
ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವಿಲ್ಲ: ರಾಮದಾಸ್
Team Udayavani, Sep 1, 2019, 3:00 AM IST

ಮೈಸೂರು: ಬಿಜೆಪಿಗೆ ಬಹಳ ಜನ ಅತಿಥಿಗಳು ಬಂದಿರುವುದರಿಂದ ಮೊದಲು ಅವರಿಗೆ ಆದ್ಯತೆ ನೀಡಬೇಕಿದೆ. ಹೀಗಾಗಿ, ನನಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂಬ ನೋವು ಇಲ್ಲ. ಬೇಸರವೂ ಇಲ್ಲ. ದಸರಾ ಕಾರ್ಯಕ್ರಮಗಳಲ್ಲಿ ಇನ್ನು ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತಿಥಿ ದೇವೋಭವ ಎನ್ನುವ ಸಂಸ್ಕೃತಿ ನಮ್ಮದು. ಹೀಗಾಗಿ, ಪಕ್ಷಕ್ಕೆ ಬರುವ ಅತಿಥಿಗಳಿಗೆ ಮೊದಲು ಉಣ ಬಡಿಸಲಿ, ನಂತರ ನಮ್ಮದು ಎಂದರು. ಗಜಪಯಣದೊಂದಿಗೆ ದಸರಾ ಆರಂಭವಾಗುತ್ತದೆ. ವೀರನಹೊಸಳ್ಳಿಯಲ್ಲಿ 11.30ರವರೆಗೆ ಗಜಪಡೆ ಪೂಜೆಗೆ ಮುಹೂರ್ತ ನಿಗದಿಯಾಗಿತ್ತು.
ಹೀಗಾಗಿ, ಮುಹೂರ್ತ ಮೀರಬಾರದು ಎಂಬ ಕಾರಣಕ್ಕೆ 11ಗಂಟೆಗೆ ಪ್ರಧಾನಿ ಮತ್ತು ಮುಖ್ಯಮಂತ್ರಿ ಹೆಸರಲ್ಲಿ ಪೂಜೆ ಸಲ್ಲಿಸಿ, ಅರ್ಜುನನಿಗೆ ಫಲ ತಾಂಬೂಲ ನೀಡುವಾಗ ನಾನೊಬ್ಬನೇ ಇದ್ದೆ. ಇತ್ತೀಚೆಗೆ ಸುಳ್ಯ ಬಳಿ ಅಪಘಾತವಾಗಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿತ್ತು. ಆದ್ದರಿಂದ ದಸರಾ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲಾಗಿಲ್ಲ. ಇದರ ಹೊರತಾಗಿ ಮಂತ್ರಿ ಸ್ಥಾನ ಕೊಟ್ಟಿಲ್ಲ ಎಂಬ ಬೇಸರವಿಲ್ಲ ಎಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂದುವರಿದ ವರ್ಗಾವಣೆ ಪರ್ವ: ಆಂತರಿಕ ಭದ್ರತಾ ವಿಭಾಗಕ್ಕೆ ರವಿ ಡಿ ಚನ್ನಣ್ಣನವರ್ ವರ್ಗಾವಣೆ

ಕಾಂಗ್ರೆಸ್ ಸರಕಾರದಲ್ಲಿ ವರ್ಗಾವಣೆ ದಂಧೆ ಆರಂಭ; ಪ್ರತಿ ಹುದ್ದೆಗೂ ರೇಟ್ ಫಿಕ್ಸ್: HDK ಆರೋಪ

Lok Sabha Election;ರಾಜಕೀಯ ಸಾಕು: ಅಚ್ಚರಿಯ ಹೇಳಿಕೆ ನೀಡಿದ ಸಂಸದ ಡಿ.ಕೆ.ಸುರೇಶ್

Police ಕುಂಕುಮ, ವಿಭೂತಿ ಹಚ್ಚಿಕೊಳ್ಳಬಾರದು ಎಂದಿಲ್ಲ: ಡಾ.ಜಿ.ಪರಮೇಶ್ವರ್ ಎಚ್ಚರಿಕೆ

ಶಾಸನ ಸಭೆಯ ಗೌರವ ಕಾಪಾಡಿ: ಸ್ಪೀಕರ್ ಖಾದರ್ ಗೆ ಉಪರಾಷ್ಟ್ರಪತಿ ಸಲಹೆ
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
