ಸಿದ್ದರಾಮಯ್ಯ ಅಮೃತ ಮಹೋತ್ಸವ: ಕಾಂಗ್ರೆಸ್ ನಾಯಕರಿಗೆ ನಡುಕ ಆರಂಭ!
Team Udayavani, Jun 28, 2022, 11:58 AM IST
ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಎಪ್ಪತ್ತೈದನೇ ವರ್ಷದ ( ಅಮೃತ ಮಹೋತ್ಸವ ) ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಅವರ ಆಪ್ತ ಬಣ ಸಂಚಾಲನ ಸಮಿತಿ ರಚನೆ ಮಾಡಿರುವುದು ಕಾಂಗ್ರೆಸ್ ವಲಯದಲ್ಲಿ ಡವಡವ ಸೃಷ್ಟಿಸಿದೆ.
ಆ. 3 ರಂದು ದಾವಣೆಗೆರೆಯಲ್ಲಿ ಆಯೋಜಿಸಿರುವ ಈ ಅಮೃತ ಮಹೋತ್ಸವ ಕಾರ್ಯಕ್ರಮ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ ವೇದಿಕೆ ಎಂದೇ ಕಾಂಗ್ರೆಸಿಗರು ವಿಶ್ಲೇಷಣೆ ನಡೆಸುತ್ತಿದ್ದಾರೆ. ಮೈಸೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಅಹಿಂದ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದ್ದಕ್ಕೆ ಪರ್ಯಾಯವಾಗಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದೂ ವ್ಯಾಖ್ಯಾನಿಸಲಾಗುತ್ತಿದೆ.
ಇದನ್ನೂ ಓದಿ:ದೆಹಲಿ: ಸೋನಿಯಾ ಗಾಂಧಿ ಆಪ್ತ ಕಾರ್ಯದರ್ಶಿ ವಿರುದ್ಧ ರೇಪ್ ಪ್ರಕರಣ ದಾಖಲು
ಈ ಸಮಿತಿಗೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರನ್ನು ಗೌರವ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಮಾಜಿ ಸಚಿವ ಕೆ.ಎನ್.ರಾಜಣ್ಣ ಅಧ್ಯಕ್ಷರಾಗಿದ್ದಾರೆ. ಭೈರತಿ ಸುರೇಶ್ ಖಜಾಂಜಿ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಗೆ ಲಕ್ಕಿ ಫ್ಲೇಸ್ ಎಂದೇ ವ್ಯಾಖ್ಯಾನಿಸುವ ದಾವಣಗೆರೆಯಲ್ಲಿ ಕಾರ್ಯಕ್ರಮ ನಡೆಯುತ್ತದೆ. ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್ ನ ಎಲ್ಲ ನಾಯಕರಿಗೆ ಆಹ್ವಾನ ನೀಡಲಾಗುತ್ತದೆ.
ಹೀಗಾಗಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ವೇದಿಕೆಯನ್ನೇ ಪಕ್ಷದ ವೇದಿಕೆಯಾಗಿ ಪರಿವರ್ತಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆಕ್ಷೇಪ ಕಾಂಗ್ರೆಸಿಗರಿಂದಲೇ ಕೇಳಿ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಾವರ್ಕರ್ ದೇಶಪ್ರೇಮಿ ಎಂದು ಯಾಕೆ ಕರೆಯಬೇಕು?: ಸಿದ್ದರಾಮಯ್ಯ
ಫಿಬಾ U-18 ಮಹಿಳಾ ಏಷ್ಯನ್ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ಗೆ ಸಕಲ ಸಿದ್ಧತೆ
ಯಡಿಯೂರಪ್ಪ ಅವರನ್ನು ಸಿಎಂ ಎಂದು ಘೋಷಿಸಲಿ: ಎಂ.ಬಿ ಪಾಟೀಲ್ ಸವಾಲು
ದಾವಣಗೆರೆ: ಪ್ರಿಯಕರನೊಂದಿಗೆ ಬೆಂಗಳೂರಿನ ವಿವಾಹಿತೆ ಕೆರೆಯಲ್ಲಿ ಆತ್ಮಹತ್ಯೆ
ಸಿದ್ದರಾಮಯ್ಯರಿಗೆ ಮಡಿಕೇರಿಯಲ್ಲೂ ಪ್ರತಿಭಟನೆಯ ಬಿಸಿ: ಕಾಂಗ್ರೆಸ್ ನಿಂದ ಪ್ರತಿರೋಧ
MUST WATCH
ಹೊಸ ಸೇರ್ಪಡೆ
ಸಾವರ್ಕರ್ ದೇಶಪ್ರೇಮಿ ಎಂದು ಯಾಕೆ ಕರೆಯಬೇಕು?: ಸಿದ್ದರಾಮಯ್ಯ
ಫಿಬಾ U-18 ಮಹಿಳಾ ಏಷ್ಯನ್ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ಗೆ ಸಕಲ ಸಿದ್ಧತೆ
ರಾಜು ಶ್ರೀವಾಸ್ತವ್ ಆರೋಗ್ಯ ಸ್ಥಿತಿ ಗಂಭೀರ: ಸ್ನೇಹಿತ ಹೇಳಿದ್ದೇನು?
ಅತ್ಯಾಚಾರ ವಿರೋಧಿಸಿದ ಬ್ಯಾಸ್ಕೆಟ್ಬಾಲ್ ಆಟಗಾರ್ತಿ: 25 ಅಡಿ ಎತ್ತರದಿಂದ ತಳ್ಳಿದ ದುರುಳರು
ದೇಶದಲ್ಲಿ ಮಠಗಳಿಂದ ಶೈಕ್ಷಣಿಕ ಕ್ರಾಂತಿ; ನಿರಂಜನಾನಂದಪುರಿ ಶ್ರೀ