ರಾಜ್ಯೋತ್ಸವ ಪ್ರಶಸ್ತಿಗೆ ನೃತ್ಯ ಕ್ಷೇತ್ರ ಪರಿಗಣಿಸಲು ಆಗ್ರಹ
Team Udayavani, Oct 30, 2019, 3:00 AM IST
ಬೆಂಗಳೂರು: ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ನೃತ್ಯ ವಿಭಾಗವನ್ನು ಪರಿಗಣಿಸದೇ ಇರುವುದು ಬೇಸರ ಮೂಡಿಸಿದೆ ಎಂದು ಹಿರಿಯ ನೃತ್ಯ (ಕುಚಿಪುಡಿ) ಕಲಾವಿದೆ ಡಾ.ವೀಣಾಮೂರ್ತಿ ವಿಜಯ್ ದೂರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ನೃತ್ಯ ಕ್ಷೇತ್ರದಲ್ಲಿ ಹಲವು ಸಾಧಕರಿದ್ದಾರೆ. ದೇಶ-ವಿದೇಶಗಳಲ್ಲಿ ನಾಡಿನ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಇಂತಹ ಕಲಾವಿದರನ್ನು ಗೌರವಿಸುವ ಕೆಲಸವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡಬೇಕಾಗಿತ್ತು. ಕರ್ನಾಟಕ ನೃತ್ಯಕಲಾ ಪರಿಷತ್ತಿನ ಅಧ್ಯಕ್ಷ ಸಾಯಿ ವೆಂಕಟೇಶ್, ನೃತ್ಯಗುರು ವಸಂತಲಕ್ಷ್ಮೀ ಅವರಂತಹ ಹಿರಿಯ ಕಲಾವಿದರಿದ್ದಾರೆ. ಅಂತವರನ್ನು ಮುಂದಿನ ದಿನಗಳಲ್ಲಾ ದರೂ ಸರ್ಕಾರ ಗುರುತಿಸಲಿ ಎಂದು ಮನವಿ ಮಾಡಿದ್ದಾರೆ.