ಸೀಟ್‌ ಬ್ಲಾಕಿಂಗ್‌ಗೆ ಕಡಿವಾಣ: ಬಾಕಿ ಸೀಟು ಮಾಹಿತಿ ಕಡ್ಡಾಯ; 5 ಪಟ್ಟು ದಂಡಕ್ಕೆ ನಿರ್ಧಾರ


Team Udayavani, Oct 7, 2020, 6:52 AM IST

ಸೀಟ್‌ ಬ್ಲಾಕಿಂಗ್‌ಗೆ ಕಡಿವಾಣ: ಬಾಕಿ ಸೀಟು ಮಾಹಿತಿ ಕಡ್ಡಾಯ; 5 ಪಟ್ಟು ದಂಡಕ್ಕೆ ನಿರ್ಧಾರ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಬೆಂಗಳೂರು: ವೃತ್ತಿಪರ ಕಾಲೇಜು ಅಥವಾ ಶಿಕ್ಷಣ ಸಂಸ್ಥೆಗಳು ನಡೆಸುತ್ತಿದ್ದ ಎಂಜಿನಿಯರಿಂಗ್‌ ಸೀಟ್‌ ಬ್ಲಾಕಿಂಗ್‌ ದಂಧೆಗೆ ಕಡಿವಾಣ ಹಾಕುವುದಕ್ಕಾಗಿ ರಾಜ್ಯ ಸರಕಾರವು ದುಬಾರಿ ದಂಡ ಅಸ್ತ್ರ ಪ್ರಯೋಗಕ್ಕೆ ನಿರ್ಧರಿಸಿದೆ.

ವಿದ್ಯಾರ್ಥಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಕಾಲೇಜಿನಲ್ಲಿ ಸೀಟು ಪಡೆದು, ನಿಗದಿತ ಅವಧಿ ಮುಗಿದ ಅನಂತರ ಆ ಕಾಲೇಜಿಗೆ ಸೇರದೆ, ಸೀಟನ್ನೂ ವಾಪಸ್‌ ಮಾಡದೆ ಇದ್ದರೆ ಆತನಿಗೆ ಶುಲ್ಕದ ಐದು ಪಟ್ಟನ್ನು ದಂಡವಾಗಿ ವಿಧಿಸಲು ನಿರ್ಧರಿಸಲಾಗಿದೆ.

ಇದಕ್ಕಾಗಿ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ (ಸರಕಾರಿ ಸೀಟುಗಳ ದಾಖಲಾತಿ) ಕಾಯ್ದೆ- 2020ಕ್ಕೆ ತಿದ್ದುಪಡಿ ತರಲಾಗಿದೆ.

ಇದು ಕೇವಲ ವಿದ್ಯಾರ್ಥಿಗಷ್ಟೇ ಅಲ್ಲ, ಕಾಲೇಜಿಗೂ ಅನ್ವಯವಾಗುತ್ತದೆ. ಸೂಕ್ತ ಸಮಯದಲ್ಲಿ ಸೀಟು ಭರ್ತಿಯಾಗದೆ ಇರುವ ಮಾಹಿತಿ ನೀಡದೆ, ಅಂತಿಮವಾಗಿ ಸೀಟು ಭರ್ತಿಯಾಗದೆ ಉಳಿದಲ್ಲಿ ಸಂಬಂಧಪಟ್ಟ ಎಂಜಿನಿಯರಿಂಗ್‌ ಕಾಲೇಜು ಅಥವಾ ಶಿಕ್ಷಣ ಸಂಸ್ಥೆಯು, ವಿದ್ಯಾರ್ಥಿಗೆ ನಿಗದಿ ಮಾಡಿರುವ ಶುಲ್ಕದ 5 ಪಟ್ಟು ದಂಡ ಪಾವತಿಸಬೇಕಾಗುತ್ತದೆ ಎಂದು ಕಾಯ್ದೆಯ ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.

ಅನ್ಯಾಯ ತಡೆಯಲು ಈ ಕ್ರಮ
ಅನೇಕ ಕಾಲೇಜುಗಳು ಸೀಟು ಭರ್ತಿಯಾದ ಮಾಹಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲಿಸುತ್ತಿರಲಿಲ್ಲ. ಇದರಿಂದ ಬಡ ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಅನ್ಯಾಯವಾಗುತ್ತಿತ್ತು.

