ಎಸ್ಸೆಸ್ಸೆಲ್ಸಿ ಪರೀಕ್ಷೆ: ಮೊದಲ ದಿನ ಮೂವರು ಡಿಬಾರ್
Team Udayavani, Mar 31, 2017, 7:35 AM IST
ಬೆಂಗಳೂರು: ರಾಜ್ಯಾದ್ಯಂತ 2016-17ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಗುರುವಾರದಿಂದ ಆರಂಭಗೊಂಡಿದ್ದು, ಮೊದಲ ದಿನವೇ ಪರೀಕ್ಷಾ ಅಕ್ರಮ ನಡೆಸಿದ ಆರೋಪದ ಮೇಲೆ ಮೂವರು ವಿದ್ಯಾರ್ಥಿಧಿಗಳನ್ನು ಡಿಬಾರ್ ಮಾಡಲಾಗಿದೆ.
ಕನ್ನಡ, ಇಂಗ್ಲಿಷ್ ಸೇರಿದಂತೆ ಒಟ್ಟು ಎಂಟು ಭಾಷೆಗಳ ಪರೀಕ್ಷೆಗಳು ನಡೆದಿದ್ದು, ಪರೀಕ್ಷೆ ಅಕ್ರಮ ನಡೆಸಿದ ಆರೋಪದಡಿ ಬಳ್ಳಾರಿಯ
ಮೂವರು ಖಾಸಗಿ ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ ಎಂದು ಪ್ರೌಢ ಶಿಕ್ಷಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತಕ ಸಾಲಿನಲ್ಲಿ ರಾಜ್ಯದ ಸುಮಾರು 2770 ಪರೀಕ್ಷಾ ಕೇಂದ್ರಗಳಲ್ಲಿ ನಿಗದಿಯಾದಂತೆ ಬೆಳಗ್ಗೆ 9.15ರಿಂದ 9.30ರ
ಸಮಯದೊಳಗೆ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ಹಾಜರಾಗಿದ್ದು, 9.30ಕ್ಕೆ ಪರೀಕ್ಷೆ ಪ್ರಾರಂಭಧಿಗೊಂಡವು. ಈ ಬಾರಿ ಪರೀಕ್ಷಾ
ಕೊಠಡಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಗ್ರೇಸ್ ಟೈಮ್ ನೀಡುವುದಿಲ್ಲ ಎಂದಿದ್ದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಅಂತಿಮವಾಗಿ
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 15 ನಿಮಿಷಗಳ ಕಾಲ ವಿನಾಯಿತಿ ನೀಡಿತ್ತು. ಅಂತೆಯೇ ಬೆಳಗ್ಗೆ 9.45ರವರೆಗೆ ಕಾಲಾವಕಾಶವಿದ್ದರೂ, ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಪರೀಕ್ಷಾ ಕೊಠಡಿಯಲ್ಲಿ ಹಾಜರಿದ್ದು, ಪ್ರಥಮ ಭಾಷಾ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಮೊದಲ ದಿನ ಯಾವುದೇ ಪರೀಕ್ಷಾ ಕೇಂದ್ರಗಳಲ್ಲಿ ಅಹಿತಕರ ಘಟನೆ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 8,77,174 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಈ ಬಾರಿ ಪರೀಕ್ಷೆಗೆ ಗೈರು ಹಾಜರಾತಿ ಕಡಿಮೆ ಇತ್ತು. ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಪರೀಕ್ಷಾ ಕೇಂದ್ರಗಳು ಸೇರಿದಂತೆ ಎಲ್ಲೆಡೆ ಸೂಕ್ತ ಬಂದೋಬಸ್ತ್ ಮಾಡಲಾಗಿದ್ದು,
ಯಾವುದೇ ಅಹಿತಕರ ಘಟನೆ ಹಾಗೂ ಪರೀಕ್ಷಾ ಅಕ್ರಮ ನಡೆದಿಲ್ಲ ಎಂದು ಹೇಳಿದ್ದಾರೆ.
