Udayavni Special

ಬಿಜೆಪಿ ಶಾಸಕರಿಂದಲೇ ಸಿಡಿ ಆರೋಪ ತನಿಖೆಯಾಗಲಿ-ಎಸ್‍ಆರ್.ಪಾಟೀಲ

ನ್ಯಾಯಾಂಗ ತನಿಖೆಯಾಗಲಿ-ಮುಖ್ಯಮಂತ್ರಿ ರಾಜೀನಾಮೆ ನೀಡಲಿ

Team Udayavani, Jan 15, 2021, 10:41 PM IST

ಬಿಜೆಪಿ ಶಾಸಕರಿಂದಲೇ ಸಿಡಿ ಆರೋಪ ತನಿಖೆಯಾಗಲಿ-ಎಸ್‍ಆರ್.ಪಾಟೀಲ

ವಿಜಯಪುರ : ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುರಿತಾಗಿ ಸಿಡಿ ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡಿ, ಹಣ ನೀಡಿ ಕೆಲವರು ಸಚಿವರಾಗಿದ್ದಾರೆ ಎಂದು ಬಿಜೆಪಿ ಶಾಸಕರೇ ಗಂಭೀರ ಆರೋಪ ಮಾಡಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ಹೈಕೋರ್ಟ್‍ನ ಹಾಲಿ ನ್ಯಾಯಾಧೀಶರಿಂದ ಮುಕ್ತ ತನಿಖೆಗೆ ಆದೇಶಿಸಬೇಕು. ಇದಕ್ಕೂ ಮೊದಲು ಯಡಿಯೂರಪ್ಪ ಅವರು ತಮ್ಮ ಮೇಲೆ ಗಂಭೀರ ಆರೋಪ ಬಂದಿರುವ ಕಾರಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮೇಲ್ಮನೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ ಆಗ್ರಹಿಸಿದರು.

ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಡಿ ಇಟ್ಟುಕೊಂಡು ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿಯನ್ನು ಅಂಜಿಸಿ ತಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಜೊತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ಯತ್ನಾಳ ಮಾಡಿರುವ ಆರೋಪ ನಿರಧಾರ. ಹೊಂದಾಣಿಕೆ ರಾಜಕಾರಣ ಎಂಬುದು ಕಾಂಗ್ರೆಸ್ ನಿಂಘಟಿನಲ್ಲಿಲ್ಲ ಎಂದು ತಿರುಗೇಟು ನೀಡಿದರು

ಕಾಂಗ್ರೆಸ್ ನಾಯಕರ ಬಳಿ ಅವರು ಹೇಳಿದಂತೆ ಯಾವ ಸಿಡಿ ಇಲ್ಲ. ಸಿಡಿ ವ್ಯವಹಾರ, ಅಶ್ಲೀಲ ವ್ಯವಹಾರ ಕಾಂಗ್ರೆಸ್‍ನವರು ಎಂದೂ ಮಾಡಿಲ್ಲ. ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಅನುದಾನ ನೀಡದೇ ಮುಖ್ಯಮಂತ್ರಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸಚಿವ ಸಂಪುಟದಲ್ಲಿ ವಿಜಯಪುರ ಜಿಲ್ಲೆಗೆ ಪ್ರಾತಿನಿಧ್ಯ ಸಿಗದಿರುವುದು ನೋವಿನ ಸಂಗತಿ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ಆಡಳಿತ ಬಿಜೆಪಿ ಪಕ್ಷದಲ್ಲಿದ್ದರೂ ಜನಪರ ಧ್ವನಿ ಎತ್ತುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಧೈರ್ಯ ಮೆಚ್ಚುವಂತಹದು ಎಂದರು.

