ಕೋಳಿಯಂತೆ ರೇಣುಕಾಸ್ವಾಮಿಯನ್ನು ಎಸೆದ ದರ್ಶನ್‌

ಪೊಲೀಸ್‌ ಅಧಿಕಾರಿ, ಸ್ನೇಹಿತನ ನಡುವಿನ ಸಂಭಾಷಣೆ ವೈರಲ್‌

Team Udayavani, Jun 15, 2024, 6:50 AM IST

ಕೋಳಿಯಂತೆ ರೇಣುಕಾಸ್ವಾಮಿಯನ್ನು ಎಸೆದ ದರ್ಶನ್‌

ಬೆಂಗಳೂರು: ಕೋಳಿಯನ್ನು ಎತ್ತಿ ಎಸೆಯುವಂತೆ ದರ್ಶನ್‌ ರೇಣುಕಾ ಸ್ವಾಮಿಯನ್ನು ಎಸೆದಿದ್ದಾನೆಂದು ಪೊಲೀಸ್‌ ಅಧಿಕಾರಿ ಹಾಗೂ ವ್ಯಕ್ತಿಯೊಬ್ಬರು ನಡೆಸಿದ್ದಾರೆ ಎನ್ನಲಾದ ಮೊಬೈಲ್‌ ಸಂಭಾಷಣೆ ಭಾರೀ ವೈರಲ್‌ ಆಗಿದೆ.

ರೇಣುಕಾ ಸ್ವಾಮಿಯನ್ನು ಸಿಕ್ಕಾಪಟ್ಟೆ ಚಿತ್ರಹಿಂಸೆ ಕೊಟ್ಟು ಭೀಕರವಾಗಿ ಕೊಲೆ ಮಾಡಲಾಗಿದೆ ಎಂಬ ಕೃತ್ಯದ ಬಗೆಗಿನ ಆಘಾತಕಾರಿ ಅಂಶಗಳನ್ನು ಪೊಲೀಸ್‌ ಅಧಿಕಾರಿ ಎನ್ನಲಾದ ವ್ಯಕ್ತಿ ತನ್ನ ಸ್ನೇಹಿತನಿಗೆ ವಿವರಿಸಿದ್ದಾನೆ. ಜತೆಗೆ ದರ್ಶನ್‌ ಮತ್ತವರ ತಂಡ ರೇಣುಕಾ ಸ್ವಾಮಿಯನ್ನು ಅದೆಷ್ಟು ಕ್ರೂರವಾಗಿ ಕೊಂದಿದ್ದಾರೆ ಎಂಬುದನ್ನೂ ಬಿಚ್ಚಿಟ್ಟಿದ್ದಾರೆ. ಮೊಬೈಲ್‌ ಸಂಭಾಷಣೆಯಲ್ಲಿ ಏನಿದೆ? ಪೊಲೀಸ್‌ ಎನ್ನಲಾದ ವ್ಯಕ್ತಿ ತನ್ನ ಸ್ನೇಹಿತನ ಜತೆ ನಡೆಸಿರುವ ಮೊಬೈಲ್‌ ಸಂಭಾಷಣೆಯ ವಿವರ.