ಪೋಷಕರ ಅಸಮಾಧಾನ
ಪರೀಕ್ಷಾ ಪದ್ಧತಿ ಬಗ್ಗೆ ಕೆಲವೆಡೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದು, ಶಾಲೆಗಳಲ್ಲಿ ಕಳೆದ ಎರಡು ಮೂರು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಹಿಡಿದು ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸಲಾಗಿದೆ. ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆ ಕೊಟ್ಟಾಗ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಯಲ್ಲಿ ಮಾರ್ಗದರ್ಶನ ನೀಡಬೇಕಿತ್ತು. ಆದರೆ, ಯಾವುದೇ ಮಾಹಿತಿ ನೀಡದೆ, ಗೊಂದಲ ಸೃಷ್ಟಿಸಿದ್ದು ಸರಿಯಲ್ಲ. ಶಿಕ್ಷಕರು, ಹಿಂದಿನ ಮತ್ತು ಈಗಿನ ಪ್ರಶ್ನೆ ಪತ್ರಿಕೆಗಳ ವ್ಯತ್ಯಾಸ, ಉತ್ತರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡುವಲ್ಲಿ ಶಿಕ್ಷಕರು ಎಡವಿದ್ದು, ವಿದ್ಯಾರ್ಥಿಗಳ ಆರಂಭದಲ್ಲಿ ಗೊಂದಲಕ್ಕೊಳಗಾಗಿದ್ದಾರೆ ಎಂದು ಪರೀಕ್ಷಾ ಕೇಂದ್ರಗಳ ಬಳಿ ಅಸಮಾಧಾನ ವ್ಯಕ್ತಪಡಿಸಿದರು.
ಭದ್ರತೆ ಕುರಿತು ಪರಿಶೀಲನೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಯಶೋಧಾ ಬೋಪಣ್ಣ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಮಲ್ಲೇಶ್ವರಂ 13ನೇ ಕ್ರಾಸ್‌ನಲ್ಲಿರುವ ಸರ್ಕಾರಿ ಬಾಲಕಿಯರ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಪರೀಕ್ಷಾ ಕ್ರಮ, ಕೇಂದ್ರಗಳಿಗೆ ನೀಡಿರುವ ಭದ್ರತೆ ಕುರಿತು ಪರಿಶೀಲಿಸಿದರು. ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಪರೀಕ್ಷೆ ಯಾವುದೇ ಗೊಂದಲವಿಲ್ಲದೆ ನಡೆಯುತ್ತಿದೆ. ಇದುವರೆಗೂ ಎಲ್ಲೂ ಪರೀಕ್ಷಾ ಅಕ್ರಮಗಳಾದ ಕುರಿತು ಮಾಹಿತಿ ಬಂದಿಲ್ಲ. ಈ ಬಾರಿ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ಪ್ರತ್ಯೇಕವಾಗಿ ನೀಡಿದ್ದರೂ ವಿದ್ಯಾರ್ಥಿಗಳಲ್ಲಿ
ಯಾವುದೇ ಗೊಂದಲವಿಲ್ಲದೆ ಪರೀಕ್ಷೆ ಬರೆಯುತ್ತಿದ್ದಾರೆ. ಪ್ರಶ್ನೆ ಪತ್ರಿಕೆಯನ್ನು ಪ್ರತ್ಯೇಕವಾಗಿ ನೀಡುತ್ತಿರುವುದರಿಂದ ಪೋಷಕರು, ಮಕ್ಕಳು ಪರೀಕ್ಷೆಯಲ್ಲಿ ಹೇಗೆ ಬರೆದಿದ್ದಾರೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಲಿದೆ. ಜತೆಗೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಹಲವು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ನಿಗದಿತ
ಅವಧಿಯೊಳಗೆ ಎಲ್ಲಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ ತಲುಪಿಸಲಾಗಿದ್ದು, ನಿಗದಿಯಂತೆ 9.30ಕ್ಕೆ ಪರೀಕ್ಷೆ ಪ್ರಾರಂಭವಾಗಿದೆ ಎಂದು ತಿಳಿಸಿದರು.
