ಮಾನವ ಸಂಪನ್ಮೂಲ ಪೂರೈಕೆಗೆ ಕೌಶಲಾಧಾರಿತ ತರಬೇತಿ


Team Udayavani, Jul 16, 2021, 7:40 AM IST

ಮಾನವ ಸಂಪನ್ಮೂಲ ಪೂರೈಕೆಗೆ  ಕೌಶಲಾಧಾರಿತ ತರಬೇತಿ

ಬೆಂಗಳೂರು: ಕೊರೊನಾ ವಿರುದ್ಧ ಹೋರಾಟದಲ್ಲಿ ಮಾನವ ಸಂಪನ್ಮೂಲ ಕೊರತೆಯಾಗದಂತೆ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಪೂರೈಸಿರುವ ಮತ್ತು ಬಿಎ ಸ್‌ ಸಿ ಪದವೀಧರರಿಗೆ ಅಗತ್ಯ ತರ ಬೇತಿ ನೀಡಲು ಯುವ ಸಶಕ್ತೀಕರಣ ಮತ್ತು ಕ್ರೀಡಾ ಇಲಾಖೆ ಮುಂದಾಗಿದೆ.

ಇಲಾಖೆ, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ. ಮತ್ತು ಅಪೊಲೋ ಮೆಡಿಸ್ಕಿಲ್‌ ಇದಕ್ಕೆ ಸಹಯೋಗ ನೀಡಿವೆ. ಕೊರೊನಾ ತಡೆ ಮತ್ತು ಲಸಿಕೆ ಅಭಿಯಾನ ದಲ್ಲಿ ಸೇವೆ ಸಲ್ಲಿಸಲು ಅನುಕೂಲ ಆಗುವಂತೆ ಎಸೆಸೆಲ್ಸಿ ಅಥವಾ ತತ್ಸಮಾನ ಕೋರ್ಸ್‌ ಪೂರೈ ಸಿರುವ, ಪಿಯುಸಿ ವಿಜ್ಞಾನ ವಿಭಾಗ ಅಥವಾ ವಿಜ್ಞಾನ ವಿಭಾಗದ ಪದವಿ ಪೂರೈಸಿರುವ ಅಭ್ಯರ್ಥಿಗಳಿಗೆ ತರಬೇತಿ ನೀಡಿ, ಕೌಶಲಕ್ಕೆ ಅನುಗುಣವಾಗಿ ಉದ್ಯೋಗಾವಕಾಶ ಒದಗಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ವಿವರ ನೀಡಿದ್ದಾರೆ.

ಉದ್ಯೋಗಾವಕಾಶ ಹೇಗೆ?:

2,600ಕ್ಕೂ ಅಧಿಕ ಉದ್ಯೋ ಗಾವ ಕಾಶಗಳು ಇವೆ. 2,400ಕ್ಕೂ ಅಧಿಕ ಅಭ್ಯರ್ಥಿಗಳು ನೋಂದಣಿ ಮಾಡಿ ಕೊಂಡಿ ದ್ದಾರೆ. 13 ಸಾವಿರ ರೂ.ಗಳಿಂದ 22 ಸಾವಿರ ರೂ. ವರೆಗೆ ಮಾಸಿಕ ವೇತನ ಇರಲಿದೆ. https://sdgcckar.in/nss  ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಕ್ರೀಡಾ ಇಲಾಖೆಯ ಹಿರಿಯ ಅಧಿಕಾರಿ ಯೊಬ್ಬರು ವಿವರ ನೀಡಿದ್ದಾರೆ.

