ಉಪಸಮರಕ್ಕೆ ಶಿವರಾಮ ಹೆಬ್ಬಾರ ತಾಲೀಮು

Team Udayavani, Aug 5, 2019, 3:05 AM IST

ಶಿರಸಿ: ಅನರ್ಹ ಶಾಸಕ ಶಿವರಾಮ ಹೆಬ್ಬಾರ ಅವರು, ಯಲ್ಲಾಪುರ, ಮುಂಡಗೋಡ, ಶಿರಸಿಯ ಪೂರ್ವ ಭಾಗದ ತಮ್ಮ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದಾರೆ. ಪಕ್ಷದ ಹಿತೈಷಿಗಳು, ಪ್ರಮುಖರು, ಗೆಳೆಯರ ಜತೆ ಮುಂದಿನ ನಡೆ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಉಪ ಚುನಾವಣೆಗೆ ತಾಲೀಮು ಆರಂಭಿಸಿದ್ದಾರೆ.

ಮೂರ್‍ನಾಲ್ಕು ದಿನಗಳಿಂದ ಬನವಾಸಿ, ಯಲ್ಲಾಪುರ, ಮುಂಡಗೋಡ ಭಾಗದಲ್ಲಿ ಸಭೆ ನಡೆಸುತ್ತಿದ್ದು, ಆರ್‌. ವಿ.ದೇಶಪಾಂಡೆ, ಸಮ್ಮಿಶ್ರ ಸರ್ಕಾರದ ಅಸಹಕಾರದ ಬಗ್ಗೆ ಮಾತನಾಡುತ್ತಿದ್ದಾರೆ. ಹಲವರು ನೀವು ಮತ್ತೆ ಸ್ಪ ರ್ಧಿಸಿ, ಜೊತೆಗೆ ಇರುತ್ತೇವೆಂಬ ಮಾತುಗಳನ್ನು ಆಡುತ್ತಿದ್ದಾರೆ. ಇನ್ನು ಕೆಲವರು ನಿರ್ಲಿಪ್ತರಾಗುತ್ತಿದ್ದಾರೆ. ಹೆಬ್ಬಾರ ಅವರನ್ನು ಪಕ್ಷದಿಂದ ಹೊರ ಹಾಕಿದ್ದಕ್ಕೆ ಕೆಲವರು ಗ್ರಾಮೀಣ ಘಟಕದಲ್ಲಿ ರಾಜೀನಾಮೆ ನೀಡುತ್ತಿದ್ದಾರೆ. ಬನವಾಸಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದ್ಯಾಮಣ್ಣ ದೊಡ್ಮನಿ ವೈಯಕ್ತಿಕ ಕಾರಣ ಮುಂದಿಟ್ಟು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಮಧ್ಯೆ, ಹೆಬ್ಬಾರ ತಾವು ಇನ್ನೂ ಯಾವ ಪಕ್ಷಕ್ಕೆ ಸೇರುತ್ತೇನೆಂದು ಖಚಿತಪಡಿಸಿಲ್ಲ. ಬಹುಶಃ ನ್ಯಾಯಾಲಯದ ತೀರ್ಮಾನ ಬಂದ ಬಳಿಕವಷ್ಟೇ ಈ ಕುರಿತು ಅಧಿಕೃತ ತೀರ್ಮಾನ ಪ್ರಕಟಿಸುವ ಸಾಧ್ಯತೆಯಿದೆ. ಕೆಲ ಜನಪ್ರತಿನಿಧಿ ಗಳು ಹೆಬ್ಬಾರ ಜತೆ ನೇರವಾಗಿ ಗುರುತಿಸಿಕೊಂಡರೆ, ಇನ್ನು ಕೆಲವರು ವೈಯಕ್ತಿಕವಾಗಿ ಬೆಂಬಲ ನೀಡುತ್ತಿದ್ದಾರೆ. ಕಾಂಗ್ರೆಸ್‌ ವಲಯದಲ್ಲಿ ಈ ಕ್ಷೇತ್ರದಲ್ಲಿ ಯಾರನ್ನು ನಂಬುವುದು ಎಂಬುದು ಸಮಸ್ಯೆಯಾದರೆ, ಹೆಬ್ಬಾರ ಅವರು ಹೊಸ ಪಡೆ ಕಟ್ಟಲು ಸಜ್ಜಾಗಿದ್ದಾರೆ.

