ಬಿಜೆಪಿಗೂ ಬರಲಿದೆ ಸಮ್ಮಿಶ್ರ ಸರ್ಕಾರದ ದುಸ್ಥಿತಿ: ಹೊರಟ್ಟಿ

Team Udayavani, Aug 26, 2019, 3:00 AM IST

ಹುಬ್ಬಳ್ಳಿ: ಆಂತರಿಕ ಒತ್ತಡ ಹೆಚ್ಚಿದರೆ ಸಮ್ಮಿಶ್ರ ಸರ್ಕಾರಕ್ಕೆ ಬಂದ ಸ್ಥಿತಿ ಬಿಜೆಪಿ ಸರ್ಕಾರಕ್ಕೆ ಬರಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಅವರಿಗೆ ಹಲವು ನಿರ್ಬಂಧ ಹೇರದೆ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್‌ ಮುಕ್ತ ವಾತಾವರಣ ನೀಡಬೇಕು. ಆಡಳಿತ ನಿರ್ವಹಣೆಯಲ್ಲಿ ಹೈಕಮಾಂಡ್‌ ಅವರನ್ನು ಕಟ್ಟಿ ಹಾಕುವ ಕೆಲಸ ಮಾಡಬಾರದು. ಸಚಿವ ಸಂಪುಟ ರಚನೆ ವಿಳಂಬ, ಖಾತೆ ಹಂಚಿಕೆ ಮಾಡದಿರುವುದು ಇದಕ್ಕೆ ಪುಷ್ಟಿ ನೀಡುತ್ತಿದೆ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