3 ರೀತಿಯ ಕೋರ್ಸ್‌ :

1.ಕೋವಿಡ್‌ ಆರೋಗ್ಯ ಕಾರ್ಯಕರ್ತ ಕೋರ್ಸ್‌ : 

ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ ವಿಜ್ಞಾನ ವಿಭಾಗದ ಅಭ್ಯರ್ಥಿಗಳಿಗೆ 20 ದಿನಗಳ ತರಬೇತಿ. ಆಸ್ಪತ್ರೆ, ಕ್ಲಿನಿಕ್‌, ಐಸೋಲೇಶನ್‌ ಮತ್ತು ಕ್ವಾರಂಟೈನ್‌ ಕೇಂದ್ರಗಳಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು, ಆಮ್ಲಜನಕ ಸಿಲಿಂಡರ್‌ ಹೇಗೆ ಬಳಸಬೇಕು ಎಂಬ ತರಬೇತಿ.

2.ಲಸಿಕೆ ಸಂಯೋಜಕ ಕೋರ್ಸ್‌ : 

ವಿಜ್ಞಾನ ವಿಭಾಗದ ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ ಪೂರೈಸಿದ ಅಭ್ಯರ್ಥಿಗಳಿಗೆ 10 ದಿನಗಳ ತರಬೇತಿ. ಆಸ್ಪತ್ರೆ, ಕ್ಲಿನಿಕ್‌, ಕಾರ್ಪೋರೆಟ್‌ ವಲಯದಲ್ಲಿ ಕೊರೊನಾ ಲಸಿಕೆ ಅಭಿಯಾನ ಮತ್ತು ಸಮರ್ಪಕ ನಿರ್ವಹಣೆಯ ಬಗ್ಗೆ ತರಬೇತಿ.

3.ಕೋವಿಡ್‌ ಸಹಾಯಕ ಕೇಂದ್ರದ ಕಾ.ನಿ. ಕೋರ್ಸ್‌

ಎಸೆಸೆಲ್ಸಿ ಮೇಲ್ಪಟ್ಟು ವಿದ್ಯಾಭ್ಯಾಸ ಮಾಡಿರುವ ಅಭ್ಯರ್ಥಿಗಳಿಗೆ ಆಸ್ಪತ್ರೆ, ಕ್ಲಿನಿಕ್‌ ಮತ್ತು ಸರಕಾರಿ ಕೌನ್ಸೆಲಿಂಗ್‌ ಕೇಂದ್ರಗಳಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು 10 ದಿನಗಳಲ್ಲಿ ಕಲಿಸಿಕೊಡಲಾಗುತ್ತದೆ. ಮೂರೂ ತರಬೇತಿ ಆನ್‌ಲೈನ್‌, ಆಫ್ಲೈನ್‌ ಎರಡೂ ಮಾದರಿಗಳಲ್ಲಿ ಇರಲಿದೆ.

 ಉದಯವಾಣಿ ಪ್ರತಿಪಾದಿಸಿತ್ತು :

“ತುರ್ತು ಆರೋಗ್ಯ ಸೇವೆಗೆ ಅಪ್ರಂಟಿಸ್‌ಶಿಪ್‌ ಜಾರಿಯಾಗಲಿ’ ಎಂಬ ಶೀರ್ಷಿಕೆಯಡಿ ಮೇ 6ರಂದು “ಉದಯವಾಣಿ’ ಸಮಗ್ರ ವರದಿ ಪ್ರಕಟಿ ಸಿತ್ತು. ಅದರಲ್ಲಿ ಕೊರೊನಾ ಸೃಷ್ಟಿ ಸಿರುವ ಆರೋಗ್ಯ ತುರ್ತು ಪರಿಸ್ಥಿತಿ ನಿಭಾ ಯಿಸುವುದಕ್ಕಾಗಿ ಆಸಕ್ತರಿಗೆ ನರ್ಸಿಂಗ್‌ ತರಬೇತಿ ನೀಡಿ, ಅಪ್ರಂಟಿಸ್‌ಶಿಪ್‌ ಜಾರಿ ಮಾಡಬೇಕು ಎಂದು ಪ್ರತಿಪಾದಿಸಿತ್ತು.

