Renukaswamy Case; ದರ್ಶನ್‌ ಗ್ಯಾಂಗ್‌ ವಿರುದ್ಧ 120ಕ್ಕೂ ಹೆಚ್ಚು ಸಾಕ್ಷಿ

ಹಲ್ಲೆ ವಿಡಿಯೋ ಚಿತ್ರೀಕರಿಸಿದ ಮೂವರ ವಿಚಾರಣೆ;  28 ಕಡೆ ಪೊಲೀಸರ ಮಹಜರು

Team Udayavani, Jun 22, 2024, 7:05 AM IST

Renukaswamy Case; ದರ್ಶನ್‌ ಗ್ಯಾಂಗ್‌ ವಿರುದ್ಧ 120ಕ್ಕೂ ಹೆಚ್ಚು ಸಾಕ್ಷಿ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್‌ ಆ್ಯಂಡ್‌ ಟೀಂ ವಿರುದ್ಧ ತನಿಖಾಧಿಕಾರಿಗಳು ಬರೋಬ್ಬರಿ 120ಕ್ಕೂ ಹೆಚ್ಚಿನ ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಗಳು ಧರಿಸಿದ್ದ ಬಟ್ಟೆ, ಶೂ, ಚಪ್ಪಲಿ, ಆರೋಪಿಗಳ ಮೊಬೈಲ್‌ಗ‌ಳು, ಪಟ್ಟಣಗೆರೆ ಶೆಡ್‌ನ‌ಲ್ಲಿ ಹಲ್ಲೆಗೆ ಬಳಸಿದ್ದ ಲಾಠಿ, ಮರದ ರಿಪ್‌ ಪೀಸ್‌, ತುಳಿದ ಶೂಗಳು, ಆರೋಪಿಗಳು ತಂಗಿದ್ದ ಹೋಟೆಲ್‌ ಲೆಡ್ಜರ್‌ ಬುಕ್‌ನಲ್ಲಿ ಹೆಸರು ನಮೂದಾಗಿರುವುದು, ಸಿಸಿ ಕೆಮರಾ ರೆಕಾರ್ಡ್‌, ಕೃತ್ಯ ನಡೆದ ವೇಳೆ ರೇಣುಕಾಸ್ವಾಮಿ ಕರೆ ತಂದಿರುವ ಕಾರು, ಶವ ಎಸೆಯಲು ಬಳಸಿರುವ ಕಾರು, ದರ್ಶನ್‌ನಿಂದ ಆರೋಪಿಗಳು ಪಡೆದುಕೊಂಡಿದ್ದ ಹಣ, ಪ್ರಕರಣದಲ್ಲಿ 28 ಕಡೆ ಮಹಜರು ಮಾಡಿರುವುದು, ರೇಣುಕಾಸ್ವಾಮಿ ಕರೆತಂದು ಹಲ್ಲೆ ಕೃತ್ಯ ನಡೆಸಿದ ಪಟ್ಟಣಗೆರೆ ಶೆಡ್‌, ಶವ ಎಸೆದ ಆರೋಪಿಗಳು ಆರ್‌.ಆರ್‌.ನಗರದ ಹೊಟೇಲ್ ತಂಗಿರುವುದು ಸೇರಿದಂತೆ 120ಕ್ಕೂ ಹೆಚ್ಚಿನ ಸಾಕ್ಷ್ಯಗಳು ಪೊಲೀಸರ ಕೈ ಸೇರಿದೆ ಎಂದು ತಿಳಿದು ಬಂದಿದೆ.

ಮೂವರ ವಿಚಾರಣೆ
ರೇಣುಕಾಸ್ವಾಮಿಗೆ ಹಲ್ಲೆ ನಡೆಸಿದಾಗ ಅದನ್ನು ಮೊಬೈಲ್‌ನಲ್ಲಿ ವೀಡಿಯೋ ಮಾಡಿಕೊಂಡಿದ್ದಾರೆ ಎನ್ನಲಾದ ಮೂವರನ್ನು ವಿಚಾರಣೆ ನಡೆಸಲಾಗಿದೆ.

ಹಲ್ಲೆ ವೀಡಿಯೋವನ್ನು ಬೇರೆಯವರಿಗೂ ಕಳುಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಮೊಬೈಲ್‌ ಪರಿಶೀಲನೆ ವೇಳೆ ವೀಡಿಯೋ ಡಿಲೀಟ್‌ ಮಾಡಿರುವುದು ಕಂಡು ಬಂದಿದೆ ಎನ್ನಲಾಗಿದೆ. ಆದರೆ ಇವರ ವಿರುದ್ಧ ಸೂಕ್ತ ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ.

