Temperature; ರಾಜ್ಯದೆಲ್ಲೆಡೆ ತಗ್ಗಿದ ಮಳೆ, ಹೆಚ್ಚಿದ ತಾಪಮಾನ!
ಬಹುತೇಕ ಜಿಲ್ಲೆಗಳಲ್ಲಿ ಮಿತಿಗಿಂತ ಹೆಚ್ಚಿನ ಗರಿಷ್ಠ ತಾಪಮಾನ
Team Udayavani, Sep 18, 2024, 6:50 AM IST
ಬೆಂಗಳೂರು: ರಾಜ್ಯಾದ್ಯಂತ ಮಳೆಯ ಪ್ರಮಾಣ ತಗ್ಗಿ ಮತ್ತೆ ಬೇಗೆಯ ಅನುಭವ ಉಂಟಾಗುತ್ತಿದೆ. ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಮಿತಿಗಿಂತ ಹೆಚ್ಚಿನ ಗರಿಷ್ಠ ತಾಪಮಾನ ದಾಖಲಾಗಿದೆ.
ಕರ್ನಾಟಕದಲ್ಲಿ ಸೆಪ್ಟೆಂಬರ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ವರ್ಷಧಾರೆ ಸುರಿದು ಚಳಿಯ ವಾತಾವರಣ ಇರುತ್ತಿತ್ತು. ಆದರೆ, ಈ ಬಾರಿ ಸೆಪ್ಟೆಂಬರ್‌ನಲ್ಲಿ ಕರ್ನಾಟಕದಾದ್ಯಂತ ಗರಿಷ್ಠ ತಾಪಮಾನವು ಏರಿಕೆಯಾಗಿದೆ. ಪರಿಣಾಮ ಬೇಗೆಯ ವಾತಾವರಣ ಉಂಟಾಗುತ್ತಿದೆ. ತಾಪಮಾನವು ಇನ್ನಷ್ಟು ಹೆಚ್ಚಾಗುವ ಲಕ್ಷಣ ಗೋಚರಿಸಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.
ಏಕೆ ತಾಪಮಾನ ಏರಿಕೆ?
ಭೂಮಿಯಲ್ಲಿ ತೇವಾಂಶ ಕಡಿಮೆಯಾದರೆ ಗಾಳಿಯಲ್ಲಿ ನೀರಿನ ಅಂಶವಿಲ್ಲದೆ ತಾಪಮಾನ ಕಡಿಮೆಯಾಗುತ್ತದೆ. ಆದರೆ, ಈ ಹವಾಮಾನದ ವಾತಾವರಣ ಇಲ್ಲದಿರುವುದರಿಂದ ಬೇಗೆ ಉಂಟಾಗುತ್ತಿದೆ. ಬಂಗಾಳ ಉಪಸಾಗರದಲ್ಲಿ ಟ್ರಫ್ ಉಂಟಾದರೆ ಅದು ಉತ್ತರ ಕರ್ನಾಟಕದ ಬಹುತೇಕ ಭಾಗಗಳಿಗೆ ಮಳೆಯಾಗುತ್ತದೆ.
ಬಂಗಾಳ ಉಪಸಾಗರದಲ್ಲಿ ಲೋಫ್ರೆಜರ್ ಉಂಟಾಗಿ ಅವುಗಳ ಪ್ರಭಾವದಿಂದ ಉತ್ತರ ಕರ್ನಾಟಕದ ಕಡೆಗೆ ಹೆಚ್ಚಿನ ಗಾಳಿ ಬೀಸಿದರೆ ಈ ಭಾಗಗಳಲ್ಲೂ ಮಳೆಯಾಗುತ್ತದೆ. ಮಳೆಯಾದರೆ ತಾಪಮಾನ ಕೊಂಚ ಇಳಿಕೆಯಾಗಲಿದೆ.
ಎಲ್ಲೆಲ್ಲಿ ಗರಿಷ್ಠ ತಾಪಮಾನ ಹೆಚ್ಚಳ?
– ಬೆಂಗಳೂರಿನಲ್ಲಿ 1.3 ಡಿ.ಸೆ., ಹಾಸನದಲ್ಲಿ 5.7, ಮೈಸೂರು 2.7, ಮಂಡ್ಯ 2.6, ದಾವಣಗೆರೆ 2.8, ಕೊಪ್ಪಳ 2.8, ಮಂಗಳೂರು 1.6, ಬಾಗಲಕೋಟೆ 1.9, ಹಾವೇರಿ 1.9, ಕಾರವಾರ 2.7, ವಿಜಯಪುರ 0.8, ಧಾರವಾಡದಲ್ಲಿ 0.5 ಡಿ.ಸೆ. ಗರಿಷ್ಠ ತಾಪಮಾನವು ಮಿತಿಗಿಂತ ಹೆಚ್ಚಳವಿದೆ.
ಇಂದು ಕೆಲವೆಡೆ ಮಳೆ ಸಾಧ್ಯತೆ
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಬುಧವಾರ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಬೆಳಗಾವಿ, ವಿಜಯಪುರ, ಕಲಬುರಗಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಮುಖ್ಯವಾಗಿ ಶುಷ್ಕ ಹವಾಮಾನ ಇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು
Haveri: ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್… ಗೊರವಯ್ಯ ಕಾರ್ಣಿಕದ ನುಡಿ
Mysuru Dasara; ಅರಮನೆಯಲ್ಲಿ ಡಬಲ್ ಸಂಭ್ರಮ: ಯದುವೀರ್ ಅವರಿಗೆ 2ನೇ ಮಗು ಜನನ
Elephant: ಆಗುಂಬೆ ಪರಿಸರದಲ್ಲಿ ಕಾಡಾನೆ ಹಾವಳಿ… ಮಾಹಿತಿ ನೀಡಿದರೂ ಸ್ಪಂದಿಸದ ಅಧಿಕಾರಿಗಳು
Thirthahalli: ವ್ಯವಹಾರದಲ್ಲಿ ನಷ್ಟ, ಉಡುಪಿ ಮೂಲದ ವ್ಯಕ್ತಿ ತೀರ್ಥಹಳ್ಳಿಯಲ್ಲಿ ನೇಣಿಗೆ ಶರಣು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.