ಮೊದಲ ಹಂತದಲ್ಲಿ  5 ಸಾವಿರ ಅಭ್ಯರ್ಥಿಗಳಿಗೆ ತರಬೇತಿ ನೀಡಲಿದ್ದೇವೆ. ಕೇಂದ್ರದ ಮಾರ್ಗಸೂಚಿ ಯಂತೆ ಅಲ್ಪಾವಧಿ ಕೋರ್ಸ್‌ ನಡೆಯಲಿದೆ. ಕೋರ್ಸ್‌ ಪೂರ್ಣಗೊಂಡ ಅನಂತರ ಸಂದರ್ಶನದ ಮೂಲಕ ಉದ್ಯೋಗಕ್ಕೆ ಆಯ್ಕೆ ನಡೆಯಲಿದೆ.ಡಾ| ಶಾಲಿನಿ ರಜನೀಶ್‌,  ಯುವ ಸಶಕ್ತೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ

ಟಾಪ್ ನ್ಯೂಸ್

ಪೊಡವಿಗೊಡೆಯನ ಬೀಡಿನಲ್ಲಿ ಸಾಂಪ್ರದಾಯಿಕ ಪರ್ಯಾಯ ಸಂಪನ್ನ

ಪೊಡವಿಗೊಡೆಯನ ಬೀಡಿನಲ್ಲಿ ಸರಳ, ಸಾಂಪ್ರದಾಯಿಕ ಪರ್ಯಾಯ ಸಂಪನ್ನ

bumrah

ನಾಯಕತ್ವದ ಜವಾಬ್ದಾರಿ ನೀಡಿದರೆ ಸಂತೋಷ: ಜಸ್ಪ್ರೀತ್ ಬುಮ್ರಾ

ಹೊಸ ಸೌರಮಂಡಲ ಪತ್ತೆ ಹಚ್ಚಿದ ಖಗೋಳ ಸಂಶೋಧಕರೆನಿಸಿರುವ  ಟಾಮ್‌ ಜಾಕೋಬ್ಸ್

ಹೊಸ ಸೌರಮಂಡಲ ಪತ್ತೆ ಹಚ್ಚಿದ ಖಗೋಳ ಸಂಶೋಧಕರೆನಿಸಿರುವ  ಟಾಮ್‌ ಜಾಕೋಬ್ಸ್

astrology today uv

ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

thumb 1

ಮಾರ್ಚ್ ನಲ್ಲಿ 12-14ರ ವಯಸ್ಸಿನ ಮಕ್ಕಳಿಗೆ ಲಸಿಕೆ?

ಕೃತಕ ಚಂದ್ರನ ಸೃಷ್ಟಿಸಿದ ಚೀನ

ಕೃತಕ ಚಂದ್ರನ ಸೃಷ್ಟಿಸಿದ ಚೀನ

ಎಚ್‌ಐವಿ ನಿವಾರಣೆಗೆ “ಭರ್ಜರಿ ಬೇಟೆ’ ತಂತ್ರ!

ಎಚ್‌ಐವಿ ನಿವಾರಣೆಗೆ “ಭರ್ಜರಿ ಬೇಟೆ’ ತಂತ್ರ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಿಯು ಪರೀಕ್ಷೆ ಸಿದ್ಧತೆಗೆ 10 ನಿಮಿಷದ ವೀಡಿಯೋ