ಕಾಯ್ದೆ ತಿದ್ದುಪಡಿಯಿಂದ ಖಾಸಗಿ ಕಂಪನಿಗಳು ಎಪಿಎಂಸಿಗೆ ಪರ್ಯಾಯವಾದ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಈ ಮೂಲಕ ರೈತರಿಗೆ ಆರಂಭದಲ್ಲಿ ಉತ್ತಮ ಬೆಲೆ ಸಿಗಬಹುದು. ಆದರೆ, ಎಪಿಎಂಸಿ ವ್ಯವಸ್ಥೆ ಸಂಪೂರ್ಣ ಹಾಳು ಮಾಡಿ, ಸರ್ಕಾರದ ಯಾವುದೇ ನಿಯಂತ್ರಣವಿಲ್ಲದ ಖಾಸಗಿ ಕಂಪನಿಗಳ ಕೈಗೆ ದೇಶ ಕೃಷಿ ಉತ್ಪನ್ನ ಮಾರಾಟವನ್ನು ನೀಡುವ ಹುನ್ನಾರ ಅಡಗಿದೆ. ಇದರಿಂದ ರೈತರ ಶೋಷಣೆ ಜೊತೆಗೆ ಕೃತಕ ಅಭಾವ ಸೃಷ್ಟಿ, ಕಾಳಸಂತೆ ವ್ಯಾಪಾರ, ಬೆಲೆ ಏರಿಕೆಯಂಥ ಅಪಾಯಗಳಿಗೆ ವೇದಿಕೆ ಕಲ್ಪಿಸಿಕೊಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ಮೋದಿ ಸರ್ಕಾರ ಎರಡು ಅವಧಿಗೆ ಅಧಿಕಾರ ನಡೆಸಿ ಈ ಆರು ವರ್ಷಗಳಲ್ಲಿ ಸರ್ಕಾರಿ ಸ್ವಾಮ್ಯದಲ್ಲಿದ್ದ ಬಿಎಸ್‍ಎನ್‍ಎಲ್, ರೈಲ್ವೇ, ವಿಮಾನ ಸೇರಿದಂತೆ ಸರ್ಕಾರಿ ಉದ್ದಿಮೆಗಳನ್ನು ಅಂಬಾನಿ, ಅದಾನಿ ಅವರಂಥ ದೊಡ್ಡ ಉದ್ಯಮಿ ಶ್ರೀಮಂತರಿಗೆ ಖಾಸಗಿಕರಣ ಮಾಡಿದ್ದಾರೆ. ಇದೀಗ ರೈತರ ಹೊಲದ ಮೇಲೆ ಅವರ ಕಣ್ಣು ಬಿದ್ದಿದೆ ಎಂದು ವಾಗ್ದಾಳಿ ನಡೆಸಿದರು.

ಜಿ.ಪಂ. ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಮಾಜಿ ಶಾಸಕರಾದ ವಿಠ್ಠಲ ಕಟಕಧೋಂಡ, ಶರಣಪ್ಪ ಸುಣಗಾರ, ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ, ಹಾಸಿಂಪೀರ ವಾಲೀಕಾರ ಇತರರು ಉಪಸ್ಥಿತರಿದ್ದರು.

20 ರಂದು ಕಾಂಗ್ರೆಸ್‍ನಿಂದ ರಾಜಭವನ ಮುತ್ತಿಗೆ-ಎಸ್.ಆರ್.ಪಾಟೀಲ

ವಿಜಯಪುರ: ಕೃಷಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ಕಾನೂನುಗಳು ರೈತರ ಪಾಲಿಗೆ ಕರಾಳ ಶಾಸನಗಳು. ಈ ಕಾಯ್ದೆಗಳ ಜಾರಿಯನ್ನು ವಿರೋಧಿಸಿ ದೆಹಲಿಯಲ್ಲಿ ರೈತರ ಹೋರಾಟ ಬೆಂಬಲಿಸಿ ಜ.20 ರಂದು ಕೆಪಿಸಿಸಿ ಬೆಂಗಳೂರಿನಲ್ಲಿ ರೈತ ಅಧಿಕಾರ ದಿನಾಚರಣೆ ಮೂಲಕ ಹೋರಾಟ ಹಮ್ಮಿಕೊಂಡಿದೆ. ಸ್ವಾತಂತ್ರ್ಯ ಉದ್ಯಾನವನದಿಂದ ಪಾದಯಾತ್ರೆ ಮೂಲಕ ರಾಜಭವನಕ್ಕೆ ಮುತ್ತಿಗೆ ಹಾಕುವುದಾಗಿ ಮೇಲ್ಮನೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ ತಿಳಿಸಿದರು.

ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರಾಜ ಅರಸು ಕಾಲದಲ್ಲಿ ಉಳುವವನೇ ಒಡೆಯ ಎಂಬ ಕಾಯ್ದೆಯ ಮೂಲಕ ರೈತರ ಬೆನ್ನಿಗೆ ನಿಂತರೆ, ಮೋದಿ ಹಾಗೂ ಬಿಜೆಪಿ ಸರ್ಕಾರಗಳು ಕೃಷಿಕರಲ್ಲದ ವ್ಯಕ್ತಿ ಕೂಡ ಭೂಮಿ ಖರೀದಿಸಲು ಅವಕಾಶ ನೀಡಿ ಕೃಷಿ ಕ್ಷೇತ್ರವನ್ನು ಶ್ರೀಮಂತರಿಗೆ ಮಾರಲು ಹೊರಟಿದ್ದಾರೆ. ಸರ್ಕಾರಿ ಸ್ವಾಮ್ಯದ ರೈಲ್ವೇ, ವಿಮಾನ ವ್ಯವಸ್ಥೆಯನ್ನು ಖಾಸಗೀಯರಿಗೆ ಮಾರಿರುವ ಮೋದಿ ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಗೆ ಇದೀಗ ರೈತರ ಜಮೀನಿನ ಮೇಲೆ ಕರ್ಣಣು ಬಿದ್ದಿದೆ.

ಕಾರ್ಪೋರೇಟ್ ಪರ ಕಾನೂನು ಜಾರಿಗೊಳಿಸುವ ಮೂಲಕ ರೈತ ವಿರೋಧಿ ಹಾಗೂ ಕರಾಳ ಕಾನೂನು ತಂದಿರುವ ಪ್ರಧಾನಿ ಮೋದಿ ಕಳೆದ ಆರು ವರ್ಷಗಳ ತಮ್ಮ ಎರಡು ಅವಧಿಯ ಸರ್ಕಾರದಲ್ಲಿ ಇಂಥದ್ದನ್ನೇ ಮಾಡಿದ್ದಾರೆ. ನೋಟ್ ಅಮಾನ್ಯೀಕರಣ ಮಾಡಿದರು, ಅವೈಜ್ಞಾನಿ ಜಿಎಸ್‍ಟಿ ಜಾರಿಗೆ ತಂದರು ಎಂದು ವಾಗ್ದಾಳಿ ನಡೆಸಿದರು.

ಟಾಪ್ ನ್ಯೂಸ್

ಪ್ರಧಾನಿ ನಿವಾಸ ಸಂಪರ್ಕಕ್ಕೆ ಸುರಂಗ!

ಪ್ರಧಾನಿ ನಿವಾಸ ಸಂಪರ್ಕಕ್ಕೆ ಸುರಂಗ!

ಶಶಿಕಲಾರ ರಾಜಕೀಯ ನಿವೃತ್ತಿಯ ಅಸಲಿ ಕಹಾನಿ ಏನು?

ಶಶಿಕಲಾರ ರಾಜಕೀಯ ನಿವೃತ್ತಿಯ ಅಸಲಿ ಕಹಾನಿ ಏನು?