ಪೊಲೀಸ್‌ ಅಧಿಕಾರಿ: 302 ಕೇಸ್‌ನಲ್ಲಿ ಹೆಸರು ತರಬೇಕಾದರೆ ಸುಮ್ಮನೆ ತರುವುದಿಲ್ಲ. ಲೈಫ್ ಅಲ್ವ. (ರೇಣುಕಾ ಸ್ವಾಮಿಯನ್ನು) ಸುಮ್ಮನೆ ವಾರ್ನಿಂಗ್‌ ಮಾಡಿ ಬಿಟ್ಟು ಕಳುಹಿಸಬಹುದಿತ್ತು.
ಸ್ನೇಹಿತ: ಹುಡುಗರು ಮಾಡಿದ್ದು ಅಂತಾರೆ ನಿಜಾನಾ?
ಪೊ: ಎಲ್ಲರೂ ಸೇರಿ ಹೊಡೆದಿರುವುದು, ಕಬ್ಬಿಣ ಕಾಯಿಸಿ ಬರೆ ಎಲ್ಲ ಹಾಕಿದ್ದಾರಲ್ಲ. ಸ್ಥಳದಲ್ಲಿದ್ದ ಸೀಜ್‌ ಮಾಡಿದ ಲಾರಿಗೆ ಆ ಚಿಕ್ಕ ಹುಡುಗನನ್ನು ಕೋಳಿ ಎತ್ತಿ ಎಸೆಯುವಂತೆ ಎಸೆಯುತ್ತಾನೆ ದರ್ಶನ್‌.
ಸ್ನೇ: ಹಲ್ಲೆ ಮಾಡುವ ವೀಡಿಯೋ ಇದೆಯಾ?
ಪೊ: ಹಾಂ, ಎಲ್ಲ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಇಲ್ಲಾಂದ್ರೆ ಸುಮ್ನೆ ಆಗುತ್ತಾ. ಅವನನ್ನು ಅರೆಸ್ಟ್‌ ಮಾಡದಂತೆ ಸಿಪಿ ಸಾಹೇಬ್ರಿಗೆ (ಪೊಲೀಸ್‌ ಆಯುಕ್ತರು) ಎಲ್ಲ ಕಡೆಯಿಂದ ಒತ್ತಡಗಳು ಬರಲಾರಂಭಿಸಿವೆ. ಇದ್ಯಾವುದಕ್ಕೂ ಜಗ್ಗಿಲ್ಲ. ಇಲ್ಲಿ ರಾಜಕೀಯ ಮಾಡಲಿಲ್ಲ. ಸೀದಾ ಎತ್ತಾಕ್ಕೊಂಡು ಬಂದಿದ್ದೆ. ಇವತ್ತಿನಿಂದ ಮಹಜರು ಎಲ್ಲ ಮಾಡಬೇಕು. ಸಿಕ್ಕಾಪಟೆ ಟಾರ್ಚರ್‌ ಕೊಟ್ಟಿದ್ದಾರೆ. ರಾಡ್‌ಗಳಲ್ಲಿ ಹೊಡೆದಿದ್ದಾರೆ. ಆ ಬೌನ್ಸರ್‌ಗಳು ಹೊಡೆದರೆ ತಡೆಯೋಕ್ಕಾಗುತ್ತಾ ಆ ಚಿಕ್ಕ ಹುಡುಗ. ಎಲ್ಲ ಕುಡಿದು ಬಂದು ಮಾಡಿದ್ದಾರೆ. ಸುಮ್ನೆ ಪೊಲೀಸ್‌ ಠಾಣೆಗೆ ದೂರು ಕೊಟ್ಟಿದ್ರೆ ಮುಗೀತಿತ್ತಪ್ಪ. 13 ಮಂದಿ ಮಾಡಿದ್ದಾರಲ್ಲ. ಬೇಲ್‌ ಸಿಗೋದು ತುಂಬ ಕಷ್ಟ. 1 ವರ್ಷ ಎಳೆದುಕೊಂಡು ಹೋಗಬಹುದು. 6 ತಿಂಗಳು ಹೊರಗೆ ಬರುವುದಿಲ್ಲ. ಸುಪ್ರೀಂಕೋರ್ಟ್‌ಗೆ ಹೋಗ್ಬೇಕು ಇವ್ನು. ಪೋಸ್ಟ್‌ ಮಾರ್ಟಂನಲ್ಲಿ ಎಷ್ಟು ಭೀಕರವಾಗಿದೆ ಗೊತ್ತಾ?
ಸ್ನೇ: ತ್ರೋಟ್‌, ನೋಸ್‌ ಕಟ್ಟಾಗಿದೆ. ಅಷ್ಟೊಂದು ಸಿಟ್ಟು ಏನಕ್ಕೆ ಗೊತ್ತಾಗಿಲ್ಲಪ್ಪ?
ಪೊ: ಅವ್ನು (ದರ್ಶನ್‌) ರೂಡ್‌ ಬಾಸು. ಕುಡಿದು ಬಿಟ್ಟರೆ ನಡಿಯಕ್ಕೆ ಆಗಲ್ಲ. ಆ ಪವಿತ್ರಾ ಗೌಡಗೂ ಹೊಡೆದಿದ್ದಾನೆ. ಅವಳು ಆಸ್ಪತ್ರೆಯಲ್ಲಿ ಅಡ್ಮಿಟ್‌ ಆಗಿ ಸೋಮವಾರ ಬಿಡುಗಡೆಯಾಗಿದ್ದಾಳೆ. ಇನ್ನು 4 ಮಂದಿ ಆರೋಪಿಗಳು ನಾವೇ ಕೊಲೆ ಮಾಡಿದ್ದೇವೆಂದು ಠಾಣೆಗೆ ಬಂದು ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಟ್ಟು ಬಿಟ್ಟರು. ಠಾಣೆ ಮೆಟ್ಟಿಲು ಹತ್ತಿ ಬಂದಂತೆ ಎಲ್ಲ ನಿಜ ಹೊರಗೆ ಬರುತ್ತದೆ.
ಸ್ನೇ: ಅದ್ಯಾಕೆ ರೋಡ್‌ ಸೈಡ್‌ನ‌ಲ್ಲಿ ಶವ ಎಸೆದರು ಎಂಬುದು ಗೊತ್ತಾಗಲಿಲ್ಲ?
ಪೊ: ಎಷ್ಟು ದೂರ ಅಂತಾ ಎತ್ತಿಕೊಂಡು ಹೋಗೋಕಾಗುತ್ತೆ. ಏನೋ ಮಾಡಾಕ್ಕೆ ಹೋಗಿ ಇನ್ನೇನೋ ಮಾಡ್ಕೊಂಡ್ರೊ. 50 ಕೋಟಿ ರೂ. ಬಜೆಟ್‌ದು ಡೆವಿಲ್‌ ಅಂತಾ ಸಿನೆಮಾ ಓಡ್ತಾ ಇದೆ. ಇನ್ನು 6 ತಿಂಗಳು ಹೆಂಗೆ. ದೊಡ್ಡ ದೊಡ್ಡ ವಕೀಲರನ್ನು ಕರೆಸಿದರೂ 6 ತಿಂಗಳು ಇವ್ನಿಗೆ ಬೇಲ್‌ ಸಿಗಲ್ಲ. ಬೇಲ್‌ ಕೊಟ್ಟರೆ, ಬೇರೆಯವರೂ ಮಾಡಲ್ವಾ?