ಕರ್ತವ್ಯ ನಿರತ ಶಿಕ್ಷಕ ಹೃದಯಾಘಾತದಿಂದ ಸಾವು
ಬಸವಕಲ್ಯಾಣ: ತಾಲೂಕಿನ ಕೋಹಿಧಿನೂರಧಿನಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತಾಲೂಕಿನ ಮಿರಖಲ್ ಗ್ರಾಮದ ಬಳಿರಾಮ್ ತುಳಸಿರಾಮ ಕಾರಾಗಿರ (49) ಮೃತ ಶಿಕ್ಷಕ. ತಾಲೂಕಿನ ಚಿಟ್ಟಾ (ಕೆ) ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದ ಇವರನ್ನು, ಎಸ್ಸೆಸ್ಸೆಲ್ಸಿ ಪರೀಕ್ಷೆ ನಿಮಿತ್ತ ಕೋಹಿನೂರ
ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕೊಠಡಿ ಮೇಲ್ವಿಚಾರಕರನ್ನಾಗಿ ನಿಯೋಜಿಸಲಾಗಿತ್ತು. ಪರೀಕ್ಷೆ ಆರಂಭವಾದ ಒಂದು ಗಂಟೆ ಬಳಿಕ ಹೃದಯಾಘಾತವಾಗಿ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದರು.
ಪ್ರಥಮ ಭಾಷೆಯಾಗಿ ಇಂಗ್ಲಿಷ್
ವಿಷಯದ ಪರೀಕ್ಷೆ ಬರೆದಿದ್ದೇನೆ. ಕಳೆದ ಎರಡು ವರ್ಷಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿದ್ದು, ಅವುಗಳಲ್ಲಿದ್ದ ಪ್ರಶ್ನೆಗಳೇ ಮರುಕಳಿಸಿವೆ. ಬಹುತೇಕ ಪ್ರಶ್ನೆಗಳು ಅಭ್ಯಾಸ ಮಾದರಿಯಲ್ಲಿದ್ದು, ಕೆಲವು ಸಾಮಾನ್ಯ ವಿಷಯದ ಪ್ರಶ್ನೆಗಳಾಗಿದ್ದು, ಪರೀಕ್ಷೆ ಸುಲಭವಿತ್ತು. ಆರ್.ವಿನಯ್‌ಕುಮಾರ್, ಕುವೆಂಪು ಆದರ್ಶ ಪಬ್ಲಿಕ್ ಸ್ಕೂಲ್, ಬೆಂಗಳೂರು ಪ್ರಶ್ನೆ ಪತ್ರಿಕೆ ಮತ್ತು ಉತ್ತರ
ಪತ್ರಿಕೆಗಳನ್ನು ಪ್ರತ್ಯೇಕವಾಗಿ ಕೊಟ್ಟಿದ್ದಾರೆ. ಮನೆಗೆ ಹೋಗಿ ನಾವು ಬರೆದಿರುವ ಉತ್ತರ ಸರಿಯೋ? ತಪ್ಪೋ ಎಂದು ಪರಿಶೀಲಿಸಲು ಸಹಕಾರಿಯಾಗಿದೆ. ಹಿಂದಿನ ಮಾದರಿಗಿಂತ ಈ ಬಾರಿ ಬರೆಯಲು ಸುಲಭ. ಕನ್ನಡ ಭಾಷಾ ಪತ್ರಿಕೆ ಉತ್ತಮವಾಗಿದ್ದು, ಶೇ.90ರಷ್ಟು ಅಂಕ ಪಡೆಯುವ ವಿಶ್ವಾಸವಿದೆ.
ಎಸ್.ರಚನಾ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಮಲ್ಲೇಶ್ವರಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸಪೇಟೆ : ಎಸ್‌ಸಿ, ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ಅರೆಬತ್ತಲೆ ಪತ್ರಿಭಟನೆ
ಪರಿಶಿಷ್ಟ ಜಾತಿ, ಪಂಗಡದ ಹಕ್ಕು ಕೇಂದ್ರ, ರಾಜ್ಯ ಸರ್ಕಾರ ಕಸಿಯುತ್ತಿದೆ : ಡಾ.ರಂಗನಾಥ್ ಆರೋಪ
ರಬಕವಿ-ಬನಹಟ್ಟಿಯಲ್ಲಿ ದಾಖಲೆಯ 10 ಸೆಂ.ಮೀ ಮಳೆ : 21 ಮನೆಗಳಿಗೆ ಹಾನಿ
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶಿಸಿದ ರಾಜ್ಯ ಸರಕಾರ
ಅಂಕೋಲಾ : ಭಾರಿ ಮಳೆಗೆ ಮೂರು ಸೇತುವೆ ಸಂಪೂರ್ಣ ಮುಳುಗಡೆ, ಗ್ರಾಮಗಳ ಸಂಪರ್ಕ ಕಡಿತ