ನಾರಾಯಣಗೌಡರಿಗೆ 10 ಕೋಟಿ ಸಂದಾಯ: ಚಂದ್ರಶೇಖರ್‌

Team Udayavani, May 15, 2019, 3:00 AM IST

ಕೆ.ಆರ್‌.ಪೇಟೆ: “ಆಪರೇಷನ್‌ ಕಮಲ’ಕ್ಕೆ ಒಳಗಾಗಿರುವ ಶಾಸಕ ಕೆ.ಸಿ.ನಾರಾಯಣಗೌಡರು ಬಿಜೆಪಿಯವರಿಂದ ಈಗಾಗಲೇ ಹತ್ತು ಕೋಟಿ ರೂ.ಪಡೆದುಕೊಂಡಿದ್ದು, ಬಾಕಿ ಹಣಕ್ಕಾಗಿ ಕಾಯುತ್ತಿದ್ದಾರೆ. ಬಾಕಿ ಹಣ ಸಿಕ್ಕ ತಕ್ಷಣವೇ ಮುಂಬೈಗೆ ಹಾರಿ ಹೋಗಲಿದ್ದಾರೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌ ಹೊಸ ಬಾಂಬ್‌ ಸಿಡಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ನಾರಾಯಣಗೌಡರನ್ನು ಜೆಡಿಎಸ್‌ ಪಕ್ಷದ ವರಿಷ್ಠರು ಈಗಾಗಲೇ ಕೈಬಿಟ್ಟಿದ್ದಾರೆ. ಈಗ ನಡೆಯುತ್ತಿರುವ ಪುರಸಭಾ ಚುನಾವಣೆ ಉಸ್ತುವಾರಿಯನ್ನು ಶಾಸಕರಿಗೆ ನೀಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆದ ಕಾರಣ ಲೋಕಸಭಾ ಚುನಾವಣೆ ಫ‌ಲಿತಾಂಶ ಬಂದ ತಕ್ಷಣ ನಾರಾಯಣಗೌಡ ಮಾಯವಾದರೆ ಅಚ್ಚರಿಯಿಲ್ಲ. ಅವರು ಬಿಜೆಪಿಯವರಿಂದ ಈಗಾಗಲೇ ಮುಂಗಡವಾಗಿ 10 ಕೋಟಿ ರೂ.ಪಡೆದುಕೊಂಡಿದ್ದಾರೆ. ಅದರಿಂದಲೇ ಅಧಿವೇಶನದ ಸಮಯದಲ್ಲಿ 15 ದಿನ ಮುಂಬೈನಲ್ಲೇ ಉಳಿದುಕೊಂಡಿದ್ದರು.

ಬಿಜೆಪಿಯವರು ಕೊಟ್ಟ ಮಾತಿನಂತೆ ಬಾಕಿ ಹಣ ಕೈ ಸೇರಿದ ತಕ್ಷಣವೇ ಅವರು ಕ್ಷೇತ್ರ ಬಿಡಲಿದ್ದಾರೆ. ಲೋಕಸಭಾ ಚುನಾವಣಾ ಫ‌ಲಿತಾಂಶದ ಬಳಿಕ ಬಿಜೆಪಿಯವರು ಅವರನ್ನು ಎಲ್ಲಿಗೆ ಎತ್ತಿಕೊಂಡು ಹೋಗುವರೋ ಗೊತ್ತಿಲ್ಲ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