ಬೆಂಗಳೂರಿನಲ್ಲಿ ಆಕ್ಸಿಜನ್, ಐಸಿಯು, ವೆಂಟಿಲೇಟರ್ ಬೆಡ್ ಸಮಸ್ಯೆಯಾಗಿದೆ: ಸುಧಾಕರ್
Team Udayavani, Apr 23, 2021, 10:15 AM IST
ಬೆಂಗಳೂರು: ನಗರದಲ್ಲಿ ಆಕ್ಸಿಜನ್, ಐಸಿಯು, ವೆಂಟಿಲೇಟರ್ ಬೆಡ್ ಸಮಸ್ಯೆ ಆಗುತ್ತಿದೆ. ಇನ್ನೂ ಒಂದು ವಾರದಲ್ಲಿ 2500 ಐಸಿಯು ಬೆಡ್ ಇರುವ ಮೆಕ್ ಶಿಪ್ಟ್ ಆಸ್ಪತ್ರೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಸ್ವಲ್ಪ ದಿನದಲ್ಲಿ 250 ಹಾಸಿಗೆಯುಳ್ಳ ಮೆಕ್ ಶಿಪ್ಟ್ ಆಸ್ಪತ್ರೆ ಆರಂಭ ಮಾಡುತ್ತೇವೆ. ಇದರಲ್ಲಿ 100 ಹಾಸಿಗೆ ವೆಂಟಿಲೇಟರ್ ಇರುತ್ತದೆ. 2000 ಹಾಸಿಗೆಯಲ್ಲಿ 800 ರಿಂದ 1000 ವೆಂಟಿಲೇಟರ್ ಹಾಸಿಗೆ ವ್ಯವಸ್ಥೆ ಮಾಡುತ್ತೇವೆ. ನಮಗೆ 50 ರಿಂದ 80 ವೆಂಟಿಲೇಟರ್ ಕೊರತೆ ಇದೆ ಅದನ್ನು ಹೆಚ್ಚಿಸಿ ಎಂದು ಸಿಎಂ ಹೇಳಿದ್ದಾರೆ ಎಂದರು.
ಇದನ್ನೂ ಓದಿ:ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಅಂತ್ಯಸಂಸ್ಕಾರ ಮಾಡಲು ಅವಕಾಶ ನೀಡಿ: ಕುಮಾರಸ್ವಾಮಿ ಸಲಹೆ
ಈ ವಾರದಲ್ಲಿ ವಿಕ್ಟೋರಿಯಾ ಆವರಣದಲ್ಲಿ 500 ಹಾಸಿಗೆ ಹೆಚ್ಚಿಸುತ್ತೇವೆ. ವಿದೇಶದಿಂದ 2 ಲಕ್ಷ ರೆಮಿಡಿಸಿವಿರ್ ವೈಯಲ್ ಖರೀದಿಸಲು ಕೇಂದ್ರ ಸರ್ಕಾರದ ಅನುಮತಿ ಕೇಳಿದ್ದೇವೆ, ಅನುಮತಿ ಕೊಟ್ಟರೆ ಏರ್ ಲಿಫ್ಟ್ ಮೂಲಕ ತರುತ್ತೇವೆ. ಎಲ್ಲಾ ಪ್ರಯತ್ನ ನಡೆಯುತ್ತಿದೆ ಎಂದರು.
ಲಂಡನ್, ಯುಕೆ ಯಲ್ಲಿ ಮನೆಯಲ್ಲೆ ಕುಳಿತು ಚಿಕಿತ್ಸೆ ಪಡೆದಿದ್ದಾರೆ. ನಮ್ಮಲ್ಲೂ ಟೆಲಿ ಮೆಡಿಸಿನ್ ನಿಂದ ಮನೆಯಲ್ಲೆ ಚಿಕಿತ್ಸೆ ಪಡೆಯಬಹುದು ಎಂದು ಸುಧಾಕರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾಗರಪುರದ ಕಚೇರಿ ಮೇಲೆ ಆರೆಸ್ಸೆಸ್ ಎಂದಾದರೂ ತ್ರಿವರ್ಣ ಧ್ವಜ ಹಾರಿಸಿದ್ದಾರೆಯೇ : ಸಿದ್ದು
ಮನೆ ಗೋಡೆ ಕುಸಿದು ಯುವಕ ಸಾವು : ಕೆಲ ದಿನದ ಹಿಂದಷ್ಟೇ ಹೆರಿಗೆಯಾಗಿದ್ದ ತಾಯಿ, ಮಗು ಪಾರು
ಗಾಳಿ ಮಳೆಯ ಅಬ್ಬರ : ಮೂಡಿಗೆರೆ, ಕಳಸ ತಾಲೂಕಿನ ಶಾಲೆಗಳಿಗೆ ರಜೆ
ಮಲೆನಾಡಿನಲ್ಲಿ ಮುಂದುವರೆದ ಮಳೆಯ ಅಬ್ಬರ : ಮನೆಯ ಮೇಲೆ ಮರ ಬಿದ್ದು ಇಬ್ಬರು ಸಾವು
ರಾಜ್ಯದಲ್ಲಿ ಹೆಚ್ಚುತ್ತಿದೆ ಹನಿಟ್ರ್ಯಾಪ್ ಹಾವಳಿ: ಉದ್ಯಮಿ,ರಾಜಕಾರಣಿಗಳೇ ಟಾರ್ಗೆಟ್
MUST WATCH
ಹೊಸ ಸೇರ್ಪಡೆ
ನಾಗರಪುರದ ಕಚೇರಿ ಮೇಲೆ ಆರೆಸ್ಸೆಸ್ ಎಂದಾದರೂ ತ್ರಿವರ್ಣ ಧ್ವಜ ಹಾರಿಸಿದ್ದಾರೆಯೇ : ಸಿದ್ದು
ಪಡುಬಿದ್ರಿ : ಬೆಳ್ಳಂಬೆಳಗ್ಗೆ ತೆಂಗಿನೆಣ್ಣೆ ಮಿಲ್ ನಲ್ಲಿ ಅಗ್ನಿ ಅವಘಡ : ಲಕ್ಷಾಂತರ ರೂ. ಹಾನಿ
ಮನೆ ಗೋಡೆ ಕುಸಿದು ಯುವಕ ಸಾವು : ಕೆಲ ದಿನದ ಹಿಂದಷ್ಟೇ ಹೆರಿಗೆಯಾಗಿದ್ದ ತಾಯಿ, ಮಗು ಪಾರು
ಗಾಳಿ ಮಳೆಯ ಅಬ್ಬರ : ಮೂಡಿಗೆರೆ, ಕಳಸ ತಾಲೂಕಿನ ಶಾಲೆಗಳಿಗೆ ರಜೆ
ಫಾಝಿಲ್ ಹತ್ಯೆ ಆರೋಪಿಗಳನ್ನು ನಿಯಮ ಮೀರಿ ನಡೆಸಿಕೊಂಡಿಲ್ಲ : ಆಯುಕ್ತರ ಸ್ಪಷ್ಟನೆ