ಟಾಪ್ ನ್ಯೂಸ್

4-health

Rhinoplasty: ರಿನೊಪ್ಲಾಸ್ಟಿ

Chitradurga: ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು; ಇಬ್ಬರು ಸ್ಥಳದಲ್ಲೇ ಮೃತ್ಯು, ಮೂವರು ಗಂಭೀರ

Chitradurga: ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು; ಇಬ್ಬರು ಸ್ಥಳದಲ್ಲೇ ಮೃತ್ಯು, ಮೂವರು ಗಂಭೀರ

ಬಿಹಾರದಲ್ಲೊಂದು ಅಮಾನುಷ ಕೃತ್ಯ… 12 ವರ್ಷದ ಬಾಲಕನನ್ನು ರೈಲು ಹಳಿಗೆ ಕಟ್ಟಿಹಾಕಿ ಥಳಿತ

ಬಿಹಾರದಲ್ಲೊಂದು ಅಮಾನುಷ ಕೃತ್ಯ… 12 ವರ್ಷದ ಬಾಲಕನನ್ನು ರೈಲು ಹಳಿಗೆ ಕಟ್ಟಿಹಾಕಿ ಥಳಿತ

3-udupi

Udupi: ಬೆಳ್ಳಂಬೆಳಗ್ಗೆ ಮನೆಯಲ್ಲಿ ಅಗ್ನಿ ದುರಂತ: ಬಾರ್ ಮಾಲೀಕ ಮೃತ್ಯು, ಪತ್ನಿ ಗಂಭೀರ  

Mudigere: ರಾಣಿ ಝರಿಯ ಕೆಸರುಮಯ ರಸ್ತೆಯಲ್ಲಿ ಬೈಕ್ ರೈಡರ್ ಹುಚ್ಚಾಟ..

Mudigere: ರಾಣಿ ಝರಿಯ ಕೆಸರುಮಯ ರಸ್ತೆಯಲ್ಲಿ ಬೈಕ್ ರೈಡರ್ ಗಳ ಹುಚ್ಚಾಟ..

