ಲವಲವಿಕೆಯಿಂದ ಸ್ನಾನ ಮುಗಿಸಿ,ಇಷ್ಟಲಿಂಗ ಪೂಜೆ ಮಾಡಿದ ಸಿದ್ಧಗಂಗಾ ಶ್ರೀ
Team Udayavani, Dec 20, 2018, 11:09 AM IST
ತುಮಕೂರು: ಚೆನ್ನೈನಲ್ಲಿ ಚಿಕಿತ್ಸೆ ಮುಗಿಸಿಕೊಂಡು ಸಿದ್ದಗಂಗಾ ಮಠಕ್ಕೆ ವಾಪಾಸಾಗಿರುವ ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಅವರು ಗುರುವಾರ ಬೆಳಗ್ಗೆ ಲವಲವಿಕೆಯಿಂದ ಎದ್ದು ಇಷ್ಟ ಲಿಂಗ ಪೂಜೆ ನೆರವೇರಿಸಿದ್ದಾರೆ.
ಮುಂಜಾನೆ ಎದ್ದ ಶ್ರೀಗಳು ಸ್ನಾನ ಮುಗಿಸಿ ಬಂದು ಇಷ್ಟಲಿಂಗ ಪೂಜೆ ಸಲ್ಲಿಸಿದರು. ಬಳಿಕ ಇಡ್ಲಿ ಮತ್ತು ಹಣ್ಣು ಹಂಪಲುಗಳನ್ನು ಸ್ವೀಕರಿಸಿದ್ದಾರೆ. ಮಠದಲ್ಲಿರುವ ವೈದ್ಯರು ಶ್ರೀಗಳ ಆರೋಗ್ಯದ ಮೇಲೆ ವಿಶೇಷ ನಿಗಾ ವಹಿಸಿದ್ದಾರೆ.
ಭಕ್ತರನ್ನು ಕಾಣುವ ತವಕ
ಶ್ರೀಗಳಿಗೆ ಇನ್ನೂ ಕೆಲ ದಿನಗಳ ಕಾಲ ವಿಶ್ರಾಂತಿಯ ಅಗತ್ಯವಿದ್ದು ದೇಹಾಯಾಸಗೊಳ್ಳದಂತೆ ಹೆಚ್ಚಿನ ಎಚ್ಚರ ವಹಿಸಲು ವೈದ್ಯರು ಸೂಚನೆ ನೀಡಿದ್ದಾರೆ.ಆದರೂ ಶ್ರೀಗಳು ಭಕ್ತರನ್ನು ಕಾಣಬೇಕೆಂದು ಪಟ್ಟು ಹಿಡಿದಿದ್ದಾರೆ.