ಅನಂತರ ಆ ಸೀಟುಗಳನ್ನು ಶಿಕ್ಷಣ ಸಂಸ್ಥೆಗಳು ಮ್ಯಾನೇಜ್‌ಮೆಂಟ್‌ ಸೀಟುಗಳಾಗಿ ಪರಿವರ್ತಿಸಿಕೊಂಡು ದುಬಾರಿ ಶುಲ್ಕ ಪಡೆದು ಹೊಸ ದಾಖಲಾತಿ ಮಾಡುವ ಸಾಧ್ಯತೆಗಳು ಹೆಚ್ಚಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸರಕಾರ ಈ ಕಾಯ್ದೆಯನ್ನು ಜಾರಿಗೆ ತಂದಿದ್ದು, ರಾಜ್ಯ ಪತ್ರ ಕೂಡ ಹೊರಡಿಸಿದೆ.

ಟಾಪ್ ನ್ಯೂಸ್

ಒಮಿಕ್ರಾನ್‌ ಸಾವು ತರದು, ಆದರೂ ಎಚ್ಚರವಿರಲಿ!

ಒಮಿಕ್ರಾನ್‌ ಸಾವು ತರದು, ಆದರೂ ಎಚ್ಚರವಿರಲಿ!

Untitled-2

ಉತ್ತರದಲ್ಲಿ ವಿಕಾಸ್‌ ಕಿ ಗಂಗಾ

Untitled-2

ಅಜಾತಶತ್ರುವಿನ  ಅಪರೂಪದ ಸಿನೆಯಾನ

ಕರಾವಳಿ ಮಣ್ಣಿನಲ್ಲಿ ಪೊಟಾಶಿಯಂ ಕೊರತೆ

ಕರಾವಳಿ ಮಣ್ಣಿನಲ್ಲಿ ಪೊಟಾಶಿಯಂ ಕೊರತೆ

Untitled-1

ಎರಡು ವಾರಗಳಲ್ಲಿ ಒಮಿಕ್ರಾನ್‌ ಚಿತ್ರಣ

1959ರ ಗಣಿತ ಸಮಸ್ಯೆ ಪರಿಹರಿಸಿದ ಪ್ರೊ. ನಿಖಿಲ್‌ಗೆ ಪ್ರತಿಷ್ಠಿತ ಪ್ರಶಸ್ತಿ

1959ರ ಗಣಿತ ಸಮಸ್ಯೆ ಪರಿಹರಿಸಿದ ಪ್ರೊ. ನಿಖಿಲ್‌ಗೆ ಪ್ರತಿಷ್ಠಿತ ಪ್ರಶಸ್ತಿ

ಅಮೆರಿಕದಲ್ಲಿ ಮೂವರು ಭಾರತೀಯರ ಬಂಧನ

ಅಮೆರಿಕದಲ್ಲಿ ಮೂವರು ಭಾರತೀಯರ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ವೈರಸ್‌ ಪತ್ತೆ ಹಿನ್ನೆಲೆ: ಸರಕಾರ ಏನೂ ಮಾಡುತ್ತಿಲ್ಲ ಎನ್ನಲಾಗದು

