ಮೇ ಮೊದಲ ವಾರ ಎಸೆಸೆಲ್ಸಿ ಫಲಿತಾಂಶ
Team Udayavani, Apr 22, 2018, 6:00 AM IST
ಬೆಂಗಳೂರು: ಎಸೆಸೆಲ್ಸಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ಸಮ ರೋಪಾದಿಯಲ್ಲಿದ್ದು, ಎ.23ರೊಳಗೆ ಪೂರ್ಣಗೊಳ್ಳಲಿದೆ. ನಿಗದಿತ, ಅಂದರೆ ಮೇ 7ಕ್ಕೂ ಮೊದಲೇ ಫಲಿತಾಂಶ ನೀಡುವ ಯತ್ನ ಸಾಗಿದೆ.
ಎ.6ಕ್ಕೆ ಎಸೆಸೆಲ್ಸಿ ಪರೀಕ್ಷೆ ಮುಗಿ ದಿದ್ದು, ಈಗಾಗಲೇ ಮೌಲ್ಯಮಾಪನ ಕಾರ್ಯವೂ ಪೂರ್ಣಗೊಳ್ಳಬೇಕಿತ್ತು. ಚುನಾವಣಾ ಕಾರ್ಯ ಹಾಗೂ ಸಿಇಟಿ ಪರೀಕ್ಷೆಯಿಂದ ಮೌಲ್ಯಮಾಪನ ಕಾರ್ಯ ಸ್ವಲ್ಪ ನಿಧಾನವಾಗಿದೆ. ಮುಂದಿನ ಮಂಗಳವಾರದೊಳಗೆ ಮೌಲ್ಯಮಾಪನ ಪೂರ್ಣಗೊಳ್ಳಲಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಲಾ ತಿಳಿಸಿದರು.
ಈಗಾಗಲೇ ತಿಳಿಸಿರುವಂತೆ ಎಸೆಸೆಲ್ಸಿ ಫಲಿತಾಂಶವನ್ನು ಮೇ 7ಕ್ಕೆ ಪ್ರಕಟಿಸಲಿದ್ದು, ಮೇ 8ಕ್ಕೆ ಶಾಲೆಗಳಿಗೆ ತಲುಪಿಸಲಿದ್ದೇವೆ. ಪ್ರಥಮ ಪಿಯುಸಿ ತರಗತಿ ಮೇ 14ಕ್ಕೆ ಆರಂಭವಾಗುವುದರಿಂದ ಮೇ 7ಕ್ಕೂ ಮೊದಲೇ ಎಸೆಸೆಲ್ಸಿ ಫಲಿತಾಂಶ ನೀಡುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದೇವೆ ಎಂದರು.