ಸಿದ್ದು ಮಾತಿಗೆ ತಾಳ ತಂತಿನೇ ಇರಲ್ಲ: ಶೆಟ್ಟರ್‌

Team Udayavani, Nov 9, 2019, 3:06 AM IST

ಧಾರವಾಡ: ಸಿಎಂ ಯಡಿಯೂರಪ್ಪ ಹಾಗೂ ಪ್ರಧಾನಿ ಮೋದಿ ಸರ್ಕಾರ ಟೀಕಿಸಲು ಯಾವ ವಿಷಯವೂ ಇಲ್ಲದ್ದರಿಂದ ಕಾಂಗ್ರೆಸ್‌ ಆಡಿಯೋ-ವಿಡಿಯೋ ರಾಜಕಾರಣ ಮಾಡುತ್ತಿದೆ ಎಂದು ಬೃಹತ್‌ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಆರೋಪಿಸಿದರು. ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಆಡಿಯೋ ವಿಷಯ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಈಗಾಗಲೇ ನ್ಯಾಯಾಲಯ ತನ್ನ ನಿಲುವು ಸ್ಪಷ್ಟಪಡಿಸಿದೆ.

ಆದರೂ ಈಗ ಇದನ್ನು ರಾಷ್ಟ್ರಪತಿ ಅಂಗಳಕ್ಕೆ ತೆಗೆದುಕೊಂಡು ಹೋಗಿರುವುದು ನಾಚಿಕೆಗೇಡು. ಬಿಜೆಪಿಯವರೇ ಆಡಿಯೋ ಬಿಡುಗಡೆ ಮಾಡಿದ್ದಾರೆಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಅವರು ಹಿಂದೆ-ಮುಂದೆ, ತಾಳ-ತಂತಿ ಏನೂ ಗೊತ್ತಿಲ್ಲ ಎಂಬಂತೆ ಮಾತನಾಡುತ್ತಾರೆ. ಯಾರ ಹೆಸರು ಹೇಳಿದರೂ, ಅದಕ್ಕೆ ದಾಖಲೆ ನೀಡಬೇಕು ಎಂದರು. ಇಂಥವರೇ ಆಡಿಯೋ ಬಿಡುಗಡೆ ಮಾಡಿದ್ದಾರೆಂದು ಆರೋಪಿಸುವ ಕಾಂಗ್ರೆಸ್‌ನವರ ಬಳಿ ಆಡಿಯೋ ಹೇಗೆ ಬಂತು ಎಂಬುದೇ ಗೊತ್ತಿಲ್ಲ.

ಏನೂ ಇಲ್ಲದೇ ದೇಶವ್ಯಾಪಿ ಸುದ್ದಿ ಮಾಡಲೆತ್ನಿಸುತ್ತಿದ್ದಾರೆ. ಇಂಥ ಕೆಲಸಗಳಿಂದಾಗಿಯೇ ಕಾಂಗ್ರೆಸ್‌ ಅಧೋಗತಿಗೆ ಇಳಿದಿದೆ. ರಾಜ್ಯದ ಜನರಿಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮಾಡಿದ ಅನ್ಯಾಯವನ್ನು ಬಿಜೆಪಿ ಮಾಡುತ್ತಿಲ್ಲ. ಮೈತ್ರಿ ಸರ್ಕಾರ ಹಾಸನ, ಹೊಳೆನರಸಿಪುರಕ್ಕೆ ಹಣದ ಹೊಳೆ ಹರಿಸಿದೆ. ನಮ್ಮ ಸರ್ಕಾರ ವರದಿ ಆಧಾರದನ್ವಯ ಅನುದಾನ ನೀಡುತ್ತಿದೆ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