ಹೊಸ ವೈರಸ್‌ ಪತ್ತೆ ಹಿನ್ನೆಲೆ: ಸರಕಾರ ಏನೂ ಮಾಡುತ್ತಿಲ್ಲ ಎನ್ನಲಾಗದು

ಪತಿ-ಪತ್ನಿ ಪ್ರಕರಣಗಳಿಗೆ ವರ್ಗಾವಣೆ ಸಂಕಷ್ಟ

ಪತಿ-ಪತ್ನಿ ಪ್ರಕರಣಗಳಿಗೆ ವರ್ಗಾವಣೆ ಸಂಕಷ್ಟ

ನನ್ನನ್ನು ಸೋಲಿಸಿದವರಿಗೆ ಗರ್ವ ಭಂಗ ಮಾಡಿ : ಚುನಾವಣಾ ಪ್ರಚಾರದಲ್ಲಿ ದೇವೇಗೌಡ ಕರೆ

ನನ್ನನ್ನು ಸೋಲಿಸಿದವರ ಗರ್ವ ಭಂಗ ಮಾಡಿ : ಚುನಾವಣಾ ಪ್ರಚಾರದಲ್ಲಿ ದೇವೇಗೌಡ ಕರೆ

ಬಿಜೆಪಿ, ಜೆಡಿಎಸ್ ವಿರುದ್ದ ಸಿದ್ದು ಹಿಗ್ಗಾಮುಗ್ಗಾ ವಾಗ್ದಾಳಿ

ಎಡಿಯೂರಿನಲ್ಲಿ ಸಿದ್ದು ಚುನಾವಣಾ ಪ್ರಚಾರ ಸಭೆ : ಬಿಜೆಪಿ, ಜೆಡಿಎಸ್ ವಿರುದ್ದ ವಾಗ್ದಾಳಿ

3 ವರ್ಷದ ಹಿಂದೆ ಜೀವಾವಧಿ ಶಿಕ್ಷೆಗೆ ಗುರಿಯಾಗಿ ತಪ್ಪಿಸಿಕೊಂಡಿದ್ದ ಅಪರಾಧಿ ಸೆರೆ

3 ವರ್ಷದ ಹಿಂದೆ ಜೀವಾವಧಿ ಶಿಕ್ಷೆಗೆ ಗುರಿಯಾಗಿ ತಪ್ಪಿಸಿಕೊಂಡಿದ್ದ ಅಪರಾಧಿ ಸೆರೆ

MUST WATCH

udayavani youtube

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

udayavani youtube

ನಮ್ಮ ನೌಕಾಪಡೆ ಎಲ್ಲದಕ್ಕೂ ಸನ್ನದ್ಧ !

udayavani youtube

ಸರ್ಕಾರ ಹೇಗೆಲ್ಲಾ ರೈತರ ಬೆಂಬಲಕ್ಕೆ ನಿಂತಿದೆ ?

udayavani youtube

ಬಂಟ್ವಾಳ : ಬೇಟೆಗಾಗಿ ಬಂದು ಹೆದರಿ ಓಡಿದ ಚಿರತೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಚಿಕ್ಕಮಗಳೂರು : ಕಾಫಿ ತೋಟದೊಳಗೆ ನುಗ್ಗಿದ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಾವಲು ವಾಹನ

ಹೊಸ ಸೇರ್ಪಡೆ

ಹೊಸ ವೈರಸ್‌ ಪತ್ತೆ ಹಿನ್ನೆಲೆ: ಸರಕಾರ ಏನೂ ಮಾಡುತ್ತಿಲ್ಲ ಎನ್ನಲಾಗದು

ಹೊಸ ವೈರಸ್‌ ಪತ್ತೆ ಹಿನ್ನೆಲೆ: ಸರಕಾರ ಏನೂ ಮಾಡುತ್ತಿಲ್ಲ ಎನ್ನಲಾಗದು

ಒಮಿಕ್ರಾನ್‌ ಸಾವು ತರದು, ಆದರೂ ಎಚ್ಚರವಿರಲಿ!

ಒಮಿಕ್ರಾನ್‌ ಸಾವು ತರದು, ಆದರೂ ಎಚ್ಚರವಿರಲಿ!

ಒಮಿಕ್ರಾನ್‌ ಭೀತಿ: ವಿದೇಶದಿಂದ ಹಲವರ ಪ್ರಯಾಣ ರದ್ದು 

ಒಮಿಕ್ರಾನ್‌ ಭೀತಿ: ವಿದೇಶದಿಂದ ಹಲವರ ಪ್ರಯಾಣ ರದ್ದು 

ಶಿಕ್ಷಣ ಸಂಸ್ಥೆಗಳಲ್ಲಿ ರ್‍ಯಾಂಡಮ್‌ ಟೆಸ್ಟ್‌ 

ಶಿಕ್ಷಣ ಸಂಸ್ಥೆಗಳಲ್ಲಿ ರ್‍ಯಾಂಡಮ್‌ ಟೆಸ್ಟ್‌ 

Untitled-2

ಉತ್ತರದಲ್ಲಿ ವಿಕಾಸ್‌ ಕಿ ಗಂಗಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.