ಆರೋಪಿ ಮೊಬೈಲ್‌ ಬಚ್ಚಿಟ್ಟ ದೀಪಕ್‌
ಪೊಲೀಸರಿಗೆ ಶರಣಾಗಲು ಆರಂಭದಲ್ಲಿ ಕಾರ್ತಿಕ್‌ ಅಲಿಯಾಸ್‌ ಕಪ್ಪೆ ನಿರಾಕರಿಸಿದ್ದ. ಈ ಕಾರಣಕ್ಕೆ ಫೋನ್‌ ಕಸಿದಿದ್ದ ದೀಪಕ್‌, ಆ ಮೊಬೈಲ್‌ ಅನ್ನು ಪಟ್ಟಣಗೆರೆ ಶೆಡ್‌ನ‌ಲ್ಲಿ ಬಚ್ಚಿಟ್ಟಿದ್ದ. ಆರೋಪಿ ದೀಪಕ್‌ನ ವಿಚಾರಣೆ ವೇಳೆ ಈ ಸಂಗತಿ ಹೊರ ಬಿದ್ದಿದೆ. ಇದೀಗ ಶೆಡ್‌ಗೆ ಹೋಗಿ ಮೊಬೈಲ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಾಗೇಶ್‌ ವಕಾಲತ್ತು?
ನಟ ದರ್ಶನ್‌ ಪರ ಹಿರಿಯ ವಕೀಲ ಸಿ.ವಿ. ನಾಗೇಶ್‌ ವಾದ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಈಗಾಗಲೇ ದರ್ಶನ್‌ ಆಪ್ತರು ಸಿ.ವಿ. ನಾಗೇಶ್‌ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಇದೊಂದು ಹೈ ಪ್ರೊಫೈಲ್‌ ಪ್ರಕರಣ ಆಗಿರುವುದರಿಂದ ಸಿ.ವಿ. ನಾಗೇಶ್‌ ಅವರೇ ವಾದ ನಡೆಸುವುದು ಸೂಕ್ತವೆಂದು ದರ್ಶನ್‌ ಕುಟುಂಬ ಹಾಗೂ ಅವರ ಆಪ್ತರು ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಟಾಪ್ ನ್ಯೂಸ್

Siruguppa ಕಬ್ಬಿಣದ ಸರಳಿನಿಂದ ಹೊಡೆದ ಪೆಟ್ಟಿಗೆ ಬಾಲಕ ಸಾವು

Siruguppa ಕಬ್ಬಿಣದ ಸರಳಿನಿಂದ ಹೊಡೆದ ಪೆಟ್ಟಿಗೆ ಬಾಲಕ ಸಾವು

Yadagiri; ಅಪಾಯ ಮಟ್ಟಕ್ಕೆ ತಲುಪಿದ ಕೃಷ್ಣಾ ಮತ್ತು ಭೀಮಾ ನದಿ ನೀರು; ಹೈಅಲರ್ಟ್ ಘೋಷಣೆ

Yadagiri; ಅಪಾಯ ಮಟ್ಟಕ್ಕೆ ತಲುಪಿದ ಕೃಷ್ಣಾ ಮತ್ತು ಭೀಮಾ ನದಿ ನೀರು; ಹೈಅಲರ್ಟ್ ಘೋಷಣೆ

Arecanut ಕಳ್ಳತನ ಪ್ರಕರಣ: ಆರೋಪಿಗಳ ಬಂಧನ; ವಾಹನ ಸಹಿತ ಸೊತ್ತು ಪೊಲೀಸರ ವಶಕ್ಕೆ

Arecanut ಕಳ್ಳತನ ಪ್ರಕರಣ: ಆರೋಪಿಗಳ ಬಂಧನ; ವಾಹನ ಸಹಿತ ಸೊತ್ತು ಪೊಲೀಸರ ವಶಕ್ಕೆ

Thirthahalli: ದೇವಸ್ಥಾನದ ಪೂಜಾ ಸಾಮಗ್ರಿ ಕದ್ದಿದ್ದ ಕಳ್ಳರ ಬಂಧನ!

Thirthahalli: ದೇವಸ್ಥಾನದ ಪೂಜಾ ಸಾಮಗ್ರಿ ಕದ್ದಿದ್ದ ಕಳ್ಳರ ಬಂಧನ!

Hosanagara; ಕೃಷಿ ಜಮೀನಿಗೆ ನುಗ್ಗಿದ ಮಳೆ ನೀರು: ಕಂಗಾಲಾದ ರೈತ

Hosanagara; ಕೃಷಿ ಜಮೀನಿಗೆ ನುಗ್ಗಿದ ಮಳೆ ನೀರು: ಕಂಗಾಲಾದ ರೈತ

Belagavi: ಭಾರಿ ಮಳೆ ಹಿನ್ನೆಲೆ ಮತ್ತೆ ನಾಲ್ಕು ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

Belagavi: ಭಾರಿ ಮಳೆ ಹಿನ್ನೆಲೆ ಮತ್ತೆ ನಾಲ್ಕು ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

swimmer dhinidhi

Paris Olympics; ನೀರಿಗಿಳಿಯಲು ಹೆದರುತ್ತಿದ್ದ ಧಿನಿಧಿ ಈಗ ಒಲಿಂಪಿಕ್ಸ್‌ನಲ್ಲಿ ಈಜುಪಟು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thirthahalli: ದೇವಸ್ಥಾನದ ಪೂಜಾ ಸಾಮಗ್ರಿ ಕದ್ದಿದ್ದ ಕಳ್ಳರ ಬಂಧನ!