ಮೂರೇ ತಿಂಗಳಲ್ಲಿ ಬದುಕು ತುಟ್ಟಿ

ಮೂರೇ ತಿಂಗಳಲ್ಲಿ ಬದುಕು ತುಟ್ಟಿ

ಕೇಂದ್ರ ಬಜೆಟ್‌-ಭಾರತದ ನಗರಗಳಿಗೆ ನವಯುಗ

ಕೇಂದ್ರ ಬಜೆಟ್‌-ಭಾರತದ ನಗರಗಳಿಗೆ ನವಯುಗ

ಆರೆಸ್ಸೆಸ್‌-ಕ್ರೈಸ್ತ ಪ್ರತಿನಿಧಿ ಸಭೆ

ಆರೆಸ್ಸೆಸ್‌-ಕ್ರೈಸ್ತ ಪ್ರತಿನಿಧಿ ಸಭೆ

ಲಸಿಕೆ ನೋಂದಣಿ ಪ್ರಕ್ರಿಯೆ ಸರಳೀಕರಣವಾಗಬೇಕು

ಲಸಿಕೆ ನೋಂದಣಿ ಪ್ರಕ್ರಿಯೆ ಸರಳೀಕರಣವಾಗಬೇಕು

Untitled-1

ಸಂಸ್ಕೃತಿ; ಜೀವನಶೈಲಿ ನಿರ್ದೇಶಿಸುವ ಕಲೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೂರೇ ತಿಂಗಳಲ್ಲಿ ಬದುಕು ತುಟ್ಟಿ

ಮೂರೇ ತಿಂಗಳಲ್ಲಿ ಬದುಕು ತುಟ್ಟಿ

Untitled-1

ಸುಲಲಿತ ಜೀವನ ಸೂಚ್ಯಂಕ ಹೊಂದಿದ ದೇಶದ ನಗರಗಳ ಯಾದಿ : ಮಂಗಳೂರಿಗೆ 20ನೇ ಸ್ಥಾನ

ಕೃಷಿ ಇಲಾಖೆ ರಾಯಭಾರಿಯಾಗಿ ದರ್ಶನ್ ನಾಳೆ ಅಧಿಕಾರ ಸ್ವೀಕಾರ

Congress protest in chikkaballapura

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತಲಾ 10 ಕೆ.ಜಿ.ಅಕ್ಕಿ

narayan

ಮೆಘಾ ಫುಡ್ ಪಾರ್ಕ್ ಕಾಮಗಾರಿ ವಿಳಂಬ: ಸಚಿವ ಡಾ. ನಾರಾಯಣಗೌಡ ಗರಂ

MUST WATCH

udayavani youtube

ಸುಲಲಿತ ಜೀವನ ಸೂಚ್ಯಂಕ: ದೇಶದಲ್ಲಿ 20ನೇ ಸ್ಥಾನ ಪಡೆದ ಮಂಗಳೂರು

udayavani youtube

ಕೂದಲಿನ ಸಮಸ್ಯೆಗೂ ಪಿಸಿಓಡಿ ಗೂ ಏನು ಸಂಬಂಧ?

udayavani youtube

ಇಂದಿನ ಸುದ್ದಿ ಸಮಾಚಾರ | Udayavani 04-March-2021 News Bulletin | Udayavani

udayavani youtube

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

udayavani youtube

ಗದ್ದೆಗೆ ಉಪ್ಪುನೀರು ಹರಿದು ಬಂದು ಬೆಳೆಗಳು ನಾಶ! |Udayavani

ಹೊಸ ಸೇರ್ಪಡೆ

ಪ್ರಧಾನಿ ನಿವಾಸ ಸಂಪರ್ಕಕ್ಕೆ ಸುರಂಗ!

ಪ್ರಧಾನಿ ನಿವಾಸ ಸಂಪರ್ಕಕ್ಕೆ ಸುರಂಗ!

ವಿಭಜಿತ ಬಳ್ಳಾರಿ ಉಸ್ತುವಾರಿ ಯಾರಿಗೆ?

ವಿಭಜಿತ ಬಳ್ಳಾರಿ ಉಸ್ತುವಾರಿ ಯಾರಿಗೆ?

ಶಶಿಕಲಾರ ರಾಜಕೀಯ ನಿವೃತ್ತಿಯ ಅಸಲಿ ಕಹಾನಿ ಏನು?

ಶಶಿಕಲಾರ ರಾಜಕೀಯ ನಿವೃತ್ತಿಯ ಅಸಲಿ ಕಹಾನಿ ಏನು?

Untitled-1

ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾನಿಲಯ ಘಟನೆ ಮಣಿಪಾಲದ ರಶ್ಮಿ ಪರ ಶೋಭಾ ಟ್ವೀಟ್‌

ಕ್ವಾರ್ಟರ್‌ ಫೈನಲ್‌ಗೆ ಸಿಂಧು

ಕ್ವಾರ್ಟರ್‌ ಫೈನಲ್‌ಗೆ ಸಿಂಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.