ಕಾಂಗ್ರೆಸ್‌ ಕೂಡ ಹೋಗುವವರು ಹೋಗಲಿ, ನಂತರವೇ ಚುನಾವಣೆ ಸಿದ್ಧತೆ ಮಾಡಿಕೊಳ್ಳೋಣ. ಇಲ್ಲಿದ್ದೂ ಅಲ್ಲಿ ಕೆಲಸ ಮಾಡಿದರೆ ನಮಗೆ ಅಪಜಯ ಎಂಬ ತೀರ್ಮಾನಕ್ಕೆ ಬಂದಿದೆ. ಭೀಮಣ್ಣ ನಾಯ್ಕ, ದೀಪಕ್‌ ದೊಡೂರು, ಪ್ರಶಾಂತ ದೇಶಪಾಂಡೆ ಇವರಲ್ಲಿ ಯಾರು ಎಂದು ನೋಡುತ್ತಿದ್ದಾರೆ. ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ದೀಪಕ ದೊಡೂxರು ಇಬ್ಬರೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಶಿರಸಿಗೆ ಮತದಾನಕ್ಕೆ ಸ್ಥಳಾಂತರಗೊಂಡಿದ್ದರು. ಈಗ ಅಲ್ಲಿ ಜವಾಬ್ದಾರಿ ನೀಡಿದರೆ ಹೊರುವ ಇಂಗಿತ ಆಪೆ¤àಷ್ಟರಲ್ಲಿ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗೆ ಬಂದರೂ ಸುಲಭವಿಲ್ಲ: ಬಿಜೆಪಿಗೆ ಹೆಬ್ಬಾರ ಬರುವುದಕ್ಕೆ ಪೂರ್ಣ ಸಹಮತ, ಅಸಮ್ಮತಿ ಎರಡೂ ಇಲ್ಲ. ಬದಲಾಗಿ ಬರಲಿ, ಅವರು ನಮ್ಮ ಜಿಲ್ಲಾಧ್ಯಕ್ಷರಾಗಿದ್ದರು. ಆಗ ಹೋಗಿದ್ದೂ , ಈಗ ಬಂದಿದ್ದೂ ಸೈ ಎನ್ನುತ್ತಾರೆ. ಅವರು ಎಲ್ಲೇ ಹೋದರೂ ಬಿಜೆಪಿ ಕಲಿಸಿದ ಹಣೆಗೆ ಸಿಂಧೂರ ಇಡುವುದನ್ನು ಬಿಟ್ಟಿಲ್ಲ ಎಂದೂ ಸಮರ್ಥಿಸಿಕೊಳ್ಳುತ್ತಿದ್ದಾರೆ.

ಆದರೆ, ಹೆಬ್ಬಾರ ಬೆಂಬಲಿಗರಲ್ಲಿ ಅನ್ಯ ಸಮುದಾಯದವರಿಗೆ ಬಿಜೆಪಿಗೆ ಬಂದರೆ ನ್ಯಾಯ ಸಿಗದು ಎಂಬ ಆತಂಕ ಕೂಡ ಇದೆ. ಕಾಂಗ್ರೆಸ್‌ ತೊರೆದಿದ್ದ ಪ್ರಮೋದ ಹೆಗಡೆ, ಎಲ್‌.ಟಿ.ಪಾಟೀಲ ಅವರನ್ನೂ, ಕಳೆದ ಶಾಸನ ಸಭೆ ಚುನಾವಣೆಗೆ ಸ್ಪಧಿ ìಸಿದ್ದ ವಿ.ಎಸ್‌.ಪಾಟೀಲ ಅವರನ್ನು ಸಮಾಧಾನ ಮಾಡಿಕೊಳ್ಳುವುದೂ ಅನಿವಾರ್ಯ ಆಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