Thirthahalli: ದೇವಸ್ಥಾನದ ಪೂಜಾ ಸಾಮಗ್ರಿ ಕದ್ದಿದ್ದ ಕಳ್ಳರ ಬಂಧನ!

Renukaswamy Case: ದರ್ಶನ್‌ಗೆ ಜೈಲಿನಲ್ಲಿ ಮನೆಯೂಟ, ಹಾಸಿಗೆ ಸೌಲಭ್ಯ ನೀಡಲು ಕೋರ್ಟ್‌ ನಕಾರ

Renukaswamy Case: ದರ್ಶನ್‌ಗೆ ಜೈಲಿನಲ್ಲಿ ಮನೆಯೂಟ, ಹಾಸಿಗೆ ಸೌಲಭ್ಯ ನೀಡಲು ಕೋರ್ಟ್‌ ನಕಾರ

Shirur Landslide: ಶಿರೂರಿನಲ್ಲಿ ಕಾರ್ಯಾಚರಣೆ ಆರಂಭಿಸಿದ ಹೈಟೆಕ್ ಡ್ರೋನ್…

Shirur Landslide: ಕಾರ್ಯಾಚರಣೆ ಆರಂಭಿಸಿದ ಹೈಟೆಕ್ ಡ್ರೋನ್… ಇದರ ವಿಶೇಷತೆ ಏನು ಗೊತ್ತಾ?

Shirur landslide: 2023ರಲ್ಲಿ ಶಿರೂರು ಹೆದ್ದಾರಿಯಲ್ಲಿನ ಚಹಾದಂಗಡಿ ಹೀಗಿತ್ತು..

Shirur landslide: 2023ರಲ್ಲಿ ಶಿರೂರು ಹೆದ್ದಾರಿಯಲ್ಲಿನ ಚಹಾದಂಗಡಿ ಹೀಗಿತ್ತು..

Thirthahalli: ಗಾಳಿ ಮಳೆಯ ಅಬ್ಬರಕ್ಕೆ ವಿದ್ಯುತ್ ಕಂಬ, ಮರಗಳು ಧರೆಗೆ, ಹಲವೆಡೆ ಹಾನಿ

Thirthahalli: ಗಾಳಿ ಮಳೆಯ ಅಬ್ಬರಕ್ಕೆ ವಿದ್ಯುತ್ ಕಂಬ, ಮರಗಳು ಧರೆಗೆ, ಹಲವೆಡೆ ಹಾನಿ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

ಬೆಳಗಾವಿ: ನೀರಿನ ಗುಣಮಟ್ಟ ಪರೀಕ್ಷಿಸಿ ವರದಿ ನೀಡಿ- ರಾಹುಲ್‌ ಶಿಂಧೆ

ಬೆಳಗಾವಿ: ನೀರಿನ ಗುಣಮಟ್ಟ ಪರೀಕ್ಷಿಸಿ ವರದಿ ನೀಡಿ- ರಾಹುಲ್‌ ಶಿಂಧೆ

1-bidar

Education; ‘ಶಿಕ್ಷಣ ಕಾಶಿ’ಯಾಗಿ ಬದಲಾಗುತ್ತಿದೆ ”ಧರಿನಾಡು”

Mangaluru: ಸೊಳ್ಳೆ ಸೆರೆ ಹಿಡಿಯಲು ಬಂದಿದೆ ಯಂತ್ರ ! 20 ವರ್ಷಗಳ ಸಂಶೋಧನೆ ಫಲ…

Mangaluru: ಸೊಳ್ಳೆ ಸೆರೆ ಹಿಡಿಯಲು ಬಂದಿದೆ ಯಂತ್ರ ! 20 ವರ್ಷಗಳ ಸಂಶೋಧನೆ ಫಲ…

Siruguppa ಕಬ್ಬಿಣದ ಸರಳಿನಿಂದ ಹೊಡೆದ ಪೆಟ್ಟಿಗೆ ಬಾಲಕ ಸಾವು

Siruguppa ಕಬ್ಬಿಣದ ಸರಳಿನಿಂದ ಹೊಡೆದ ಪೆಟ್ಟಿಗೆ ಬಾಲಕ ಸಾವು

Yadagiri; ಅಪಾಯ ಮಟ್ಟಕ್ಕೆ ತಲುಪಿದ ಕೃಷ್ಣಾ ಮತ್ತು ಭೀಮಾ ನದಿ ನೀರು; ಹೈಅಲರ್ಟ್ ಘೋಷಣೆ

Yadagiri; ಅಪಾಯ ಮಟ್ಟಕ್ಕೆ ತಲುಪಿದ ಕೃಷ್ಣಾ ಮತ್ತು ಭೀಮಾ ನದಿ ನೀರು; ಹೈಅಲರ್ಟ್ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.