
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಜೆಡಿಎಸ್ ನ ಶಿವಲಿಂಗೇಗೌಡ
Team Udayavani, Apr 2, 2023, 1:14 PM IST

ಶಿರಸಿ: ಅರಸೀಕೆರೆ ಕ್ಷೇತ್ರದ ವಿಧಾನ ಸಭಾ ಸದಸ್ಯ ಶಿವಲಿಂಗೇಗೌಡ ಅವರು ರವಿವಾರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಸಿದರು.
ಅರಸಿಕೇರೆಯಿಂದ 2008, 2013, 2018ರಲ್ಲಿ ಜೆಡಿಎಸ್ ಪಕ್ಷದಿಂದ ವಿಧಾನ ಸಭೆಗೆ ಆಯ್ಕೆ ಆಗಿದ್ದ ಶಿವಲಿಂಗೇಗೌಡ ಅವರು ಐನೂರಕ್ಕೂ ಅಧಿಕ ಬೆಂಬಲಿಗರ ಜೊತೆ ಶಿರಸಿಗೆ ಆಗಮಿಸಿ ಸ್ಪೀಕರ್ ಅವರಿಗೆ ರಾಜೀನಾಮೆ ಸಲ್ಲಿಸಿದರು.
ಪ್ರಮುಖರಾದ ಎಪಿಎಂಸಿ ರಾಮಚಂದ್ರ, ಜಿ.ಪಂ ಮಾಜಿ ಅಧ್ಯಕ್ಷ ಹುಚ್ಚೇಗವಡರು, ಸುರೇಶ ಚಗಚಗೇರಿ, ಈಶ್ವರಪ್ಪ ಚಗಚಗೇರಿ, ಮಾಜಿ ಉಪಾಧ್ಯಕ್ಷ ಬಿಳೆ ಚೌಡಯ್ಯರು, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗಂಡಸಿ ಅಯ್ಯಣ್ಣ, ಬಾಣಾವರ ರವಿ ಶಂಕರ, ಜಿ.ಕೆ. ಸತೀಶ, ಲೋಕೇಶ, ಬಿ.ಎಂ.ಧರ್ಮಣ್ಣ, ಪ್ರಜ್ಚಲ್, ಹೆಗ್ಗಡ ಮಂಜಣ್ಣ, ನಾಗರಹಳ್ಳಿ ದೇವರಾಜು, ಜಿ.ಎಂ.ರಂಗನಾಥ ಇತರರು ಇದ್ದರು.
ಈ ಹಿಂದೆ ಶಿವಲಿಂಗೇಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರುವುದಾಗಿ ಹೇಳಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