ಪಿಯು ಪರೀಕ್ಷೆ ಸಿದ್ಧತೆಗೆ 10 ನಿಮಿಷದ ವೀಡಿಯೋ

thumb 3

ಮಾಸಾಂತ್ಯ ಸೋಂಕು ಇಳಿಕೆ? ರಾಜ್ಯದಲ್ಲಿ ಜ. 25ರ ವೇಳೆ ಪ್ರಕರಣ ಇಳಿಮುಖ ಸಾಧ್ಯತೆ

ತಾ.ಪಂ., ಜಿ.ಪಂ. ಕ್ಷೇತ್ರಗಳ ಗಡಿ ನಿಗದಿ ಪ್ರಕ್ರಿಯೆ “ತ್ರಿಶಂಕು’ ಸ್ಥಿತಿಯಲ್ಲಿ

ತಾ.ಪಂ., ಜಿ.ಪಂ. ಕ್ಷೇತ್ರಗಳ ಗಡಿ ನಿಗದಿ ಪ್ರಕ್ರಿಯೆ “ತ್ರಿಶಂಕು’ ಸ್ಥಿತಿಯಲ್ಲಿ

ಕಾಂಗ್ರೆಸ್‌ ಪಾದಯಾತ್ರೆ  ಮೇಕೆದಾಟು ಯೋಜನೆಗೆ ಮಾರಕ : ಅಶೋಕ್‌

ಕಾಂಗ್ರೆಸ್‌ ಪಾದಯಾತ್ರೆ  ಮೇಕೆದಾಟು ಯೋಜನೆಗೆ ಮಾರಕ : ಅಶೋಕ್‌

ಹೈಕೋರ್ಟ್‌ ಕಲಾಪ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ

ಹೈಕೋರ್ಟ್‌ ಕಲಾಪ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ

MUST WATCH

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

udayavani youtube

ಅಬುಧಾಬಿಯಲ್ಲಿ ಡ್ರೋನ್ ದಾಳಿ : ಇಬ್ಬರು ಭಾರತೀಯರು ಸೇರಿ ಮೂವರು ಸಾವು

udayavani youtube

ಕೃಷ್ಣಾಪುರ ಸ್ವಾಮೀಜಿಗಳ ಹಿನ್ನೆಲೆ

udayavani youtube

ವಾಹನ ನಿಲುಗಡೆ ಜಗಳ ತರಕಾರಿ ಮಾರುತ್ತಿದ್ದ ಮಹಿಳೆಗೆ ‘ ಡಾಕ್ಟರ್’ ನಿಂದ ಥಳಿತ

udayavani youtube

ಜನರ ಕಲ್ಯಾಣವಾಗಬೇಕು, ಉಪದ್ರವವಾಗಬಾರದು :ಕೃಷ್ಣಾಪುರ ಮಠದ ಶ್ರೀಪಾದರ ಸಂದೇಶ

ಹೊಸ ಸೇರ್ಪಡೆ

ಅಕ್ರಮ ದನದ ಮಾಂಸ ಸಾಗಾಟ: ಆರೋಪಿ ಪೊಲೀಸ್ ವಶಕ್ಕೆ

ಅಕ್ರಮ ದನದ ಮಾಂಸ ಸಾಗಾಟ: ಆರೋಪಿ ಪೊಲೀಸ್ ವಶಕ್ಕೆ

ಪೊಡವಿಗೊಡೆಯನ ಬೀಡಿನಲ್ಲಿ ಸಾಂಪ್ರದಾಯಿಕ ಪರ್ಯಾಯ ಸಂಪನ್ನ

ಪೊಡವಿಗೊಡೆಯನ ಬೀಡಿನಲ್ಲಿ ಸರಳ, ಸಾಂಪ್ರದಾಯಿಕ ಪರ್ಯಾಯ ಸಂಪನ್ನ

bumrah

ನಾಯಕತ್ವದ ಜವಾಬ್ದಾರಿ ನೀಡಿದರೆ ಸಂತೋಷ: ಜಸ್ಪ್ರೀತ್ ಬುಮ್ರಾ

ಹೊಸ ಸೌರಮಂಡಲ ಪತ್ತೆ ಹಚ್ಚಿದ ಖಗೋಳ ಸಂಶೋಧಕರೆನಿಸಿರುವ  ಟಾಮ್‌ ಜಾಕೋಬ್ಸ್

ಹೊಸ ಸೌರಮಂಡಲ ಪತ್ತೆ ಹಚ್ಚಿದ ಖಗೋಳ ಸಂಶೋಧಕರೆನಿಸಿರುವ  ಟಾಮ್‌ ಜಾಕೋಬ್ಸ್

astrology today uv

ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.