Madhya Pradesh: ಒಂದೇ ದಿನದಲ್ಲಿ 11ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ವಿಶ್ವದಾಖಲೆ…

Madhya Pradesh: ಒಂದೇ ದಿನದಲ್ಲಿ 11ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ವಿಶ್ವದಾಖಲೆ…

Urban-naxal

Maharastra Urban Naxals Bill: ನಗರ ನಕ್ಸಲರಿಗೆ ಮೂಗುದಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chitradurga: ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು; ಇಬ್ಬರು ಸ್ಥಳದಲ್ಲೇ ಮೃತ್ಯು, ಮೂವರು ಗಂಭೀರ

Chitradurga: ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು; ಇಬ್ಬರು ಸ್ಥಳದಲ್ಲೇ ಮೃತ್ಯು, ಮೂವರು ಗಂಭೀರ

Mudigere: ರಾಣಿ ಝರಿಯ ಕೆಸರುಮಯ ರಸ್ತೆಯಲ್ಲಿ ಬೈಕ್ ರೈಡರ್ ಹುಚ್ಚಾಟ..

Mudigere: ರಾಣಿ ಝರಿಯ ಕೆಸರುಮಯ ರಸ್ತೆಯಲ್ಲಿ ಬೈಕ್ ರೈಡರ್ ಗಳ ಹುಚ್ಚಾಟ..

SSLC-Students

SSLC Exams: ಎಸೆಸೆಲ್ಸಿ ಮಕ್ಕಳ ಮನೆ ಮನೆಗೆ ಬರ್ತಾರೆ ಶಿಕ್ಷಕರು!

KUPMA

Pre University Exam: ಪಿಯುಸಿ 3 ಪರೀಕ್ಷೆಗೆ “ಕುಪ್ಮ” ಆಕ್ಷೇಪ; ಕೈಬಿಡಲು ಆಗ್ರಹ

Nagendra

Valimiki Nigama Scam: ನಂಗೇನೂ ಗೊತ್ತಿಲ್ಲ: ನಾಗೇಂದ್ರ ಬಾಯಿಪಾಠಕ್ಕೆ ಇ.ಡಿ. ಸುಸ್ತು!

MUST WATCH

udayavani youtube

ಬೆಂಗಳೂರಿನಲ್ಲೊಂದು ಟ್ರಡಿಶನಲ್ ಮುಳಬಾಗಿಲು ದೋಸೆ

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

ಹೊಸ ಸೇರ್ಪಡೆ

4-health

Rhinoplasty: ರಿನೊಪ್ಲಾಸ್ಟಿ

Chitradurga: ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು; ಇಬ್ಬರು ಸ್ಥಳದಲ್ಲೇ ಮೃತ್ಯು, ಮೂವರು ಗಂಭೀರ

Chitradurga: ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು; ಇಬ್ಬರು ಸ್ಥಳದಲ್ಲೇ ಮೃತ್ಯು, ಮೂವರು ಗಂಭೀರ

ಬಿಹಾರದಲ್ಲೊಂದು ಅಮಾನುಷ ಕೃತ್ಯ… 12 ವರ್ಷದ ಬಾಲಕನನ್ನು ರೈಲು ಹಳಿಗೆ ಕಟ್ಟಿಹಾಕಿ ಥಳಿತ

ಬಿಹಾರದಲ್ಲೊಂದು ಅಮಾನುಷ ಕೃತ್ಯ… 12 ವರ್ಷದ ಬಾಲಕನನ್ನು ರೈಲು ಹಳಿಗೆ ಕಟ್ಟಿಹಾಕಿ ಥಳಿತ

3-udupi

Udupi: ಬೆಳ್ಳಂಬೆಳಗ್ಗೆ ಮನೆಯಲ್ಲಿ ಅಗ್ನಿ ದುರಂತ: ಬಾರ್ ಮಾಲೀಕ ಮೃತ್ಯು, ಪತ್ನಿ ಗಂಭೀರ  

Mudigere: ರಾಣಿ ಝರಿಯ ಕೆಸರುಮಯ ರಸ್ತೆಯಲ್ಲಿ ಬೈಕ್ ರೈಡರ್ ಹುಚ್ಚಾಟ..

Mudigere: ರಾಣಿ ಝರಿಯ ಕೆಸರುಮಯ ರಸ್ತೆಯಲ್ಲಿ ಬೈಕ್ ರೈಡರ್ ಗಳ ಹುಚ್ಚಾಟ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.