು: ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆ ಪಾಸ್

ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣಗೆ ಕೋವಿಡ್ ಸೋಂಕು ದೃಢ

ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣಗೆ ಕೋವಿಡ್ ಸೋಂಕು ದೃಢ

ರೈತರ ವೇಷದಲ್ಲಿ ಹೋಗಿ ಗಾಂಜಾ ಬೆಳೆದ ಆರೋಪಿಗಳನ್ನು ಬಂಧಿಸಿದ ಎಸ್ ಐ: 75 ಕೆಜಿ ಗಾಂಜಾ ವಶ

ರೈತರ ವೇಷದಲ್ಲಿ ಹೋಗಿ ಗಾಂಜಾ ಬೆಳೆದ ಆರೋಪಿಗಳನ್ನು ಬಂಧಿಸಿದ ಎಸ್ ಐ: 75 ಕೆಜಿ ಗಾಂಜಾ ವಶ

ಕಾಶ್ಮೀರದಲ್ಲಿರುವ ಉಗ್ರರಿಗೆ ಪಾಕ್ ನಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರ; ಮೂವರು ಉಗ್ರರ ಸೆರೆ

ಕಾಶ್ಮೀರದಲ್ಲಿರುವ ಉಗ್ರರಿಗೆ ಪಾಕ್ ನಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರ; ಮೂವರು ಉಗ್ರರ ಸೆರೆ

ಈ ಕಾರಣಕ್ಕೆ ‘ಈ ಸಲ ಕಪ್ ನಮ್ಮದೇ’ ಎಂದ ಬೆಂಗಳೂರು ಪೊಲೀಸರು!

ಈ ಕಾರಣಕ್ಕೆ ‘ಈ ಸಲ ಕಪ್ ನಮ್ಮದೇ’ ಎಂದ ಬೆಂಗಳೂರು ಪೊಲೀಸರು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಲಬುರ್ಗಾ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಗಾಂಜಾ ಘಾಟು! ಪೊಲೀಸ್ ಇಲಾಖೆಯ ನಿರ್ಲಕ್ಷ್ಯ

ಯಲಬುರ್ಗಾ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಗಾಂಜಾ ಘಾಟು! ಪೊಲೀಸ್ ಇಲಾಖೆಯ ನಿರ್ಲಕ್ಷ್ಯ

ಸ್ಯಾಂಡಲ್ ವುಡ್ ಡ್ರಗ್ ಕೇಸ್: ರಾಗಿಣಿ, ಸಂಜನಾ ಜಾಮೀನು ಅರ್ಜಿ ಮುಂದೂಡಿಕೆ

ಸ್ಯಾಂಡಲ್ ವುಡ್ ಡ್ರಗ್ ಕೇಸ್: ರಾಗಿಣಿ, ಸಂಜನಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಟ್ರ್ಯಾಕ್ಟರ್ ಟಯರ್ ಗಳನ್ನು ಕದಿಯುತ್ತಿದ್ದ 7 ಮಂದಿ ಸೆರೆ ! 4.60 ಲಕ್ಷ ಮೌಲ್ಯದ ಸೊತ್ತು ವಶ

ಟ್ರ್ಯಾಕ್ಟರ್ ಟಯರ್ ಗಳನ್ನು ಕದಿಯುತ್ತಿದ್ದ 7 ಮಂದಿ ಸೆರೆ ! 4.60 ಲಕ್ಷ ಮೌಲ್ಯದ ಸೊತ್ತು ವಶ

ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣಗೆ ಕೋವಿಡ್ ಸೋಂಕು ದೃಢ

ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣಗೆ ಕೋವಿಡ್ ಸೋಂಕು ದೃಢ

ಟೈರ್ ಸ್ಪೋಟಗೊಂಡು ಬೈಕಿಗೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್ :ಕೋವಿಡ್ ರೋಗಿ ಸೇರಿ ಇಬ್ಬರು ಸಾವು

ಟೈರ್ ಸ್ಪೋಟಗೊಂಡು ಬೈಕಿಗೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್ :ಕೋವಿಡ್ ರೋಗಿ ಸೇರಿ ಇಬ್ಬರು ಸಾವು

MUST WATCH

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆಹೊಸ ಸೇರ್ಪಡೆ

ಜಿಲ್ಲಾಧಿಕಾರಿ ಕಚೇರಿಗೆ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ ಜಾಥಾ

ಜಿಲ್ಲಾಧಿಕಾರಿ ಕಚೇರಿಗೆ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ ಜಾಥಾ

ಯಲಬುರ್ಗಾ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಗಾಂಜಾ ಘಾಟು! ಪೊಲೀಸ್ ಇಲಾಖೆಯ ನಿರ್ಲಕ್ಷ್ಯ

ಯಲಬುರ್ಗಾ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಗಾಂಜಾ ಘಾಟು! ಪೊಲೀಸ್ ಇಲಾಖೆಯ ನಿರ್ಲಕ್ಷ್ಯ

ಪೈನ್‌ ಆ್ಯಂಡ್‌ ಪಾಲಿಯೇಟಿವ್‌ ವಾಹನಕ್ಕೆ ಸಚಿವ ಇ. ಚಂದ್ರಶೇಖರನ್ ರಿಂದ ಹಸುರು ನಿಶಾನೆ

ಪೈನ್‌ ಆ್ಯಂಡ್‌ ಪಾಲಿಯೇಟಿವ್‌ ವಾಹನಕ್ಕೆ ಸಚಿವ ಇ. ಚಂದ್ರಶೇಖರನ್ ರಿಂದ ಹಸುರು ನಿಶಾನೆ

ಸ್ಯಾಂಡಲ್ ವುಡ್ ಡ್ರಗ್ ಕೇಸ್: ರಾಗಿಣಿ, ಸಂಜನಾ ಜಾಮೀನು ಅರ್ಜಿ ಮುಂದೂಡಿಕೆ

ಸ್ಯಾಂಡಲ್ ವುಡ್ ಡ್ರಗ್ ಕೇಸ್: ರಾಗಿಣಿ, ಸಂಜನಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾನಸಿಕ ಚಿಕಿತ್ಸೆ

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾನಸಿಕ ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.